Saturday, 9 June 2012

ಜೇನಿನ ಹೊಳೆಯೋ, ಹಣದ ಹೊಳೆಯೋ..
ಜೇನಿನ ಹೊಳೆಯೋ, ಹಣದ ಹೊಳೆಯೋ, ಸುಧೆಯೋ ಕನ್ನಡ ಸವಿ ಹಣವೋ..
ಯಣ್ಣ, ಇದೇನು? ಅದ್ಯಾರೋ ನಿತ್ಯಾನಂದಸ್ವಾಮಿ ಮ್ಯಾಲೆ ಕಾಣದಂತೆ ಮಾಯವಾದನು, ನಿತ್ಯಾನಂದ ಕೈಲಾಸ ಸೇರಿಕೊಂಡನೊ ಅಂತ ಹಾಡ್ ಬರ್ದವ್ರೆ. ಅಂಗೆ ನೀನು ಹಾಲಿನ ಮಳೆಯೋ ಅನ್ನದ ತಗಂಡೋಗಿ ಹಣದ ಹೊಳೆಯೋ ಅಂತಾ ಇದ್ದೀಯಲ, ಯಾಕೆ?
ನೀನು ದಿನಾ ಪೇಪರ್ ಓದ್ಬೇಕು. ಬಂಡ್ವಾಳದಾರ್ರು ದುಡ್ಡ ತಂದು ಬೆಂಗ್ಳೂರಲ್ಲಿ ಸುರೀತಾ ಅವ್ರಂತೆ, ಅದು ವಳೆ ತರ ಅರಿತಾ ಅದಂತೆ, ಅದ್ಕೆ ಈ ತರ ಹಾಡ್ ಹಾಡ್ತಾ ಇದ್ದೀನಿ.
ನೀನು ದಡ್ಡ, ದುಡ್ಡ ಚೆಲ್ಲಕೆ ಅವ್ರು ಕರ್ಣನ ವಂಸುದವ್ರೇನಲ್ಲ, ಲಾಬ ಬರಂಗಿದ್ರೆ ಮಾತ್ರ ದುಡ್ಡ ಆಚಿಗೆ ತಗಿತರೆ, ಇಲ್ಲ ಅಂದ್ರೆ ತಗ್ಯದೇ ಇಲ್ಲ.
ಮತ್ತೆ ಪೇಪ್ರಲಿ ಹಣ ಹರೀತಾ ಅದೆ ಅಂತ ಬರ್ದವ್ರೆ.
ಅವ್ರಿಗೇನ್ ಬರೀತರೆ. ಬಂಡ್ವಾಳ ಊಡವ್ರು ಸೇಟ್ರು ಇದ್ದಂಗೆ. ನೀನೆ ಕೇಳಿದ್ದಿಯಲ, ಸೆಟ್ರು ಬಿದ್ರು ಲಾಬ ಇಲ್ದೆ ಬೀಳದಿಲ್ವಂತೆ, ಅಂಗೆ ಈ ಬಂಡ್ವಾಳ್ ದಾರ್ರು. ಲಾಬ ಬರ್ಬೇಕು, ಸರ್ಕಾರದವ್ರು ಅವ್ರು ಕೇಳಿದ್ ಕಡೆ ಜಮೀನ್ ಕಡ್ಮೆ ರೇಟಿಗೆ ಕೊಡ್ಬೇಕು, ರಸ್ತೆ ಮಾಡಿಕೊಡ್ಬೇಕು, ಕರೆಂಟು, ನೀರ್ ಕೊಡ್ಬೇಕು. ಆಗ ದುಡ್ ಆಕ್ತರೆ. ಇಲ್ಲ ಅಂದ್ರೆ ಸುಮ್ಕಿರ್ತರೆ.  
ಅವ್ರು ಆಕಿದ್ರೋ ಇಲ್ವೋ ಅಂತ ಯಂಗ್ ತಿಳ್ಕಳದು?
ಮಾಹಿತಿ ಅಕ್ಕು ಅಂತ ಅದಲ, ಅದ್ರಲಿ ಆಕಿದ್ರೆ ಕಾಣ್ತದಂತೆ. 
