ಯಡೂರಪ್ಪುಂಗೆ ಜಮೀನ್ ಬೇಕಂತೆ
ಯಣ್ಣ, ಯಡೂರಪ್ಪುಂಗೆ ಜಮೀನ್ ಬೇಕಂತೆ, ಕೊಟ್ಟಿಯ? ವಳ್ಳೆ ರೈಟ್ ಕೊಡ್ ಬೌದು
ಓಗಣ್ಣ, ಸದ್ದಿಕೆ ಸಿವವೊಗ್ಗದ ಸುತ್ತ ಯಡೂರಪ್ಪ, ಈಸ್ವುರಪ್ಪ ಸೇರಿಕಂಡು ಯಲ್ಲಾ ಜಮೀನ್ನೂ ತಗಂಡಿದ್ದರಂತೆ, ಇನ್ನೂ ಯಾಕಂತೆ ಜಮೀನು? ಜ್ವತಿಗೆ ನಮ್ ಅತ್ರ ಇರದು ತುಂಡು ಬೂಮಿ, ಅವ್ನಿಗೆ ಎಲ್ಲಿ ಸಾಕದತು ಇದು?
ಮತ್ತೆ ಪೇಪ್ರಲೇ ಆಕ್ಸವ್ನಪ್ಪ.
ಯಾವತ್ತು ನೋಡಿದೆ ನೀನು? ನಂಗೆ ಕಾಣದೇ ಇರದು ನಿಂಗೆ ಯಂಗಪ್ಪ ಕಂಡತು?
ನೀನು ಸರಿಯಾಗಿ ನೋಡು, ಯಡೂರಪ್ಪ ಜಮೀನಿಗಾಗಿ ಕೋರ್ಟಿಗೆ ಅರ್ಜಿ ಆಕ್ಯವ್ನೆ ಅಂತ ಅದೆ.
ಓ! ನೀನ್ವಬ್ಬ ಯಡ್ಡ, ಅವ್ನು ವಬ್ಬ ಯಡ್ಡಿ. ನೀನು ಕನ್ನಡವ ಎಲ್ಲಿ ಕಲ್ತೆ ಏಳು ನೋಡನ?
ಯಾಕಣ್ಣ, ನಂಗೆ ಈತರ ಅವ್ ಮಾನ ಮಾಡ್ತಿಯ, ಯಾರದೋ ವಿಸ್ಯ ತಗಂಡು ನಂಗೆ ಅವ್ ಮಾನ ಮಾಡಂಗಿದ್ರೆ ನಾನು ಸುಮ್ಕಿರದಿಲ್ಲ.
ಆಯ್ತು, ಬೇಜಾರ್ ಮಾಡ್ಕಬ್ಯಾಡ, ಏಳ್ತಿನಿ ಕೇಳು, ನೀನು ಓದಿರದು ಜಮೀನಲ್ಲ ಕಣಣ್ಣ, ಅದು ಜಾಮೀನು ಅಂತವ.
ಜಾಮೀನು ಅಂದ್ರೆ ಸ್ಪೀಟ್ ಮಾಡ್ತರಲ ಅದೆ? ಅದ ಕೋರ್ಟಿಗ್ಯಾಕೆ ಕೇಳಕೋದ, ಯಾರ್ನಾರ ಅಬಿಮಾನಿಗಳ ಕೇಳಿದ್ರೆ ಮಾಡಿಕೊಡರಪ್ಪ, ಜ್ವತಿಗೆ ಅವ್ನಿಗೆ ಸುಗರ್ ಅಯ್ತಂತೆ!
ನಾನು ಇನ್ನ ಸುಮ್ಕಿರಕೆ ಆಗದಿಲ್ಲ, ನಿಂಗೆ ಅರ್ತ ಆಗಂಗೆ ಏಳ್ತಿನಿ, ಜಾಮೀನು ಅಂದ್ರೆ ಪೋಲೀಸ್ನೋರು ಅರೆಸ್ಟ್ ಮಾಡ್ತರಲ, ಅದ ತಪ್ಪಿಸ್ಕಳಕೆ ಕೋರ್ಟಲಿ ಅರ್ಜಿ ಆಕಿ ಅರೆಸ್ಟ್ ಆಗದ ತಪ್ಪಿಸ್ಕಳದ್ಕೆ ಜಾಮೀನು ಅಂತರೆ.
ಓ.. ನಂಗೇನ್ ಅರ್ತ ಆಗ್ಬೇಕು ಏಳಣ್ಣ? ಮತ್ತೆ ದಿನಾ ಅದೇ ಪೇಪ್ರಲಿ ಬತ್ತಾ ಅದಲ್ಲ?ಅದು ಸಿಕ್ಕದು ಅಷ್ಟೊಂದು ಕಷ್ಟವೆ?
ದಿನಾ ಬತ್ತಾ ಅದೆ ಅನ್ನದೂ ನಿಜ ಕಣಣ್ಣ. ಒಂದ್ ಕೇಸಲಿ ಜಾಮೀನು ಸಿಕ್ಕಿದ್ರೆ ಇನ್ನೊಂದ್ ಕೇಸ್ ಸುರು ಆಯ್ತದೆ, ಅದ್ಕೆ ಜಾಮೀನು ಸಿಕ್ಕಿದ್ರೆ ಇನ್ನೊಂದು ಸುರು ಆಯ್ತದೆ, ಜ್ವತಿಗೆ ಇಂತ ಕೇಸಲಿ ಜಾಮೀನು ಸಿಕ್ಕದು ಅಷ್ಟು ಸುಲ್ಬ ಅಲ್ಲ. ಅಂಗಾಗಿ ಎಲ್ಲಿ ಅರೆಸ್ಟ್ ಮಾಡಿಬುಡ್ತರೋ ಅಂತವ ದಿನಾ
ಜಾಮೀನಿಗೆ ಅರ್ಜಿ ಆಕ್ತಾ ಅವ್ನೆ.
ಅದ್ಯಾಕಿಂಗ್ ಮಾಡಿಕಂಡ ಅಂತಿನಿ?
ಯಲ್ಲ ಜಮಿನಿಗಾಗಿ, ಜಮೀನ ಮಾಡಿಕಳ್ಳಕೋಗಿ ಈಗ ಜಾಮೀನಿಗೆ ಅಲಿಯಂಗಾಗ್ಯದೆ.
ವಳ್ಳೆ ಜಮೀನು, ಜಾಮೀನು ಅಂತ ನನ್ ತಲೆ ತಿನ್ನಕೆ ಸುರು ಮಾಡಿಬುಟ್ಟೆ ಕಣಣ್ಣ ನೀನು, ನಿನ್ನ ಏನೂ ಕೇಳದೇ ಬ್ಯಾಡ ಅಂತ ಅನುಸ್ತಾ ಅದೆ.
ಅಂಗಲ್ಲ ಕಣಣ್ಣ, ಗೊತ್ತಿಲ್ದೇ ಇರದ ತಿಳ್ಳಳದ್ರಲಿ ಏನೂ ತಪ್ಪಿಲ್ಲ. ನಾನೂ ಏಳ್ತಾ ಇರದು, ಯಡೂರಪ್ಪ ಸಿಕ್ಕಾಬಟ್ಟೆ ಜಮೀನ ಮಾಡಕೋಗಿ, ಸಿಗಾಯ್ಕಂಡು ಈಗ ಜಾಮೀನಿಗೆ ಓಡಾಡ್ತಾ ಅವ್ನೆ ಅಷ್ಟೆಯ.