ಯಣ್ಣ, ನಿತ್ಯಾನಂದನಿಗೆ ಬೇಲ್ ಸಿಕ್ತಂತೆ!
ಏನಣ್ಣ, ಬೇಲು, ಮಸಾಲೆ ಇದ್ಯಲ್ಲಾನು "ದೊಡ್ಡಸುದ್ದಿ" ಅಂತ ಏಳಕೆ ಬಂದಿದ್ದಿಯಲ, ನಿಂಗೆ ಇನ್ನೇನೂ ಕ್ಯಲ್ಸ ಇಲ್ವೆ
ಯಣ್ಣ, ನಿಂಗೆ ಸ್ವಲ್ಪ ತಿಳ್ವಳ್ಕೆ ಕಡ್ಮೆ ಅನ್ನದು ಇದ್ಕೆಯ, ಬೇಲು ಅಂದ್ರೆ ಬೇಲ್ ಪುರಿ ಅಲ್ಲ, ಬೇಲು ಅಂದ್ರೆ ಜೈಲಿಗೋಗದ ತಪ್ಪಿಸ್ಕಳಕೆ ಕೋರ್ಟಿಂದ ಪರ್ಮಿಷನ್ ತರದು. ಯಡ್ಯೂರಪ್ಪ ಇಂತದೊಂದ್ ಬೇಲ್ ಸಿಕ್ಲಿಲ್ಲ ಅಂತವ ಪಾಪ ಸ್ವರಗಿ ಓಗ್ಯವ್ನೆ, ಗೊತ್ತಿದ್ದತೆ ನಿಂಗೆ?
ಆಯ್ತು, ನಮ್ ನಿತ್ಯಾನಂದ ವಳ್ಳೆ ಉಡ್ಗ, ಸ್ಕೂಲಿಗೋಗಿ ಪಾಟ ಮಾಡ್ತಾ ಅವ್ನೆ, ಅವ್ನು ಯಾಕೆ ಜೈಲಿಗೋಗಂಗೆ ಮಾಡ್ಕಂಡಿದ್ದನು?
ಯಣ್ಣ, ನೀನೆಲ್ಲಿದ್ದಿ ಅಂತವ? ನಿತ್ಯಾನಂದ ಅಂತ ಎಷ್ಟೇ ಜನ ಇರ್ಬೌದು, ಆದ್ರೆ ಸದ್ದಿಕೆ ನಿತ್ಯಾನಂದ ಅಂದ್ರೆ ನಿತ್ಯಾನಂದಸ್ವಾಮಿ ಅಂತವ!
ಓ.. ನಿಂಗೆ ಎದ್ದು ಬಿದ್ದೂ ಅವ್ನ ಸುದ್ದಿ ಬುಟ್ರೆ ಇನ್ನೇನೂ ಸುದ್ದೀನೇ ಇಲ್ಲ ಅನ್ನು? ನೀನೇನಾರ ಟಿ.ವಿ ಚಾನಲ್ ಓಪನ್ ಮಾಡಕೆ ಐಡ್ಯ ಮಾಡಿದ್ದೀಯ?
ನಿಂದ್ವಲ್ಳೆ ಪ್ರಾಬ್ಲಮ್ಮಾಯ್ತಪ್ಪ, ಇನ್ನೇನ್ ಮಾತಾಡನೇಳು?
ಮಾತಾಡಕೆ ವಳ್ಳೆ ವಿಸ್ಯ ಅದೆ, ನೀನು ಯೋಚ್ನೆ ಮಾಡ್ತಾ ಇಲ್ಲ ಅಷ್ಟೆಯ. ಇನ್ನೊಂದ್ ಯಲೆಕ್ಷನ್ನು ಬತ್ತಾ ಐತೆ, ಅದ್ರ ಬಗ್ಗೆ ಯೋಚ್ನೆ ಮಾಡು!
ನೀನೇಳದೂ ಸರಿ ಅನುಸ್ತಾ ಅದೆ. ಯಾಕೋ ನಾಲಿಗೆ ಕೆಟ್ಟೋಗಿತ್ತು, ಆಗಾಗ್ಗೆ ಯಲೆಕ್ಷನ್ನು ಬತ್ತಾ ಇದ್ರೆ ಸಲ್ಪ ನಾಲಿಗೆ ತಂಪು ಮಾಡ್ಕಬೌದು.
ನೀನು ಯಲೆಕ್ಷನ್ನು ಅಂತಿದ್ದಂಗೆ ಅದ್ನೇ ಯೋಚ್ನೆ ಮಾಡ್ತಿಯಪ್ಪ. ಈಗ ಬಂದಿರ ಯಲೆಕ್ಷನ್ನು ಅಂತದ್ದಲ್ಲ, ನಾನು, ನೀನು ಓಟಾಕಂಗಿಲ್ಲ. ಯಮ್ಮೆಲ್ಲೆ, ಎಮ್ಮೆಲ್ಸಿಗಳು, ಎಂ.ಪಿ ಗಳು ಮಾತ್ರ ಓಟಾಕದು.
