Monday, 30 April 2012



ಬಂಗಾರ ಜೈಲಿಗೋಯ್ತದಂತೆ!
ಬಂಗಾರ ಬಂಗಾರ, ಜೈಲಿಗೋಯ್ತು ಬಂಗಾರ..
ಏನಣ್ಣ, ವಸ ಹಾಡ ಹಾಡ್ತಾ ಇದ್ದೀಯ, ಬಂಗಾರದ ಬ್ಯಲೆ ದಿನೇ ದಿನೇ ಮ್ಯಾಕೇರ್ತಾ ಅದೆ, ಅಂತದ್ರಲಿ ಜೈಲಿಗೆ ಯಂಗೋದತು?
ಬಂಗಾರ ಅಂದ್ರೆ ಚಿನ್ನ ಅಲ್ಲ ಕಣಣ್ಣ, ಬಂಗಾರ ಲಕ್ಷ್ಮಣ ಅಂತವ.
ಅದ್ಯಾರಪ್ಪ ಬಂಗಾರದಂತ ಲಕ್ಷ್ಮಣ?
ಅವ್ನು ಒಂದ್ ಕಾಲ್ದಲಿ ಬೀಜೇಪಿ ಪಕ್ಷಕ್ಕೆ ದ್ವಡ್ ಲೀಡ್ರು. ಈಗ ಜೈಲಿಗೋಗು ಅಂತವ ಕೋಟ್ರು ಏಳ್ಯದೆ. ಓಗ್ಲೋ ಬ್ಯಾಡ್ವೋ ಅಂತ ಯೋಚ್ನೆ ಮಾಡ್ತಾ ಅವ್ನಂತೆ.
ಅಲ್ಲ ಕಣಣ್ಣ, ಒಂದ್ಸÀತಿ ಕೋಟ್ರು ಜೈಲಿಗೋಗಯ್ಯ ಅಂದಮ್ಯಾಲೆ ಯೋಚ್ನೆ ಮಾಡದೇನ್ ಬಂತು? ಓಗು ಅಂದ್ ಮ್ಯಾಲೆ ಓಯ್ತಾ ಇರ್ಬೇಕು ಅಷ್ಟೆಯ. ಅದಿಲ್ರಿ, ಬೀಜೇಪಿ ಅದ್ಯಕ್ಷ ಆಗಿದ್ದ ಅಂತ ಜೈಲಿಗೆ ಕಳ್ಸÀದು ತಪ್ಪಲ್ವೆ?
ಬರೀ ಬೀಜೇಪಿಗೆ ಅದ್ಯಕ್ಷ ಆಗಿದ್ರೆ ಜೈಲಿಗೋಗು ಅಂತ ಯಾಕ್ ಏಳ್ತಿದ್ರು? ಅವ್ನು ಅದ್ಯಕ್ಷ ಆಗಿದ್ದಾಗ ನಾಕ್ ಕಾಸ್ ಲಂಚಕ್ಕೆ ಕೈ ಒಡ್ಡಿದ್ನಂತೆ, ಅದ ಯಾರೋ ಪೋಟ ವಡ್ಕಂಡು ಯಲ್ಲಾಗ್ರು ತೋರಿಸಿದ್ರಂತೆ. ಆಗ ಅವ್ನು ಬೀಜೇಪಿ ಲೀಡ್ರು ಜಾಗುಕ್ಕೆ ರಾಜೀನಾಮೆ ಕೊಟ್ಟು ಯಾರಿಗೂ ಕಾಣ್ದಂಗೆ ಪಾಂಡವ್ರು ಅಜ್ವಾನವಾಸಕೋಗಿದ್ರಲ ಅಂಗೆ ಎಲ್ಲೋ ಓಗಿ ಅಡತ್ಕಂಡಿದ್ನಂತೆ. ಈಗ ಕೋಟ್ರು ನೀನು ಮಾಡಿರದು ತಪ್ಪು, ನಾಕ್ ವಸ್ರ ಜೈಲಿಗೋಗು ಅಂತ ಏಳ್ಯದಂತೆ.
ನಾಕ್ ಕಾಸ ಈಸ್ಕಂಡಿದ್ಕೆ ಜೈಲಿಗಾಕದು ತಪ್ಪಲ್ವೆ?
ನಾಕ್ ಕಾಸು ಅಂದ್ರೆ ನಾಕ್ ಕಾಸಲ್ಲ ಕಣಣ್ಣ. ಒಂದ್ ಲಕ್ಷ ಈಸ್ಕಂಡಿದ್ನಂತೆ. ಈಗ ನಡೀತಾ ಇರೋ ನೂರಾರು ಕೋಟಿ ಲಂಚದ ವ್ಯವಾರಕ್ಕೆ ಓಲ್ಸಿದ್ರೆ ಅದು ಕಾಸಿದ್ದಂಗೆ, ಅದ್ಕೆ ಅಂಗದೆ.
ಅದ್ಕೆ ಬೀಜೇಪಿಯವ್ರು ಏನಂತ ಇದ್ದರು?
ಯಾರೇ ತಪ್ಪು ಮಾಡ್ಲಿ, ಅವುರ್ನ ನಮ್ ಪಕ್ಷದಿಂದ ಒಂದು ನೂರು ಕಿಲೋಮೀಟ್ರು ದೂರದಲ್ಲಿ ಮಡುಗ್ತಿವಿ ಅಂತ ಅನಂತಕುಮಾರ ಏಳಿದ್ದನಂತೆ. 
ಮತ್ತೆ ಅದ್ಯಾರೋ ಏಳ್ತಿದ್ರು, ಬಂಗಾರ ಲಕ್ಷ್ಮಣ ಬೀಜೇಪಿಗೆ ಲೀಡ್ರಾಗಿರದು ಅದ್ಯಾರಿಗೊ ಇಷ್ಟ ಇಲ್ರಿಲ್ವಂತೆ, ಅದ್ಕೆ ಅವ್ರೇ ಅವುನ್ನ ಇಡಿಸ್ಯಾಕಿದ್ರಂತೆ ಅಂತವ?
ಅದೇನೋ ನಂಗೊತ್ತಿಲ್ವಪ್ಪ, ಈಕಾಲ್ದಲಿ ಯಾರು ಯಾರಿಗೆ ಚೂರಿ ಆಕ್ತರೆ ಅಂತವ ಗೊತ್ತಾಗ್ವಲ್ದು. ಆದ್ರೆ ಅನಂತಕುಮಾರ ಮಾತ್ರ ಕಡ್ಡಿ ಯಳ್್ಡ ತುಂಡಾದಂಗೆ ಮಾತಾಡ್ಯವ್ನಪ್ಪ.
ಅವ್ನೂ ಮಿನಿಸ್ಟ್ರಾಗಿದ್ದಾಗ ಕೋಟಿಗಟ್ಲೆ ದುಡ್ಡ ವಡುದ್ನಂತೆ?
ಅದು ಅಳೆ ಕೇಸು. ಜ್ವತಿಗೆ ಯಾರೂ ಕೋಟ್ರಿಗೋಗಿ ಕೇಸಾಕಿಲ್ಲ ಅನುಸ್ತದೆ, ಅಂಗಾಗಿ ಅವ್ನು ಈಗ ಸಾಬಸ್ತ ಅನ್ನಂಗೆ ಮಾತಾಡಂಗಾಗ್ಯವ್ನೆ.
ಮತ್ತೆ ಯಡೂರಪ್ಪ ಅವ್ರು ಮುಕ್ಯಮಂತ್ರಿ ಆಗದು ಕಷ್ಟ ಅನ್ನು?
ಅನಂತಕುಮಾರ ಅದ್ನೆ ಏಳಿರದು. ನಾವು ಯಡೂರಪ್ಪುಂಗೆ ಇನ್ನ ಜಾಗ ಕೊಡದಿಲ್ಲ ಅಂತವ.
ಯಡೂರಪ್ನಂತ ಬಂಗಾರಗಳು ಬೀಜೇಪಿಲಿ ಜಾಸ್ತಿ ಇದ್ದವಂತಲ, ಯಲ್ಲಾರ್ನೂ ಕಳಿಸಿದ್ರೆ ಅಲ್ಲಿ ಇರೋರ್ಯಾರು?
ಆಳೂರಿಗೆ ಉಳಿದೋನೇ ಗೌಡ ಅಂತ ಯಾರೋ ವಬ್ರು ಇತ್ರರೆ ಬುಡು.
- ಈ.ಬಸವರಾಜು, ಮಲ್ಲೇನಹಳ್ಳಿ
ಕಾಯ್ರದಶ್ರಿ, ಕನ್ರಾಟಕ ಜಾÕನ ವಿಜಾÕನ ಸಮಿತಿ
ಈಮೇಲ್: ebಚಿsಚಿvಡಿಚಿರಿu@gmಚಿiಟ.ಛಿom
9448957666

