ಸದಾನಂದಗೌಡ ಜಿಮ್ ಗೆ ಓಯ್ತನಂತೆ
ಯಣ್ಣ, ಸದಾನಂದಗೌಡ ಜಿಮ್ ಗೆ ಓಯ್ತನಂತೆ, ಅಂಥಾ ಪೈಲ್ವಾನ್ನೆ ಅವ್ನು?
ಅವ್ನು ನೋಡಕೆ ಕಡ್ಡಿ ಪೈಲ್ವಾನ ಕಂಡಂಗೆ ಕಾಣ್ತನೆ, ಜ್ವತಿಗೆ ಕ್ಯಲ್ಸನೇ ಜಾಸ್ತಿ ಅಯ್ತದೆ, ಅಂತದ್ರಲಿ ಜಿಮ್ ಮಾಡಕೆಲ್ಲಿ ಓದನು?
ಮತ್ತೆ ನೋಡನ ಅಂತವ ಅವ್ರ ಆಪೀಸ್ ಗೆ ಓಗಿದ್ದೆ, ಸಾಯಾಬ್ರು ಜಿಮ್ ಗೋಗ್ಯವ್ರೆ, ಈಗ ಸಿಕ್ಕದಿಲ್ಲ ಅಂತ ಏಳಿದ್ರು. ಅದ್ಕೆ ಅಂಗೆ ಅಂದೆ.
ಲೇ, ನೀನು ಏನಂತ ಇದ್ದಿ ಅಂತ ಈಗ ಅರ್ತ ಆಯ್ತು. ಅದು ಜಿಮ್ ಅಂದ್ರೆ ವ್ಯಾಯಾಮ ಅನ್ಕಂಡಿದ್ದೀಯ ನೀನು?
ಊ ಕಣಣ್ಣ.
ನೀನು ದಡ್ಡ. ಜಿಮ್ ಅಂದ್ರೆ ವ್ಯಾಯಾಮ ಅಂತಲೂ ಆಯ್ತದೆ. ಆದ್ರೆ ಸದಾನಂದಗೌಡ ಓಗಿದ್ದು ಗ್ಲೋಬಲ್ ಇನ್ ವೆಸ್ಟರ್ಸ್ ಮೀಟ್ ಅಂತವ. ಅದ್ಕೆ ಜಿಮ್ ಅಂತರೆ.
ನೀನೇನೊ ಇಂಗ್ಲೀಸ್ ಕಲ್ತುಕಂಡು ಅದೇನೋ ಏಳ್ತಿಯ, ನಂಗೆ ಅರ್ತ ಆಗಂಗೆ ಏಳಣ್ಣ.
ಅಂಗಂದ್ರೆ, ಪ್ರಪಂಚದಲ್ಲಿರೋ ಸ್ರೀಮಂತ್ರ ಕರ್ದು, ಊಟ, ತಿಂಡಿ, ಕಾಪಿ ಕೊಟ್ಟು, ನೀವು ನಮ್ ರಾಜ್ಯದಲ್ಲಿ ಬಂಡ್ವಾಳ ಹಾಕಿ ಅಂತ ಬೇಡಿಕಳ್ಳದು.
ನಾವು ಡಿಂಕದ ಮಾರಮ್ಮುನ ವಳ್ಳೇದ್ ಮಾಡವ್ವ ಅಂತವ ಬೇಡಿಕಳ್ತಿವಲ್ಲ ಅಂಗ?
ಒಂತರ ಅಂಗೆಯ ಅನ್ನು. ಸ್ವಾಮಿ, ನೀವು ನಮ್ ರಾಜ್ಯದಲ್ಲಿ ಎಲ್ಲಿ ಬೇಕಾದ್ರು ಪ್ಯಾಕ್ಟ್ರಿ ಹಾಕಿ, ನಾವು ಜಮೀನ್ ಕೊಡ್ತಿವಿ, ನೀರ್ ಕೊಡ್ತಿವಿ, ಕರೆಂಟ್ ಕೊಡ್ತಿವಿ, ನೀವು ಸುಂಕ-ಗಿಂಕ ಕೊಡಬೇಕಾಗಿಲ್ಲ ಅಂತವ ಇವ್ರು ಸದಾನಂದಗೌಡ ಬೇಡಿಕತ್ತನೆ. ಆಗ ಅವ್ರು ನಮ್ಗೆ ಇಂತಿಂತ ಕಡೆ ಜಮೀನ್ ಕೊಡಿ, ನಾವು ಇಂತಿಂತ ಪ್ಯಾಕ್ಟ್ರಿ ಸುರು ಮಾಡ್ತಿವಿ ಅಂತರೆ.
ಅದ್ರಿಂದ ನಮ್ಗೇನ್ ಉಪ್ಯೋಗ?
ಉಡುಗ್ರಿಗೆ ಕ್ಯಲ್ಸ ಸಿಕ್ತದೆ, ಇನ್ನೂ ಏನೇನೋ ಉಪ್ಯೋಗ ಆಗಬೌದು.
ಜಮೀನೇ ಸಿಕ್ತಾ ಇಲ್ವಲ, ಅದೆಲ್ಲಿಂದ ತಂದ್ ಕೊಡ್ತನೆ ಸದಾನಂದಗೌಡ?
ರೈತ್ರು ಜಮೀನದಲ್ಲ, ಅದ್ನೆ ತಗಂಡು ಕೊಡ್ತನೆ?
ಮತ್ತೆ ರಾಗಿ ಬ್ಯಳ್ಯದು?
ರಾಗಿ ಏನ್ ಮಾಡಕ್ಕೆ? ಆಮೀನ್ ಮಾರಿ ದುಡ್ ಈಸ್ಕೊ, ಅಂಗ್ಡಿಗೋಗಿ ರಾಗಿ ತಗಂಡ್ ಬಾ, ಇನ್ನೂ ಕಷ್ಟ ಆದ್ರೆ ಅಂಗ್ಡಿಗೋಗಿ ಬ್ರೆಡ್ ತಗಂಡ್ ತಿನ್ನು.
ಯಣ್ಣ, ಯಾಕೋ ನೇನೇಳದು ನಮ್ಮ ಮುಗ್ಸಕೆ ಮಾಡಿರ ಪ್ಲಾನು ಅಂತ ಕಾಣ್ತದೆ. ನಮ್ಗೆ ಜಿಮ್ಮು ಅನ್ನದು ಬೇಕೇ ಬೇಕು ಅಂತಿಯ?
ನನ್ನ ಕೇಳಿದ್ರೆ, ಅವ್ರು ಬರ್ಲಿ. ಆದ್ರೆ ನಾವೇಳಿದಂಗೆ ಕೇಳ್ಬೇಕು, ಅವ್ರು ಏಳಿದಂಗೆ ನಾವು ಕೇಳದಲ್ಲ?
ಈಗ ಅವ್ರು ಏಳಿದಂಗೆ ಸದಾನಂದಗೌಡ ಕೇಳಂಗಿದ್ರೆ ಅವ್ನು ಪೈಲ್ವಾನ ಯಂಗಾದನು, ಕಡ್ಡಿ ಪೈಲ್ವಾನಾಯ್ತನೆ.
ಈ. ಬಸವರಾಜು
ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
9448957666 ಈಮೇಲ್:ebಚಿsಚಿvಡಿಚಿರಿu@gmಚಿiಟ.ಛಿom
No comments:
Post a Comment