Sunday, 9 September 2012

ಸ್ವಯಂ ಸೇವುಕ್ರುನ ಏಳರು ಕೇಳರು ಯಾರೂ ಇಲ್ವಂತೆ!

ಯಣ್ಣ, ಯಡೂರಪ್ಪ ರಾಜ್ಯ ಯಲ್ಲಾನೂ ಸುತ್ತಿ ಪಕ್ಸ ಕಟ್ಟಕೆ ವಂಟವ್ನಂತೆ!
        ಊ ಮತ್ತೆ, ಯಲೆಕ್ಸನ್ನು ಅತ್ರ ಬತ್ತಾ ಅದಲ್ಲ ಅದ್ಕೆ ವಂಟಿರ್ತನೆ?
ಅದ್ಕೆ ಅಂತವ ಪೆಶೆಲ್ ಬಸ್ನೇ ಮಾಡ್ಸಿದ್ದನಂತೆ, ವಳ್ಳೆ ಅರಮನಿದ್ದಂಗದಂತೆ.
ದುಡ್ಡಿದ್ರೆ ಏನ್ ಬೇಕಾದ್ರೂ ಮಾಡಿಸ್ಕಬೌದು ಬುಡು. ಅವುಂತ ಏನು ವಸಿ ದುಡ್ಡಿದ್ದತೆ?
ಈಗ ರಾಜ್ಯ ಅದ್ಯಕ್ಸ ಸುಮ್ಕೆ ಅವ್ನೆ, ಮುಕ್ಯ ಮಂತ್ರೀನೂ ಸುಮ್ಕೆ ಅವ್ನೆ, ಯಡೂರಪ್ಪ ವಬ್ನೆ ಓದ್ರೆ ಯಂಗೆ? ಅವ್ರ ಪಕ್ಸದವ್ರು ಬುಟ್ಟರೆ?
ಬುಡ್ದೆ ಏನು ಬಸ್ಸಿನ್ ಮುಂದೆ ಬಂದು ಮನಿಕ್ಯಂಡರೆ? 
ಅಲ್ಲ ಕಣಣ್ಣ, ಅವ್ರ ಐ ಕಮಾಂಡು ಮಾಡಕೆ ಬುಟ್ಟತೆ?
ಅವ್ರ ಪಕ್ಸದಲ್ಲಿ ಇಗ ಐ ಕಮಾಂಡು ಲೋ ಕಮಾಂಡಾಗ್ಯದಂತೆ. ಸದ್ದಿಕೆ ಯಲ್ಲಾ ಕಮಾಂಡೂ ಯಡೂರಪ್ನತ್ರನೇ ಇದ್ದವಂತೆ!
ಅಂಗಾರೆ ಇವ್ನು ಏನ್ ಬೇಕಾದ್ರೂ ಮಾಡಬೌದು ಅನ್ನು?
ಊ ಮತ್ತೆ. ಓಗಿ ಓಗಿ ಅವ್ರು ಯಲ್ಲಾ ಸ್ವಯಂ ಸೇವುಕ್ರು. ಸ್ವಯಂ ಸೇವುಕ್ರಿಗೆ ಇದ ಮಾಡು, ಇದ ಮಾಡ್ ಬ್ಯಾಡ ಅನ್ನಂಗಿಲ್ಲ. ಅವ್ರಿಗೆ ಏನಿಷ್ಟನೋ ಅದ ಮಡದೆಯ. ಯಡೂರಪ್ನೂ ಸ್ವಯಂ ಸೇವಕ ಅಲ್ವೆ? ಇನ್ಯಾರ್ ಕೇಳ್ಬೇಕು ಏಳು?
ಇವ್ನು ವಬ್ನೇ ಇಂಗೋ, ಇವ್ರ ಕಡೇರ್ಯಲ್ಲಾ ಇಂಗೆಯೋ?
ಕಂಡು ಕೇಳಿ ಎಣ್ಣೋ, ಗಂಡೋ ಅಂತಿಯಲ್ಲಣ್ಣ ನೀನು! ಈ ಸ್ವಯಂ ಸೇವುಕ್ರು ಯಲ್ಲಾ ಇಂಗೆಯ.
ಬ್ಯಾರೇರು ಇಂಗೆ ಮಾಡಿದ್ದರೆ?