Thursday, 26 April 2012

ಸಜಾತಿಯ ಧೃವಗಳು ಸೇರುವುದಿಲ್ಲ
ಯಣ್ಣ, ನಿಂಗೆ ಅಯಸ್ಕಾಂತ ಗೊತ್ತೆ?
ಇದೇನಣ್ಣ, ಇಂಗಂತಿಯ, ನಾನೇನ್ ಆಟ ಆಡ ಉಡುಗ್ನೆ, ನಾನ್ಯಾಕೆ ಅದ್ರ ಬಗ್ಗೆ ತಿಳ್ಕಳಕೆ ಓಗ್ಲಿ?
ಅಂಗಲ್ಲ ಕಣಣ್ಣ, ಅದು ಆಟ ಆಡಕೆ ಮಾತ್ರ ಅಂದ್ಕ ಬ್ಯಾಡ. ಅದ್ರಿಂದ್ಲೇ ಪ್ಯಾನು, ಮಿಕ್ಸಿ, ಟಿ.ಸಿ, ಜನರೇಟರ್ ಯಲ್ಲ ಕ್ಯಲ್್ಸ ಮಾಡದು. ಅಯಸ್ಕಾಂತ ಅನ್ನದು ಬಾಲ ಮುಕ್ಯವಾದದ್ದು.
ಅಯ್ತು, ಈಗ ಅದ್ರ ಬಗ್ಗೆ ಯಾಕೆ ಮಾತು ಅದೇಳು?
ಅಯಸ್ಕಾಂತಕ್ಕೆ ಒಂದ್ ತರ ಗುಣ ಅದೆ. ಒಂದ್ ಅಯಸ್ಕಾಂತದ ಒಂದ್ ತುದಿಗೆ ಉತ್ತರ ದ್ರುವ ಅಂತರೆ, ಇನ್ನೊಂದ್ ತುದಿಗೆ ದಕ್ಷಿಣ ದ್ರುವ ಅಂತರೆ. ಅಯಸ್ಕಾಂತವ ನ್ಯಾತಾಕಿದ್ರೆ ಉತ್ರ, ದಕ್ಷಿಣದ ಕಡಿಕೆ ನಿಂತ್ಕತದೆ. 
ನೀನೇನೋ ಅಯಸ್ಕಾಂತದ ಬಗ್ಗೆ ನಂಗೆ ಪಾಟ ಮಾಡಂಗೆ ಕಾಣ್ತಾ ಇದ್ದೀಯಪ್ಪ. ಅದೇನು ಜಲ್ದಿ ಏಳಣ್ಣ.
ಸಲ್ಪ ಕೇಳು. ಅಯಸ್ಕಾಂತದ ವಿಸೇಸ ಅಂದ್ರೆ ಒಂದು ಅಯಸ್ಕಾಂತದ ಉತ್ರ ದ್ರುವಕ್ಕೆ ಇನ್ನೊಂದ್ ಅಯಸ್ಕಾಂತದ ಉತ್ರ ದ್ರುವ ಕಂಡ್ರೆ ಆಗದಿಲ್ಲ. ದೂರ ಓಡ್ತದೆ. ಅಂಗೆಯ ದಕ್ಷಿಣ ದ್ರುವಕ್ಕೆ ದಕ್ಷಿಣ ದ್ರುವ ಕಂಡ್ರೆ ಆಗದಿಲ್ಲ. ಅದೆ ಉತ್ರ-ದಕ್ಷಿಣ ದ್ರುವ ಗಪ್ ಅಂತ ಇಡ್ಕಬುಡ್ತವೆ.
ಅದಕ್ಕೇನ್ ಮಾಡ್ಬೇಕು ಈಗ?
ನಂಗೆ ಒಂದ್ ವಿಸ್ಯ ಗೊತ್ತಾಯ್ತು. ಮನುಸ್ರೂ ಇಂಗೆ ಆಡ್ತರೆ ಅಂತವ.
ಎಲ್ಲಿ ನೋಡಿದೆ?
ಗುಜರಾತ್ ಮು.ಮಂತ್ರಿ ನರೇಂದ್ರ ವೋದಿ ಅಂತ ಅವ್ನಲ್ಲ. ಅವ್ನು ಅಮೇರಿಕಕ್ಕೆ ಓಗಕೆ ಪಾಪ ಬಾಳ ಆಸೆ ಇಟ್ಕಂಡವ್ನಂತೆ. ಅಲ್ಲಿಗೋಗ್ಬೇಕಾದ್ರೆ ಅವ್ರು ಒಂದ್ ಸಟ್ರಿಪಿಕೇಟ್ ಕೊಡ್ಬೇಕಂತೆ. ಅವ್ರು ಅದ ಕೊಡ್ತಾ ಇಲ್ವಂತೆ. ಅಂಗಾಗಿ ವೋದಿ ಆಸೆ ಈಡೇರ್ತಾ ಇಲ್ವಂತೆ.
ಅವ್ರಿಗೇನು ಸಟ್ರಿಪಿಕೇಟ್ ಕೊಟ್ಟು ಬಾರಪ್ಪ ಅಂತ ಕರಿಯಕೆ?
ಅವ್ರು ಕೊಡನ ಅಂದ್ಕಂಡಿದ್ರಂತೆ, ಅಲ್ಲಿ ವಬ್ಬ ವೋದಿ ತರ ಇರ ಬಲಪಂತೀಯ ಅನ್ನನು ವೋದಿ ಇಲ್ಲಗೆ ಬಕ್ರೂಡ್ದು ಅಂದ್ನಂತೆ.
ವೋದಿ ತರನೇ ಅವ್ನೆ ಅಂತಿಯ, ಬಲ ಪಂತೀಯ ಅಂತಿಯ, ಮತ್ತೆ ಇವ್ನು ಓಗಕೆ ಅವುಂದೇನು ತಕ್ರಾರು?
ಇಲ್ಲೇ ನಾನೇಳಿದ ಪಾಮ್ರುಲ ಕ್ಯಲ್ಸ ಮಾಡ್ತಾ ಇರದು. ವೋದೀನೂ ಬಲ ಪಂತೀಯ, ಅವ್ರೂ ಬಲ ಪಂತೀಯ. ವಬ್ರಿಗ್ವಬ್ರಿಗೆ ಆಗದಿಲ್ಲ!!
ಬಲ ಪಂತೀಯ ಅಂದ್ರೇನು? 
ಒಂದ್ ದಮ್ರವೇ ಸ್ರೇಷ್ಟ, ಯಲ್ಲಾರೂ ಅದ್ಕೇ ಸೇರಿಕಬೇಕು, ಇನ್ವಬ್ರು ಇಲ್ರೇಬಾದ್ರು ಅಂತ ನಂಬಿಕಂಡಿರರಿಗೆ ಬಲಪಂತೀಯರು ಅಂತಾರೆ. ಇಂತರು ಯಲ್ಲಾ ದಮ್ರುದಲ್ಲೂ ಇದ್ದರಂತೆ. ವೋದಿ ಹಿಂದೂ ಬಲಪಂತೀಯ, ಅಲ್ಲಿ ಯಾರೋ ಮುಸ್ಲಿಂ ಬಲಪಂತೀಯ ಇದ್ದನಂತೆ. ಅವ್ರು ವೋದಿ ಸಾವಿರಾರು ಜನ ಕ್ವಲೆ ನಡೀವಾಗ ಮುಕ್ಯ ಮಂತ್ರಿ ಆಗಿದ್ರೂ ಸುಮ್ಕೆ ಕೂತಿದ್ದ. ಲೇ ಸುಮ್ಕಿರಿ ಅಂತಲೂ ಏಳಿಲ್ವಂತೆ. ಅದ್ಕೆ ಅವ್ನು ಇಲ್ಲಿಗೆ ಬರಬಾದ್ರು ಅಂತ ಹಟ ಇಡ್ಕಂಡು ಕೂತಿದ್ದನಂತೆ. ಅಂಗಾಗಿ ವೋದಿ ಅಮೆರಿಕಕ್ಕೆ ಓಗದು ಗ್ಯಾರಂಟಿ ಇಲ್ವಂತೆ.
ಅವ್ನು ಬೇಕಾದ್ರೆ ಚಾನ್ಸು ಸಿಕ್ಕಿದ್ರೆ ಓಗ್ಲಿ ಬುಡು, ನಾನು ಮಾತ್ರ ಬಾರಪ್ಪ ಅಂದ್ರೂ ಆ ದೇಶಕ್ಕೆ ಓಗದಿಲ್ಲ.
ಯಾಕಣ್ಣ?
ಯಾಕೆ ಅಂದ್ರೆ ಅವ್ರು ಅವ್ರ ದೇಶದ ವಳಿಕೆ ನಾವು ಓಗ್ವಾಗ ಗೇಟಲ್ಲಿ ನಮ್ ಬಟ್ಟೆ ಬಿಚ್ಚಿ ಚೆಕ್ ಮಾಡ್ತರಂತೆ. ನಮ್ಮಂತರೋಗ್ಲಿ, ಅಬ್ದುಲ್ ಕಲಾಂ, ಜಾಜ್್ರ ಪನ್ರಾಂಡೀಸ್, ಸಾರುಕಾನ್ ಯಾರ್ನೂ ಬುಟ್ಟಿಲ್ವಂತೆ. ಅದ್ಕೆ ನಾನ್ ಮಾತ್ರ ನನ್ನುದ್ದುಕ್ಕೆ ಸುರುದ್ರೂ ಅಲ್ಲಿಗೆ ಮಾತ್ರ ಓಗದಿಲ್ಲ.
- ಈ.ಬಸವರಾಜು, ಮಲ್ಲೇನಹಳ್ಳಿ
ಕಾಯ್ರದಶ್ರಿ, ಕನ್ರಾಟಕ ಜಾÕನ ವಿಜಾÕನ ಸಮಿತಿ
ಈಮೇಲ್: ebಚಿsಚಿvಡಿಚಿರಿu@gmಚಿiಟ.ಛಿom
9448957666

--
E.Basavaraju
Mandara, 4th main, Rukmininagar
Nagasandra post,  Bangalore-560012
9448957666


Check out my photos on Shtyle.fm

Hi ebasavraju.kjvs@blogger.com!
  Check out my photos on Shtyle.fm

I've created a profile on Shtyle.fm to upload my photos, share files and make new friends and I want to add you as a friend.

View my Profile and Photos »
Regards,
E.Basavaraju


You can opt-out of Shtyle.fm emails.