ಇಂತದು ಹಿಂದೆ ಆಗಿತ್ತೆ?
ಓದ್ವರ್ಸನೂ ಆಗಿತ್ತು. ಆಗ ಯಡೂರಪ್ಪ ಇದ್ದ. ಆಗ್ಲೂ ಇಂಗೆ ಅರುಸ್ತಿವಿ ಅಂದಿದ್ರು, ಎಷ್ಟು ಅರಿತು, ಎಷ್ಟು ಅರಿಲಿಲ್ಲ ಅನ್ನದು ಗೊತ್ತಾಗ್ಲೇ ಇಲ್ಲ.
ಸದಾನಂದಗೌಡ ಅಲ್ಲಿಗೋಗ್ಬೇಕಾದ್ರೆ ಸೂಟು, ಟೈ ಆಕ್ಯಂಡೋಗಿದ್ನಲ ಯಾಕೆ?
ಯಾಕೆ ಅಂದ್ರೆ ಶರ್ಟು, ಪ್ಯಾಂಟು, ಪಂಚೆ ಆಕ್ಯಂಡೋದ್ರೆ ಒಂದ್ ಪೈಸಾನೂ ಕೊಡದಿಲ್ವಂತೆ, ಅದ್ಕೆ ಕೋಟು ಪ್ಯಾಂಟು, ಬೂಡ್ಸು ಆಕ್ಯಂಡೋಗದು.
ಯಡೂರಪ್ನೂ ಇಂಗೆ ಓಗಿದ್ನೆ?
ಅವ್ನೂ ಇಂಗೇ ಓಗಿದ್ದ. ಇಂತಿಂತಾ ಪೋಗ್ರಾಂ ಗೆ ಇಂತಿಂತಾ ಡ್ರಸ್ಸು ಅಂತ ಇರ್ತದೆ. ದೇವುಸ್ತಾನಕ್ಕೋಗ್ಬೇಕಾದ್ರೆ ಅಂಗಿ ತಗ್ದು ಟವಲ್ನೋ, ಪಂಚೆನೋ, ಸಾಲ್ನೋ ಆಕ್ಯಂಡೋಯ್ತರಲ, ಅಂಗೆ.
ಬಂಡ್ವಾಳ ಸೆಟ್ರತ್ರ ಸೂಟಾಕ್ಯಂಡೋದ್ರೆ ಏನು ಅಂತವ?
ಇವ್ನ ಅತ್ರ ಸಾಲ ಕೊಟ್ರೆ ವಾಪಸ್ ಬತ್ತದೆ ಅಂತ ಇರ್ಬೇಕು. ಒಟ್ನಲಿ ದುಡ್ ಕೊಡರು ಏನೇಳ್ತರೆ ಅಂಗೆ ಕೇಳ್ಬೇಕು.
ಏನೇ ಆಗ್ಲಿ, ನಮ್ ರಾಜ್ಯದ ಮುಕ್ಯಮಂತ್ರಿ ಅಂದ್ರೆ ರಾಜ ಇದ್ದಂಗೆ. ಬಂದಿರರ್ನ ಲೇ, ನಾನೇಳಿದಂಗೆ ಕೇಳಂಗಿದ್ರೆ ಬಲ್ಲಿ, ಇಲ್ಲ ಅಂದ್ರೆ ಇತ್ತಗೆ ಮಕ ಆಕ್ ಬ್ಯಾಡಿ ಅಂತ ಏಳ್ಬೇಕಾಗಿತ್ತು.
ಅದು ಅವ್ನ ಕೈಲಾಗದಿಲ್ಲ. ನಾನೂ-ನೀನೂ ಅದಿಕಾರಕ್ಕೆ ಬಂದ್ರೆ ನೋಡನ ನಡಿ.
ಈ.ಬಸವರಾಜು
ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
9448957666 


No comments:

Post a Comment