ಹಾಲಿಕೆ ಇಷ್ಟ ಮಾಜಿಗೆ ಕಷ್ಟ
ಯಣ್ಣ, ಹಾಲಿಗೆ ಇಷ್ಟ, ಮಾಜಿಗೆ ಕಷ್ಟ, ಏನೇಳು?
ಓ.. ಈಗ ನೀನು ವಗಟು ಹಾಕಕೆ ಸುರು ಮಾಡಿದ್ದೀಯ ಅನ್ನು. ಮದ್ಲು ಹಾಲಿ-ಮಾಜಿ ಯಾರ್ಯಾರೇಳು, ಅಮ್ಯಾಲೆ ಇಷ್ಟ, ಕಷ್ಟದ ಬಗ್ಗೆ ಏಳ್ತೀನಿ.
ಇನ್ಯಾರಣ್ಣ? ಹಾಲಿ-ಮಾಜಿ ಮುಖ್ಯ ಮಂತ್ರಿಗಳು. ಈಗೇಳು?
ಇಷ್ಟ, ಕಷ್ಟ ಅಂದ್ರೆ ಸಿ.ಬಿ.ಐ ತನಿಕೆ ಇರ್ಬೇಕು.
ನನ್ ಮನಸ್ಸಿನಲ್ಲಿ ಇದ್ದುದ್ದೇ ಬ್ಯಾರೆ, ನೀನು ಏಳಿದ್ದೇ ಬ್ಯಾರೆ, ಆದ್ರೂ ಸಿ.ಬಿ.ಐ ಅಂತ ಯಂಗೇಳ್ದೆ ಏಳು ನೋಡನ?
ಇನ್ನೇನು ಸಿ.ಬಿ.ಐ ತನಿಕೆ ಆದಂಗೆ ಯಡ್ಯೂರಪ್ಪನ ಗಮ್ನ ಮುಕ್ಯಮಂತ್ರಿ ಕುರ್ಚಿ ಬುಟ್ಟು ಬ್ಯಾರೆ ಕಡಿಕೆ ಓಯ್ತದೆ, ಆಗ ಸುಕವಾಗಿ ಕುರ್ಚಿ ಮ್ಯಾಲೆ ಕೂತ್ಕಬೌದು ಅಂತ ಹಾಲಿ ಮುಕ್ಯಮಂತ್ರಿ ಅನ್ಕಬೌದು.
ಓ.. ಅದೂ ಒಂತರ ಸರ್ಯಾಗೇ ಅದೆ ಅನುಸ್ತಾ ಅದೆ. ಆದ್ರೆ ನಾನು ಏಳಿದ್ದು ಜೈಲು!!
ಏನು! ಹಾಲಿ ಮುಕ್ಯಮಂತ್ರಿಗಳಿಗೆ ಜೈಲು ಅಂದ್ರೆ ಇಷ್ಟ ಅಂತೆ?
ಹೌದು ಕಣಣ್ಣ. ನಾನು ಜೈಲಿಗೂ ಓಗಕೆ ಸಿದ್ದನಾಗಿದ್ದೀನಿ, ಯಾರಾದ್ರೂ ಆಕ್ಸಿ ಅಂತ ಏಳ್ಯವ್ನೆ.
ಯಾಕೆ, ಯಾವ್ದಾದ್ರೂ ಕೇಸಲ್ಲಿ ಸಿಗಾಯ್ಕಂಡಿದ್ದನೆ?
ಸಿಗಾಯ್ಕಳಕೆ ಇವ್ನು ಯಾವುದಾದ್ರು ಫೈಲಿಗೆ ಸೈನ್ ಆಕಿದ್ರಲ್ವೆ? ಯಾರಾರ ಸ್ವಾಮಿ ಇದೊಂದ್ ಕ್ಯಲ್ಸ ಮಾಡಿಕೊಡಿ ಅಂತ ಓದ್ರೆ ಓ.. ಇದು ಸದ್ಯ ಆಗದಿಲ್ಲ ಮಾರಾಯ್ರೆ, ದಯವಿಟ್ಟು ಓಗಿ ಬನ್ನಿ ಅಂತ ಹಲ್ ಬುಡ್ತನಂತೆ. ಅದೇ ಯಡೂರಪ್ಪ ಯಾರ್ಯಾರ ಅವ್ರ ಕಡೆಯವ್ರು ಓದ್ರೆ ಅದಿಕಾರಿಗಳ್ನ ಕರ್ದು ರೀ.. ಇದ ಮಾಡ್ರಿ ಅನ್ನನಂತೆ. ಮಾಡಕೆ ಆಗದಿಲ್ಲ ಅಂದ್ರೆ ರೀ.. ಈ ಕ್ಯಲ್ಸ ಮಾಡಿಕೊಡಕೆ ಆಗದಿಲ್ಲ ಅಂದ್ರೆ ನಾನ್ಯಾಕಿಲ್ಲಿ ಕೂತ್ಕಬೇಕು, ಮಾಡ್ರಿ ಅಂತ ದಬಾಯ್ಸಿ ಮಾಡ್ಸನಂತೆ. ಅಂಗಾಗಿ ಅವ್ನು ಸಿಗಾಯ್ಕಂಡ. ಫೈಲಿಗೆ ಸೈನ್ ಆಕದೇ ಇರ ಸದಾನಂದಗೌಡ ಜೈಲಿಗೆಲ್ಲಿ ಓಯ್ತನೆ? ಸುಮ್ಕೆ ಜೈಲಿಗೋಯ್ತಿನಿ ಅಂದವ್ನೆ ಅಷ್ಟೆಯ.