Tuesday, 24 April 2012

dinada vyangya

ಸ್ವಾಮಿಗಳ ನೋಡಕ್ಕೆ ಸೋನಿ ಗಾಂದಿ ಬಂದಳಂತೆ
ಯಣ್ಣ, ಸೋನಿ ಗಾಂದಿ ನಮ್ ಸ್ವಾಮಿಗಳ್ನ ನೋಡಕೆ ಬಂದಳಂತೆ, ನಾವೂ ಓಗಿ ಆ ವಮ್ಮುನ್ನ ನೋಡಿಕಂಡು ಬರನ?
ನಿಮ್ ಸ್ವಾಮಿಗಳು ಅಂದ್ರೆ ಯಾರಣ್ಣ?
ಯಾಕಣ್ಣ ಇಂಗಂತಿಯ?
ಯಾಕೆ ಅಂದ್ರೆ ಈಗ ಯಲ್ಲಾ ಜಾತಿಗೂ ವಬ್ರು ಸ್ವಾಮಿಗಳವ್ರೆ. ಆ ಜಾತಿವಳ್ಗೆ ಯಾವುದಾದ್ರೂ ಸಣ್ಣ ಜಾತಿಯಿದ್ರೆ ಅದ್ಕೂ ವಬ್ಬ ಸ್ವಾಮಿಗಳ್ನ ಮಾಡಿಕತ್ತರೆ, ಅದ್ಕೆ ಅಂಗಂದೆ.
ನಾನು ಸ್ವಾಮಿಗಳು ಅಂದಿದ್ದು ಸಿದ್ದಗಂಗೆ ಸ್ವಾಮಿಗಳ ಬಗ್ಗೆ. ಅವ್ರುನ್ನ ನೋಡಕೆ ಸೋನಿಗಾಂದಿ ಬಂದಳಂತೆ.
ಅದೇನು? ನಮ್ ಸ್ವಾಮಿಗಳ್ನ ನೋಡಕೆ ಸೋನಿ ಗಾಂದಿ ಅಲ್ಲಿಂದ ಇಲ್ಲೀತಕ ಬಂದಳು?
ಸ್ವಾಮಿಗಳು ಬರೋಬರಿ 105 ವಷ್ರ ಕಳೆದವ್ರಲ, ಇದ್ರ ಗುಟ್ಟ ತಿಳ್ಕಂಡು ತಾನೂ ಆದ್ರೆ ನೂರು ವಸ್ರ ಬದ್ಕನ ಅಂತ ಆಸೆ ಇಟ್ಕಂಡ್ ಬತ್ತಾ ಇರಬೌದು.
ಅದ್ಯಾಕಣ್ಣ ನೂರು ವಸ್ರ ಬದುಕ್ಲೇಬೇಕು ಅನ್ನ ಆಸೆ ಆ ವಮ್ಮುಂಗೆ?
ಏನಾರ ಮಾಡಿ ನನ್ ಮಗನ್ನ ಪದ್ರಾನಿ ಪಟ್ಟಕ್ಕೆ ಕುಂಡ್ರಿಸಿ ಕಣ್ತುಂಬ ನೋಡನ ಅಂತ ಆಸೆ ಇಬ್ರೇಕು.
ಅಷ್್ಟ ದಿನ ಬೇಕೆ ಅವ್ರ ಮಗ ಪದ್ರಾನಿ ಆಗಕೆ?
ಯಂಗೇಳ್ತಿಯಣ್ಣ, ಜನ ನಂಬಿಕಂಡು ಯಲೆಕ್ಷನ್ನಿಗೆ ನಿಂತ್ಕಳದು ಈಗ ಬಾಳ ಕಷ್ಟ. ಹಿಂದೆ ಇಂದ್ರಗಾಂದಿ ಒಂದು ತಟ್ಟೆ, ಒಂದು ಲೋಟ ಕೊಟ್ರೆ ಯಲ್ಲಾರು ಅವ್ರಿಗೇ ಓಟಾಕ್ತಾ ಇದ್ರು. ಈಗ ತಟ್ಟೆವಳಿಕೆ ಬಾಡಾಕಿ, ಲೋಟದ್ವಳಿಕೆ ಯಣ್ಣೆ ಆಕಿ ಅಂತರೆ. ಅದ ಕುಡ್ಕಂಡು ಬ್ಯಾರೆ ಪಾಟ್ರಿಯೋರು ಬಂದ್ರೆ ಅದೇ ತಟ್ಟೆ ಇಡಿತರೆ. ಅಂಗಾಗಿ ಸೋನಿ ಗಾಂದಿಗೆ ತನ್ ಮಗ ಯಾವಾಗ ಪದ್ರಾನಿ ಆಯ್ತನೆ ಅನ್ನದೇ ಡೌಟಾಗ್ಯದಂತೆ.
ಅದ್ಕಲ್ವಂತೆ ಕಣಣ್ಣ ಆ ವಮ್ಮ ಬತ್ತಾ ಇರದು?
ಮತ್ತಿನ್ಯಾಕಂತೆ?
ಈ ಕಾಂಗ್ರೇಸ್ ಪಕ್ಷದವ್ರು ಸೋನಿ ಗಾಂದಿತಕೋಗಿ; ಮೇಡಂ, ನಮ್ ಸ್ವಾಮಿಗಳಿಗೆ 105 ವಸ್ರ ಆಗ್ಯದೆ, ಅವ್ರು ಅಷ್್ಟ ವಸ್ರ ಬದಕಕೆ ನಾವೇ ಕಾರಣ. ನಮ್ ಆಸ್ಪತ್ರೇಲೇ ಅವ್ರಿಗೆ ಔಸ್ತಿ ಕೊಟ್ಟಿರದು, ಅದ್ಕೆ ನೀವು  ಬಲ್ರೇಬೇಕು ಅಂದ್ರಂತೆ.
ಇವ್ರೇಳಿದ್ದ ಆ ವಮ್ಮ ನಂಬಿ ಬುಡ್ತಂತ?