ನೀನು ಪೇಪ್ರು, ಟೀ.ವಿ ನೋಡದಿಲ್ವೇನೊ? ಅದ್ಕೆ ಇಂಗಾಗಿದ್ದಿ. ಒಂದ್ ಉದಾರ್ಣೆ ಏಳ್ತಿನಿ ಕೇಳು. ಮಂಗ್ಲೂರಲ್ಲಿ ಅದ್ಯಾರೋ ಉಡುಗ್ರು ಒಂದ್ ಓಟ್ಳಲಿ ಸೇರ್ಕಂಡು ಉಟ್ಟಿದ ಹಬ್ಬ ಮಾಡಿಕಂಡು ಯಾಪಿ ಬರ್ತ್ ಡೇ ಟು ಯೂ .. ಅಂತವ ಹಾಡ್ತಾ ಇದ್ರಂತೆ. ಈ ಸ್ವಯಂ ಸೇವುಕ್ರು ಅನ್ನರು ಅನಾಮತ್ತು ಓಗಿ ಯಲ್ಲರ್ನೂ ವಡ್ದು ಚಚ್ಚಿದ್ರಂತೆ.  ಪಾಪ ಆ ಉಡುಗ್ರು ಸತ್ವೋ ಕೆಟ್ವೋ ಅಂತ ಓಡಿದ್ವಂತೆ! ಕ್ವನಿಗೆ ಅದು ಟೀವಿಲಿ ಬಂದ ಮ್ಯಾಲೆ ಯಲ್ಲಾ ಸೇರಿಕಂಡು ಈ ಸ್ವಯಂ ಸೇವುಕ್ರಿಗೆ ಚನ್ನಾಗಿ ಬೈದ್ರಂತೆ. ಆದ್ರೂ ನಾವು ಮಾಡಿದ್ದೇ ಸರಿ ಅಂತರಂತೆ!
ಪೋಲೀಸ್ನರು ಅವ್ರುನ್ನ ಅರೆಸ್ಟ್ ಮಾಡ್ಲಿಲ್ವೆ?
ಮಾಡಕ್ಕೆ ಸರ್ಕಾರ ಅವ್ರದು. ಸುಮ್ನೆ ನಾಟ್ಕ ಆಡಿ ಮುಚ್ಚಾಕಿದ್ರು.
ನಾನು ಸ್ವಯಂ ಸೇವುಕ್ರು ಅಂದ್ರೆ ಚರಂಡಿ ಕ್ಲೀನ್ ಮಾಡದು, ಬಡುವ್ರಿಗೆ ಎಲ್ಪ್ ಮಾಡದು, ಕುಡ್ಯ ನೀರ್ಕೊಡದು, ಇಂತ ಕ್ಯಲ್ಸ ಮಾಡರು ಅನ್ಕಂಡಿದ್ದೆ. ಯಣ್ಣ ಅವ್ರು ಯಂಗಿದ್ದರು ನೋಡಕೆ?
ಆ ಅಸ್ಸಾಂ ಕಡೇರು ಯದ್ರಿಕಂಡು ಊರ್ಕಡಿಕೆ ವಂಟಿದ್ರಲ, ಆಗ ರೈಲ್ವೆ ಟೇಷನ್ನಲಿ ಕಾಕಿ ಚಡ್ಡಿ ಆಕ್ಯಂಡು ಒಂದು ಉಲ್ ಬಡ್ಯ ದ್ವಣ್ಣೆ ತರದ ದ್ವಣ್ಣೆ ಇಡ್ಕಂಡು ಓಡಾಡ್ತಿದ್ರಲ ನೋಡ್ಲಿಲ್ವೆ?
ನೋಡ್ದೆ.
ಅವ್ರೆ ಸ್ವಯಂ ಸೇವುಕ್ರು.
ಅಲ್ಯಾಕೋಗಿದ್ರು ಅಂತಿನಿ, ಕಳ್ಸಕೋಗಿದ್ರೆ?
ಇಲ್ಲ, ಓಗದಿರಿ ಸೋದರರೆ ಅಂತ ಆಡೇಳಕೋಗಿದ್ರಂತೆ, ಆದ್ರೆ ಅವ್ರಿಗೆ ಇವ್ರು ಏಳದು ಅರ್ತ ಆಗ್ಲಿಲ್ವಂತೆ. ಅವ್ರು ಸುಮ್ಕೆ ಓಯ್ತನೇ ಇದ್ರಂತೆ. ಅಂಗೆ ಎಲ್ಲರ ಏನಾರ ಆದ್ರೆ ಚಡ್ಡಿ ಆಕ್ಯಂಡು ದ್ವಣ್ಣೆ ಇಡ್ಕಂಡು ಅಲ್ಲಿ ಆಜರಾಯ್ತರೆ
ಯಾಕೊ ಇವ್ರ ಕಂಡ್ರೆ ಬಯ ಆಯ್ತದಪ್ಪ.
ನೀನ್ವಬ್ನೇ ಅಲ್ಲ, ಸುಮಾರ್ ಜನ ಇವ್ರ ಕಂಡ್ರೆ ಬಯ ಪಡ್ತಾ ಅವ್ರೆ. ಮಂಗ್ಲೂರಲಿ ಯಾರ್ಯಾರ ಉಡ್ಗ, ಉಡ್ಗಿ ಒಟ್ಟಿಗೆ ನಿಂತಿದ್ರೆ ಸಾಕಂತೆ, ಇವ್ರು ಓಗಿ ಇಡ್ದು ಚಚ್ ತರಂತೆ.