ಅಂಗಂತ ಏಳಿರದ್ಕೆ ಯಳ್ಡ್ ಮೂರು ಅರ್ತ ಇರ್ತದೆ. ಸದಾನಂದಗೌಡ ಜೈಲಿಗೋಗಕೆ ಯಾಕಿಷ್ಟಪಟ್ಟನು, ಯಡೂರಪ್ಪ ಜೈಲಿಗೋಗದ ತಪ್ಪಿಸ್ಕಳಕೆ ಪಡಬಾರದ ಪಾಡು ಪಡ್ತಾ ಇರದ ನೋಡಿ ಅವ್ನ ಅಣಕಿಸ್ಕಳಕೆ ನಾನು ಜೈಲಿಗೋಕೆ ಸಿದ್ದ ಅಂತ ಅಂದಿರ್ತನೆ. ಜೈಲಿಗೋಗ ಪರಿಸ್ತಿತಿ ನಿಜವಾಗ್ಲೂ ಬಂದ್ರೆ ಅವ್ನೂ ಯದ್ರಿಕತ್ತನೆ.
ಯಣ್ಣ, ಸದಾನಂದಗೌಡ ಜೈಲಿಗೋಯ್ತಿನಿ ಅಂತ ಏಳಕೆ ಇನ್ನೊಂದು ಕಾರ್ಣ ಇರಬೌದು ಅನುಸ್ತದೆ.
ಅದೇನಣ್ಣ.
ನಿತ್ಯಾನಂದ!!
ಓಗಿ ಬಂದು ಅದೇನೋ ಮಾಡಿದ್ರು ಅನ್ನಂಗೆ ನೀನು ತಿರ್ಗ ನಿತ್ಯಾನಂದನ್ನ ಯಸ್ರು ಏಳ್ತಾ ಇದ್ದಿಯಲ ಯಾಕಣ್ಣ.
ನೋಡು ನಿತ್ಯಾನಂದ ಜೈಲಿಗೆ ನಗ್ತಾ ಓಯ್ತನ, ನಗ್ತಾ ಬತ್ತನೆ, ನಮ್ ಸದಾನಂದಗೌಡ್ನೂ ಯಾವಾಗ್ಲೂ ನಗ್ತನೇ ಇರ್ತನೆ. ಅಂಗಾಗಿ ಏನಾರ ಜೈಲಿಗೋಗ ಆಸೆ ಬಂದಿರಬೌದೇನೋ?
ಅದೇನೂ ಇಲ್ಲ, ಜೈಲಿಗೋದ್ರೆ ಜನರ ಬೆಂಬಲ ಜಾಸ್ತಿ ಸಿಕ್ತದೆ ಅಂತವ ಅನ್ಕಂಡಿರಬೌದು. ಯಾಕೆ ಅಂದ್ರೆ ಆಂದ್ರದಲ್ಲಿ ನೋಡು, ಜಗಣ್ಣ ಅನ್ನನು ಜೈಲಿಗೋಗಿ ಅವ್ರ ಕಡೇವ್ರೆಲ್ಲ ಗೆದ್ರಂತೆ. ಅದ್ಕೇನಾದ್ರೂ ಸದಾನಂದ ಗೌಡ ಅಂಗಂದಿರ್ ಬೌದು.
ಜೈಲಿಗೋದೋರ್ಯಲ್ಲಾ ಅಂಗಾಗಿಲ್ಲ, ಕ್ಯಲುವ್ರು ಜೈಲಿಗೋಗಿ ಆಚಿಗೆ ಬರದ್ಯಂಗಪ್ಪ ಅಂತ ಕ್ವರುಗ್ತಾ ಅವ್ರಂತೆ.
ಅಂಗಾರೆ ಇದು ಬರಿ ಪ್ರಚಾರಕ್ಕಿರಬೌದು ಬುಡು.
ಯಡೂರಪ್ನೂ ಪಾಪ, ಒಂದ್ಸತಿ ಜೈಲಿಂದ ಬಂದ್ ಮ್ಯಾಲೆ ನಾನು ಇನ್ನೂ ಅನೇಕ ಸಾರಿ ಜೈಲಿಗೆ ಓಗಕೆ ಸಿದ್ದ ಅಂದಿದ್ದ. ಈಗ ಜೈಲು ಅಂದ್ರೆ ಗಡ ಗಡ ಆಗ್ಯದಂತೆ. ಒಟ್ನಲಿ ವಬು ಜೈಲಿಗೋಗದು ಇನ್ವಬ್ರಿಗೆ ಎಲ್ಪಾಯ್ತದೆ ಅನ್ನದು ಮಾತ್ರ ನಿಜ. ನಡಿ, ನಾವಂತೂ ಜೈಲು ಕಡಿಕೆ ಮಕ ಆಕದು ಬ್ಯಾಡ.
No comments:
Post a Comment