ಆ ವಮ್ಮ ಜಗತ್ನೇ ಸುತ್ತಿರದು, ರೀ ಸರಿಯಾಗಿ ಏಳ್ರಿ ಅಂತಂತೆ. ಆಗ ಇವ್ರು ಮೇಡಂ, ಯಲ್ಲಾರೂ ಸ್ವಾಮಿಗಳ್ನ ನೋಡಿಕಂಡು ವಳ್ಳೆ ಪ್ರಚಾರ ತಗತಾವ್ರೆ. ನೀವೂ ಒಂದ್ಸತಿ ಬಂದ್ರೆ ನಮಿಗೆ ವಳ್ಳೆ ಪ್ರಚಾರ ಸಿಕ್ತದೆ, ನೀವೂ ಉಸಾರಿಲ್ದಾಗ ಪಾರಿನ್ನಿಗೋಗಿದ್ರಲ ಅದ್ಕೆ ಇಲ್ಲಿ ಜನ ಏನೇನೋ ಮಾತಾಡಿಕತ್ತಾ ಅವ್ರೆ. ಅದ್ಕೆ ನೀವು ಬಂದ್ರೆ ಜನ ಮೇಡಂ ಮದ್ಲಂಗೇ ಜೋರಾಗ್ಯವ್ರೆ ಅಂದ್ಕತ್ತರೆ. ಜ್ವತಿಗೆ ನಿಮ್ಮತ್ತೆ ಇಂದ್ರಗಾಂದಿ ಅವ್ರು ಚಿಕ್ಕಮಂಗ್ಳೂರಲ್ಲಿ ಯಲೆಕ್ಷನ್ನಿಗೆ ನಿಂತಿದ್ದಾಗ ಬ್ಯಳ್ ಬ್ಯಳಿಗ್ಗೆ ನಮ್ ಸ್ವಾಮಿಗಳ್ನ ಭೇಟಿ ಮಾಡಿ ಅಡ್ ಬಿದ್ದು ಓಗಿದ್ರು. ಆಗ ಗೆದ್ರು. ಅದ್ಕೆ ನೀವೂ ಬನ್ನಿ ಪ್ಲೀಸ್ ಅಂದ್ರಂತೆ, ಆಗ ಸೋನಿ ಗಾಂದಿ ಆಯ್ತು ಅಂತವ ಬತ್ತಾ ಇರದಂತೆ. 
ಸ್ವಾಮಿಗಳ್ನ ನೋಡಿಕಂಡು ಸೀದ ಡೆಲ್ಲಿಕಡಿಕೆ ಓಗಬೌದು. ನಾವೆಲ್ಲಿ ನೋಡಕಾದತು?
ಸ್ವಾಮಿಗಳ್ನ ನೋಡಿದ್ ಮ್ಯಾಲೆ ಬರ ಬಂದಿರ ಅಳ್ಳೀಲಿ ಅದ್ಯಯನ ಮಾಡ್ಯರಂತೆ. ಆಗ ನಮ್ಮಂತರನ್ಯಲ್ಲ ಮಾತಾಡುಸ್ತರಂತೆ, ಆಗ ನೋಡಬೌದು, ಬಾರಣ್ಣ.
ಅದ್ಯಯನ ಅಂದ್ರೆ ಏನ್ ಮಾಡ್ತರಂತೆ?
ಒಂದ್ ಊರಿಗೋಗದು. ಅಲ್ಲಿ ಬರ ಯಾಕೆ ಬಂದದೆ? ಎಷ್ಟು ಜನಕ್ಕೆ ಏನೇನು ತ್ವಂದ್ರೆ ಆಗ್ಯದೆ, ಅದು ಬರಕ್ಕೆ ಏನು ಕಾರಣ. ಬರ ಬರದೇ ಇರಂಗೆ ಏನು ಮಾಡ್ಬೇಕು, ಈಗ ಆಗಿರ ತ್ವಂದ್ರೆ ಪರಿಹಾರ ಮಾಡಕ್ಕೆ ಏನೇನ್ ಮಾಡ್ಬೇಕು, ಅದ್ಕೆ ಎಷ್್ಟ ದುಡ್ ಬೇಕು, ಎಷ್್ಟ ಮೇವು, ಅಕ್ಕಿ, ರಾಗಿ ಬೇಕು ಅಂತವ ಅಂದಾಜ್ ಮಾಡದಿ. ಅದ್ಕೆ ಅದ್ಯಯನ ಅಂತಾರೆ.
ಇಷ್್ಟ ಯಲ್ಲ ಮಾಡಕ್ಕೆ ಏನಿಲ್ಲ ಅಂದ್ರುವೆ ಯಳ್್ಡ ಮೂರು ದಿನ ಬೇಕಪ್ಪ.  ಅಂತದ್ರಲಿ ಇವ್ರು ಅದ್ಯಲ್ಲಾನು ಮಾಡ್ಯರೆ?
ಏನ್ ಮಾಡ್ಯರು? ಓಯ್ತರೆ, ಜನಗಳ ಮುಂದೆ ನಿಂತ್ಕಂಡು ಯಳ್್ಡ ಮಾತಾಡ್ತರೆ, ಪೋಟ ತಗಿಸ್ಕತ್ತರೆ, ವಾಪಸ್ ಓಯ್ತರೆ. ಪೇಪ್ರಲಿ ಚನ್ನಾಗಿ ಬತ್ತದೆ.
ಮತ್ತೆ ಬರ ಪರಿಹಾರದ ಕತೆ?
ಆ ಮಾತ ಮಾತ್ರ ಕೇಳ್ ಬ್ಯಾಡ. ಅದು ದ್ವಡ್ ಕತೆ.
- ಈ.ಬಸವರಾಜು, ಮಲ್ಲೇನಹಳ್ಳಿ
ಕಾಯ್ರದಶ್ರಿ, ಕನ್ರಾಟಕ ಜಾÕನ ವಿಜಾÕನ ಸಮಿತಿ
ಈಮೇಲ್: ebasavraju@gmail.com
9448957666