ಯಾರೇ ಓಟಾಕ್ಲಿ, ನಮ್ಮಂತೋರಿಗೆ ಏನಾರ ಸಿಕ್ಕಿದ್ರೆ ಸಾಕಪ್ಪ. ಈಗ್ಲೆ ನೋಡು! ಓದ್ವಾರ ಬಿ.ಎ ಓದಿರೋರು ಮಾತ್ರ ಒಟಾಕದು ಅಂದ್ರೂ ನಮಿಗೂ ಸಲ್ಪ ಸಿಕ್ತಪ್ಪ, ಅದ್ಕೆ ಅಂಗಂದೆ.
ಯಣ್ಣ, ಇದು ರಾಷ್ಟ್ರಪತಿ ಯಲೆಕ್ಷನ್ನು. ಇದು ಬ್ಯಾರೆ ಯಲೆಕ್ಷನ್ನಂಗಲ್ಲ, ಯಾರು ಜಾಸ್ತಿ ಎಂ.ಪಿ, ಯಮ್ಮೆಲ್ಲೆಗಳ ಮಡಿಕ್ಯಂಡಿದ್ದರೋ, ಅವ್ರು ನಿಲ್ಸಿರ ಕ್ಯಾಂಡಿಡೇಟೇ ಗೆಲ್ಲದು. ಅಮ್ಮಮ್ಮಾ ಅಂದ್ರೆ ಯಮ್ಮೆಲ್ಲೆಗಳಿಗೆ ಏನಾರ ಸಿಕ್ಕಿದ್ರು ಸಿಕ್ಬೌದು ಅಷ್ಟೆಯ.
ಇತ್ತಿತ್ಲಾಗೆ ಯಮ್ಮೆಲ್ಲೆಗಳಿಗೆ ಗುರುಬಲ ಜಾಸ್ತಿ ಆಗಿರಂಗದೆ. ನಮಿಗೆ ಕೈಮುಗ್ದು, ಅಡ್ಡಬಿದ್ದು ಐದು ವರ್ಸಕ್ಕೊಂದ್ ಸತಿ ಓಟಾಕಿಸ್ಕತರೆ. ಅವ್ರು ಮಾತ್ರ ಆಗಾಗ್ಗೆ ತಗತನೇ ಇರ್ತರೆ.
ಓಗ್ಲಿ, ನೀನು ಓಟಾಕಂಗಿದ್ರೆ ರಾಷ್ಟ್ರಪತಿ ಸೀಟಿಗೆ ಯಾರಿಗೆ ಓಟಾಕ್ತಾ ಇದ್ದೆ?
ಯಾರು ಅಂತ ಏಳ್ಳಿ, ಜೋರಾಗಿ ಮಾತಾಡ ಜನ ಸಿಗದೇ ಕಷ್ಟ ಆಗ್ಯದೆ. ದಾಸತ್ಗಾರ ಬರ್ಬೇಕು. ಕೆ.ಆರ್.ನಾರಾಯಣ ಇದ್ರಲ ಅಂಗಿರ್ಬೇಕಪ್ಪ. ಈಗಿದ್ರಲ ಪ್ರತಿಬಾಪಾಟೀಲು, ಅವ್ರು ಇದ್ದುದ್ದೇ ಗೊತ್ತಾಗ್ಲಿಲ್ಲಪ್ಪ. ಬರೀ ಪಾರಿನ್ನಲೇ ಇದ್ರಂತೆ.
ಈಗ ನಾರಾಯಣ ಅನ್ನರು ಇಲ್ವಲ, ಇನ್ಯಾರಿಗೆ ಆಕ್ತಿದ್ದೆ ಏಳಣ್ಣ.
ಕ್ಯಲುವ್ರು ಮನವೋಹನಸಿಂಗ್ ಅಂತರೆ. ಆ ವಯ್ಯ ಪಾಪ ಎದ್ರೆ ಕೂತ್ಕಳಕಾಗದಿಲ್ಲ. ಕೂತ್ರೆ ಏಳಕ್ಕಾಗದಿಲ್ಲ. ಕ್ಯಲುವ್ರು ಅಬ್ದುಲ್ ಕಲಾಂ ಅಂತರೆ. ಆ ವಯ್ಯ ಮಕ್ಳಿಗೆ ಪಾಟ ಮಾಡದ್ಕೆ ಪರ್ವಾಗಿಲ್ಲ ಅನುಸ್ತದೆ. ದಾಸತ್ಕಾರ ಅಂದ್ರೆ ಲೋಕ್ ಸಬೆ ಅದ್ಯಕ್ಷ ಆಗಿದ್ನಲ ಸೋಮನಾತ ಚಟರ್ಜಿ ಅಂತವ, ಆ ವಯ್ಯ ಆದ್ರೆ ಪರ್ವಾಗಿಲ್ಲ. ನಾನು ಅಕಂಗಿದ್ರೆ ಅವ್ನಿಗೇ ಆಕ್ತಾ ಇದ್ದೆ. ಆದ್ರೆ ಅದ ನಾನು-ನೀನು ಓಟಾಕಂಗಿಲ್ಲ, ಅದೇನಾದತು ನೋಡನ ಬುಡು.
ಈಗ ಸದ್ದಿಕೆ ಇಂಗ್ ನಡೀಲಿ. ಮುಂದೆ ನಾವ್ಯಲ್ಲ ಓಟಾಕಂಗೆ ಕಾನೂನು ಮಾಡಿ ಅಂತ ಕೇಳನ ಬುಡು.
No comments:
Post a Comment