ಸದ್ಯ ನಾವು ಮಂಗ್ಳೂರ್ ಕಡಿಕೆ ಓಗದ ಬ್ಯಾಡ ಬುಡು.
ಅಲ್ಲೆ ಅಲ್ಲ. ಮನ್ನೆ ದಿನ ಮಂಡ್ಯದತ್ರ ರೈಲಲಿ ಪಾಪ ಯಾರೋ ಬಡಪಾಯಿಗಳು ಕೂಲಿ ಕ್ಯಲ್ಸುಕ್ಕೆ ಓಯ್ತಾ ಇದ್ರಂತೆ. ಈ ಸ್ವಯಂ ಸೇವುಕ್ರು ಕಡೆ ಉಡುಗ್ರು ವಡ್ದು ರಾತ್ರಿ ಯಲ್ಲಾ ಒಂದ್ ರೂಮಲಿ ಕೂಡಾಕಿದ್ರಂತೆ. ಪಾಪ ಅವ್ರಿಗೆ ಕನ್ನಡ ಬತ್ತಾ ಇತ್ತಿಲ್ವಂತೆ. ಅವ್ರು ಕಲ್ಕತ್ತದ್ ಕಡೇವ್ರಂತೆ. ಇವ್ರು ಯಾಕ್ವಡೀತವ್ರೆ ಅನ್ನದು ಗೊತ್ತಿಲ್ದೆ ಪಿಳಿ ಪಿಳಿ ಕಣ್ ಬುಡ್ತಾ ರಾತ್ರಿ ಯಲ್ಲಾ ಅನ್ನ ನೀರಿಲ್ದೆ ಕೂತಿದ್ವಂತೆ. ಅಮ್ಯಾಲೆ ಅದ್ಯಾರೋ ಪುಣ್ಯಾತ್ಮುರು ಬಂದು ಲೇ ಬುಡಿರ್ಲ ಸುಮ್ಕೆ ಅಂದ್ ಮ್ಯಾಲೆ ಬುಟ್ರಂತೆ.
ಅವ್ರೇನ್ ತಪ್ ಮಾಡಿದ್ರಂತೆ?
ಈ ಕಲ್ಕತ್ತದ್ ಕಡೇರು, ಬಂಗ್ಲಾದೇಸ್ದರು ಒಂದೇ ಬಾಸೆ ಮಾತಾಡದು. ನೋಡಕೂ ಅಂಗೇ ಕಾಣ್ತರೆ. ಈಗ ಹಾಸ್ನದವ್ರು, ತುಮ್ಕೂರಿನವ್ರು ನೋಡಕೆ ಒಂದೇ ತರ ಕಾಣದಿಲ್ವೆ? ಅಂಗೆ ಕಾಣ್ತಿದ್ರು. ಈ ಸ್ವಯಂ ಸೇವುಕ್ರು ಕಡೆ ಉಡುಗ್ರು ಇವ್ರು ಬಂಗ್ಲಾ ದೇಸದವ್ರು, ಏಳದೆ ಕೇಳ್ದೆ ನಮ್ ದೇಸುಕ್ಕೆ ಬಂದವ್ರೆ ಅಂತವ ವಡುದ್ರಂತೆ.
ಆಯ್ತು ಕಣಣ್ಣ, ಅಂಗೆ ಬಂದವ್ರೆ ಅನ್ಕೊ. ಅದ ಕೇಳಕೆ ಅಂತಲೆ ಪೋಲೀಸ್ನರಿಲ್ವೆ? ಅವ್ರಿಗೇಳದ ಬುಟ್ಟು ಇವ್ರೇ ವಡಿ ಬಡಿ ಅಂದ್ರೆ ತಪ್ಪಾಗದಿಲ್ವೆ?
ಸದ್ದಿಕೆ ಅವ್ರು ತಪ್ ಮಾಡಿದ್ರೂ ಸರಿ ಅನ್ನ ಜನ ಸರ್ಕಾರದಲ್ಲಿ ಅವ್ರೆ. ಇವ್ರುದೂ ನಡೀತಾ ಅದೆ. ಬ್ಯಾರೇರು ಬಂದ್ರೆ ಇಡ್ದು ವಳಿಕಾಕ್ತರೆ ಅಷ್ಟೆಯ. ಆಗ ಸುಮ್ಕಾಯ್ತರೆ.
ಒಟ್ನಲಿ ನೀನೇಳದ ನೋಡಿದ್ರೆ ಸ್ವಯಂ ಸೇವುಕ್ರು ಸಾವಾಸ ಸಾಕು ಅನುಸ್ತಾ ಅದೆ ಕಣಪ್ಪ.


--
E.Basavaraju
Mandara, 4th main, Rukmininagar
Nagasandra post,  Bangalore-560012
9448957666