--
E.Basavaraju
Mandara, 4th main, Rukmininagar 
Nagasandra post,  Bangalore-560012
9448957666


ಸ್ವಾಮಿಗಳ ನೋಡಕ್ಕೆ ಸೋನಿ ಗಾಂದಿ ಬಂದಳಂತೆ
ಯಣ್ಣ, ಸೋನಿ ಗಾಂದಿ ನಮ್ ಸ್ವಾಮಿಗಳ್ನ ನೋಡಕೆ ಬಂದಳಂತೆ, ನಾವೂ ಓಗಿ ಆ ವಮ್ಮುನ್ನ ನೋಡಿಕಂಡು ಬರನ?
ನಿಮ್ ಸ್ವಾಮಿಗಳು ಅಂದ್ರೆ ಯಾರಣ್ಣ?
ಯಾಕಣ್ಣ ಇಂಗಂತಿಯ?
ಯಾಕೆ ಅಂದ್ರೆ ಈಗ ಯಲ್ಲಾ ಜಾತಿಗೂ ವಬ್ರು ಸ್ವಾಮಿಗಳವ್ರೆ. ಆ ಜಾತಿವಳ್ಗೆ ಯಾವುದಾದ್ರೂ ಸಣ್ಣ ಜಾತಿಯಿದ್ರೆ ಅದ್ಕೂ ವಬ್ಬ ಸ್ವಾಮಿಗಳ್ನ ಮಾಡಿಕತ್ತರೆ, ಅದ್ಕೆ ಅಂಗಂದೆ.
ನಾನು ಸ್ವಾಮಿಗಳು ಅಂದಿದ್ದು ಸಿದ್ದಗಂಗೆ ಸ್ವಾಮಿಗಳ ಬಗ್ಗೆ. ಅವ್ರುನ್ನ ನೋಡಕೆ ಸೋನಿಗಾಂದಿ ಬಂದಳಂತೆ.
ಅದೇನು? ನಮ್ ಸ್ವಾಮಿಗಳ್ನ ನೋಡಕೆ ಸೋನಿ ಗಾಂದಿ ಅಲ್ಲಿಂದ ಇಲ್ಲೀತಕ ಬಂದಳು?
ಸ್ವಾಮಿಗಳು ಬರೋಬರಿ 105 ವಷ್ರ ಕಳೆದವ್ರಲ, ಇದ್ರ ಗುಟ್ಟ ತಿಳ್ಕಂಡು ತಾನೂ ಆದ್ರೆ ನೂರು ವಸ್ರ ಬದ್ಕನ ಅಂತ ಆಸೆ ಇಟ್ಕಂಡ್ ಬತ್ತಾ ಇರಬೌದು.
ಅದ್ಯಾಕಣ್ಣ ನೂರು ವಸ್ರ ಬದುಕ್ಲೇಬೇಕು ಅನ್ನ ಆಸೆ ಆ ವಮ್ಮುಂಗೆ?
ಏನಾರ ಮಾಡಿ ನನ್ ಮಗನ್ನ ಪದ್ರಾನಿ ಪಟ್ಟಕ್ಕೆ ಕುಂಡ್ರಿಸಿ ಕಣ್ತುಂಬ ನೋಡನ ಅಂತ ಆಸೆ ಇಬ್ರೇಕು.
ಅಷ್್ಟ ದಿನ ಬೇಕೆ ಅವ್ರ ಮಗ ಪದ್ರಾನಿ ಆಗಕೆ?
ಯಂಗೇಳ್ತಿಯಣ್ಣ, ಜನ ನಂಬಿಕಂಡು ಯಲೆಕ್ಷನ್ನಿಗೆ ನಿಂತ್ಕಳದು ಈಗ ಬಾಳ ಕಷ್ಟ. ಹಿಂದೆ ಇಂದ್ರಗಾಂದಿ ಒಂದು ತಟ್ಟೆ, ಒಂದು ಲೋಟ ಕೊಟ್ರೆ ಯಲ್ಲಾರು ಅವ್ರಿಗೇ ಓಟಾಕ್ತಾ ಇದ್ರು. ಈಗ ತಟ್ಟೆವಳಿಕೆ ಬಾಡಾಕಿ, ಲೋಟದ್ವಳಿಕೆ ಯಣ್ಣೆ ಆಕಿ ಅಂತರೆ. ಅದ ಕುಡ್ಕಂಡು ಬ್ಯಾರೆ ಪಾಟ್ರಿಯೋರು ಬಂದ್ರೆ ಅದೇ ತಟ್ಟೆ ಇಡಿತರೆ. ಅಂಗಾಗಿ ಸೋನಿ ಗಾಂದಿಗೆ ತನ್ ಮಗ ಯಾವಾಗ ಪದ್ರಾನಿ ಆಯ್ತನೆ ಅನ್ನದೇ ಡೌಟಾಗ್ಯದಂತೆ.
ಅದ್ಕಲ್ವಂತೆ ಕಣಣ್ಣ ಆ ವಮ್ಮ ಬತ್ತಾ ಇರದು?
ಮತ್ತಿನ್ಯಾಕಂತೆ?
ಈ ಕಾಂಗ್ರೇಸ್ ಪಕ್ಷದವ್ರು ಸೋನಿ ಗಾಂದಿತಕೋಗಿ; ಮೇಡಂ, ನಮ್ ಸ್ವಾಮಿಗಳಿಗೆ 105 ವಸ್ರ ಆಗ್ಯದೆ, ಅವ್ರು ಅಷ್್ಟ ವಸ್ರ ಬದಕಕೆ ನಾವೇ ಕಾರಣ. ನಮ್ ಆಸ್ಪತ್ರೇಲೇ ಅವ್ರಿಗೆ ಔಸ್ತಿ ಕೊಟ್ಟಿರದು, ಅದ್ಕೆ ನೀವು  ಬಲ್ರೇಬೇಕು ಅಂದ್ರಂತೆ.
ಇವ್ರೇಳಿದ್ದ ಆ ವಮ್ಮ ನಂಬಿ ಬುಡ್ತಂತ?
ಆ ವಮ್ಮ ಜಗತ್ನೇ ಸುತ್ತಿರದು, ರೀ ಸರಿಯಾಗಿ ಏಳ್ರಿ ಅಂತಂತೆ. ಆಗ ಇವ್ರು ಮೇಡಂ, ಯಲ್ಲಾರೂ ಸ್ವಾಮಿಗಳ್ನ ನೋಡಿಕಂಡು ವಳ್ಳೆ ಪ್ರಚಾರ ತಗತಾವ್ರೆ. ನೀವೂ ಒಂದ್ಸತಿ ಬಂದ್ರೆ ನಮಿಗೆ ವಳ್ಳೆ ಪ್ರಚಾರ ಸಿಕ್ತದೆ, ನೀವೂ ಉಸಾರಿಲ್ದಾಗ ಪಾರಿನ್ನಿಗೋಗಿದ್ರಲ ಅದ್ಕೆ ಇಲ್ಲಿ ಜನ ಏನೇನೋ ಮಾತಾಡಿಕತ್ತಾ ಅವ್ರೆ. ಅದ್ಕೆ ನೀವು ಬಂದ್ರೆ ಜನ ಮೇಡಂ ಮದ್ಲಂಗೇ ಜೋರಾಗ್ಯವ್ರೆ ಅಂದ್ಕತ್ತರೆ. ಜ್ವತಿಗೆ ನಿಮ್ಮತ್ತೆ ಇಂದ್ರಗಾಂದಿ ಅವ್ರು ಚಿಕ್ಕಮಂಗ್ಳೂರಲ್ಲಿ ಯಲೆಕ್ಷನ್ನಿಗೆ ನಿಂತಿದ್ದಾಗ ಬ್ಯಳ್ ಬ್ಯಳಿಗ್ಗೆ ನಮ್ ಸ್ವಾಮಿಗಳ್ನ ಭೇಟಿ ಮಾಡಿ ಅಡ್ ಬಿದ್ದು ಓಗಿದ್ರು. ಆಗ ಗೆದ್ರು. ಅದ್ಕೆ ನೀವೂ ಬನ್ನಿ ಪ್ಲೀಸ್ ಅಂದ್ರಂತೆ, ಆಗ ಸೋನಿ ಗಾಂದಿ ಆಯ್ತು ಅಂತವ ಬತ್ತಾ ಇರದಂತೆ. 
ಸ್ವಾಮಿಗಳ್ನ ನೋಡಿಕಂಡು ಸೀದ ಡೆಲ್ಲಿಕಡಿಕೆ ಓಗಬೌದು. ನಾವೆಲ್ಲಿ ನೋಡಕಾದತು?
ಸ್ವಾಮಿಗಳ್ನ ನೋಡಿದ್ ಮ್ಯಾಲೆ ಬರ ಬಂದಿರ ಅಳ್ಳೀಲಿ ಅದ್ಯಯನ ಮಾಡ್ಯರಂತೆ. ಆಗ ನಮ್ಮಂತರನ್ಯಲ್ಲ ಮಾತಾಡುಸ್ತರಂತೆ, ಆಗ ನೋಡಬೌದು, ಬಾರಣ್ಣ.
ಅದ್ಯಯನ ಅಂದ್ರೆ ಏನ್ ಮಾಡ್ತರಂತೆ?
ಒಂದ್ ಊರಿಗೋಗದು. ಅಲ್ಲಿ ಬರ ಯಾಕೆ ಬಂದದೆ? ಎಷ್ಟು ಜನಕ್ಕೆ ಏನೇನು ತ್ವಂದ್ರೆ ಆಗ್ಯದೆ, ಅದು ಬರಕ್ಕೆ ಏನು ಕಾರಣ. ಬರ ಬರದೇ ಇರಂಗೆ ಏನು ಮಾಡ್ಬೇಕು, ಈಗ ಆಗಿರ ತ್ವಂದ್ರೆ ಪರಿಹಾರ ಮಾಡಕ್ಕೆ ಏನೇನ್ ಮಾಡ್ಬೇಕು, ಅದ್ಕೆ ಎಷ್್ಟ ದುಡ್ ಬೇಕು, ಎಷ್್ಟ ಮೇವು, ಅಕ್ಕಿ, ರಾಗಿ ಬೇಕು ಅಂತವ ಅಂದಾಜ್ ಮಾಡದಿ. ಅದ್ಕೆ ಅದ್ಯಯನ ಅಂತಾರೆ.
ಇಷ್್ಟ ಯಲ್ಲ ಮಾಡಕ್ಕೆ ಏನಿಲ್ಲ ಅಂದ್ರುವೆ ಯಳ್್ಡ ಮೂರು ದಿನ ಬೇಕಪ್ಪ.  ಅಂತದ್ರಲಿ ಇವ್ರು ಅದ್ಯಲ್ಲಾನು ಮಾಡ್ಯರೆ?
ಏನ್ ಮಾಡ್ಯರು? ಓಯ್ತರೆ, ಜನಗಳ ಮುಂದೆ ನಿಂತ್ಕಂಡು ಯಳ್್ಡ ಮಾತಾಡ್ತರೆ, ಪೋಟ ತಗಿಸ್ಕತ್ತರೆ, ವಾಪಸ್ ಓಯ್ತರೆ. ಪೇಪ್ರಲಿ ಚನ್ನಾಗಿ ಬತ್ತದೆ.
ಮತ್ತೆ ಬರ ಪರಿಹಾರದ ಕತೆ?
ಆ ಮಾತ ಮಾತ್ರ ಕೇಳ್ ಬ್ಯಾಡ. ಅದು ದ್ವಡ್ ಕತೆ.
- ಈ.ಬಸವರಾಜು, ಮಲ್ಲೇನಹಳ್ಳಿ
ಕಾಯ್ರದಶ್ರಿ, ಕನ್ರಾಟಕ ಜಾÕನ ವಿಜಾÕನ ಸಮಿತಿ
ಈಮೇಲ್: ebಚಿsಚಿvಡಿಚಿರಿu@gmಚಿiಟ.ಛಿom
9448957666

--
E.Basavaraju
Mandara, 4th main, Rukmininagar
Nagasandra post,  Bangalore-560012
9448957666


Sunday, 22 April 2012

ಬಿಟ್ಟೆನೆಂದರೆ ಬಿಡದೀ ಮಾಯೆ!
ಬಿಟ್ಟೆನೆಂದರೆ ಬಿಡದೀ ಮಾಯೆ..ಬಿಟ್ಟೆನೆಂದರೆ ಬಿಡದೀ ಮಾಯೆ..
ಏನಣ್ಣ, ಈಗೀಗ ಸಂಗೀತ ಹಾಡಕೆ ಸುರು ಮಾಡಿದ್ದೀಯ? ಎಲ್ಲಿ ಕಲ್ತೆ?
ಎಲ್ಲೂ ಕಲ್ತಿಲ್ಲ ಕಣಣ್ಣ. ಮಾಜಿ ಮುಖ್ಯ ಮಂತ್ರಿಗಳ ಮನೆ ಕಡೀಕೋಗಿದ್ದೆ. ಇದ್ದಕ್ಕಿದ್ದಂತೆ ಈ  ಹಾಡು ಕೇಳಸ್ತು. ಅಂಗೆ ಕಿಟಕಿ ಅತ್ರ ಓಗಿ ನೋಡಿದೆ. ಒಂದು ಸಂಗೀತ ಕಚೇರಿ ನಡೀತಿತ್ತು. ಅದ ನೋಡಿ ಒಂದ್ ಮಟ್ಟ ನಾನೂ ಕಲ್ತು ಈ ಲೆವೆಲ್ಲಿಗೆ ಬಂದಿದ್ದೀನಿ.
ಯಾರಣ್ಣ ಅಲ್ಲಿ ಸಂಗೀತ ಕಚೇರಿ ನಡುಸ್ತಾ ಇದ್ದರು?
ನಮ್ ಯಡೂರಪ್ಪ ಅವ್ರು ಯಡಗೈಲಿ ಒಂದ್ ಕಿವಿಯ ಮುಚಕಂಡು ಬಲಗೈಯ ಮುಂದುಕೆ ಚಾಚಿ ಬಿಟ್ಟೇನೆಂದರೆ ಬಿಡದೀ ಮಾಯೆ, ಈ ಹಿರೇಮಠನ ಮಾಯೆ ಅಂತವ ಹಾಡ್ತಾ ಇದ್ರು.
ಪಾಪ ವಬ್ರೇ ಕೂತ್ಕಂಡು ಆ ರೀತಿ ಹಾಡ ಪರಿಸಿತಿ ಬಂತಲ್ಲ ಅವ್ರಿಗೆ, ಚೆ..
ಅವ್ರು ವಬ್ರೆ ಇಲ್ರಿಲ್ಲ ಕಣಣ್ಣ. ಅವ್ರು ಹಾಡ್ತಾ ಇದ್ರು. ವಬ್ಬ ಯಂಗ್ಸು ವೀಣೆ ನುಡುಸ್ತಾ ಇತ್ತು. ಆ ವಮ್ಮ ವಳ್ಳೆ ಹಲ್ಪುಡಿ ಅಡ್ವಟೇಜ್ ಕೊಡ ತರ ಇತ್ತಪ್ಪ.
ಇಬ್ರೆಯ ಇದ್ದರು?
ಸಲ್ಪ ಪೂರ ಏಳತಕ ಕೇಳಣ್ಣ. ಇನ್ವಬ್ಬ ತಬ್ಲ ಬಾರುಸ್ತಾ ಇದ್ದ. ಅವ್ನ ತಲೇಲಿ ಎಲ್ಲೋ ಅಲ್ಲೊಂದು ಇಲ್ಲೊಂದು ಕೂದ್ಲು ಇದ್ದೊ. ಯಾರೊ ದಾರವಾಡದ ಕಡೇನ್ ತರ ಕಾಣ್ತಿದ್ನಪ್ಪ. ನಾನೂ ಕೇಳತಕ ಕೇಳಿ ವಾಪಸ್ ಬಂದೆ. ಸಲ್ಪ ಒತ್ತಿಗೆ ಅದು ಮತ್ರೋಯ್ತು.
ಮತ್ತೆ ಚಂದಾಗಿ ಹಾಡ್ತಾ ಇದ್ದೀಯ. ಮತ್ರೋಯ್ತು ಅಂತ ಬ್ಯಾರೆ ಏಳ್ತಿಯ, ಇದ್ಯಂಗೆ?
ಅಮ್ಯಾಲೆ ಸದಾನಂದಗೌಡ್ರು ಮನೆ ಅತ್ರ ಬತ್ರಾ ಇದ್ದೆ. ಅಲ್ಲೂ ಅದೇ ಹಾಡು ಕೇಳ್ತಾ ಇತ್ತು. ಅಲ್ಲಿ ಓಗಿ ನೋಡಿದ್ರೆ ಅವ್ರೇ ಹಾಡ್ತಾ ಇದ್ರು. ಅದೂ ಇದೇ ಹಾಡು. ಸಲ್ಪ ಯತ್ವಾಸ ಅಷ್ಟೆಯ.
ಏನ್ ಯತ್ವಾಸ?
ಬಿಟ್ಟೇನೆಂದರೆ ಬಿಡದೀ ಮಾಯೆ ಅನ್ನತಕ ಒಂದೇ ತರ ಇತ್ತು. ಅಮ್ಯಾಲೆ ಅವ್ರು ಈ ಯಡೂರಪ್ಪನ ಮಾಯೆ ಅಂತ ಆಡ್ತಾ ಇದ್ರು.
ಅವ್ರಿಗೆ ಯಾರೂ ವೀಣೆ, ತಬ್ಲ ನುಡ್ಸರು ಸಿಕ್ಕಲಿಲ್ವೇನೊ ಪಾಪ!
ಇದ್ರು ಕಣಣ್ಣ. ವಬ್ಬ ಗುಂಗ್ರು ಕೂದ್ಲು. ಜುಬ್ಬ ಆಕ್ಯಂಡು ಹಣೆಗೆ ನಾಮ ಇಕ್ಯಂಡು ತಬ್ಲ ಬಡೀತಿದ್ದ. ಬಾಳ ಜೋರಾಗಿದ್ದ. ಅವ್ನು ತಲೆ ವಗ್ಯದೇನ್ ಕೇಳ್ತಿ. ಅಂಗೆಯ ಬಯಂಕರವಾಗಿತ್ತು ಕಣಣ್ಣ.
ಮತ್ತೆ ವೀಣೆ ನುಡ್ಸಕೆ ಯಾರೂ ಇಲ್ರಿಲ್ವೆ?
ವಬ್ಬ ವಯ್ಯ ನುಡುಸ್ತಾ ಇದ್ದ. ಅವ್ನ ತಲೇಲಿ ಕೂದ್ಲು ಇಲ್ರಿಲ್ಲ. ಆದ್ರುವೆ ಅಲ್ಲೊ ಇಲ್ಲೊ ಇದ್ದ ಕೂದ್ಲನ್ಯಲ್ಲಾ ಸೇಸ್ರಿ ತಲೆ ತುಂಬಾ ಬರಂಗೆ ಮಾಡಿಕಂಡಿದ್ನಪ್ಪ. ಹಲ್ಲುಬ್ಬು. ಕೋಲ್ಮುಕ. ಬ್ಯಳ್ಳಗೆ ಬ್ಯಳ್ಳೆಕಾರ್ರಿದ್ದಂಗಿದ್ದ.
ಸದಾನಂದಗೌಡ್ರು ದುಃಖದಲ್ಲಿ ಹಾಡ್ತಾ ಇದ್ರು ಅನುಸ್ತದೆ.
ಅವ್ರುದು ಮಾಮೂಲು ಗೊತ್ತಿಲ್ವೇನಣ್ಣ. ಸುಕದÀ ಹಾಡಾಗ್ಲಿ, ದುಃಕದÀ ಹಾಡಾಗ್ಲಿ ಅವ್ರು ಸಂತೋಸ್ವಾಗೇ ಆಡದು.
ಆಮ್ಯಾಲೆ ಇನ್ನೆಲ್ಲೂ ಓಗ್ಲಿಲ್ವೆ?
ದಾರೀಲಿ ಬತ್ತಾ ಇದ್ದೆ. ಹರನೇ ಸಿವಪ್ಪ ಕಾಯೋ ತಂದೆ, ಮೂರು ಲೋಕದ ಸ್ವಾಮಿ ದೇವ ಹಸುವೆಯನ್ನು ತಾಳಲಾರೆ, ಕಾಪಾಡಯ್ಯ, ಓಗ್ಲಿ ನೀರ ಕೊಡಯ್ಯ ಅಂತ ಹಾಡದು ಕೇಳುಸ್ತು. ಯಾರು ಏಳ್ತಾ ಇರದು ಅಂತ ನೋಡಿದ್ರೆ ತುಂಬಾ ಜನ. ಇಂತರು ಏಳ್ತಾ ಅವ್ರೆ ಅನ್ನದ ಕಂಡಿಡ್ಯಕೇ ಆಗ್ಲಿಲ್ಲ.
- ಈ.ಬಸವರಾಜು, ಮಲ್ಲೇನಹಳ್ಳಿ
ಕಾಯ್ರದಶ್ರಿ, ಕನ್ರಾಟಕ ಜಾÕನ ವಿಜಾÕನ ಸಮಿತಿ
ಈಮೇಲ್: ebasavraju@gmail.com
9448957666 



Friday, 20 April 2012

ಸಂಘಪರಿವಾರ-ಬರಪರಿವಾರ-ಜನಪರಿವಾರ
ಯಣ್ಣ, ಪರಿವಾರ ಅಂದ್ರೇನು?
ಪರಿವಾರ ಅಂದ್ರೆ ಒಂದು ಗುಂಪು, ಒಂದೇ ತರ ಯೋಚನೆ ಮಾಡೋ ಗುಂಪು ಅಂತ. ಈಗ್ಯಾಕಣ್ಣ ಅದ್ರ ವಿಸ್ಯ?
ಇತ್ತೀಚಿಗೆ ಪರಿವಾರದ ಬಗ್ಗೆ ಅಲ್ಲಿ-ಇಲ್ಲಿ ಕೇಳ್ತಲೇ ಇದ್ದೀನಿ, ಅದ್ಕೆ ಅದೇನು ಅಂತ ತಿಳ್ಕಳನ ಅಂತ ನಿನ್ನತ್ರ ಬಂದೆ.
ಆಯ್ತು ಅದೇನ್ ಕೇಳಣ್ಣ. ಗೊತ್ತಿರದ ಏಳಕ್ಕೇನು? ಗೊತ್ತಿಲ್ದೇ ಇದ್ರೆ ಗೊತ್ತಿಲ್ಲ ಅಚಿತಿನಿ, ಯಾರಾರ ದ್ವಡ್ಡರ್ನ ಕೇಳಿ ತಿಳ್ಕಬೌದು.
ಸಂಘಪರಿವಾರ ಅಂತರಲ, ಅದೇನು? ಅವ್ರು ಏನ್ ಕ್ಯಲ್ಸವ ಒಟ್ಟಿಗೇ ಮಾಡ್ತರೆ?
ಸಂಘಪರಿವಾರ ಅಂದ್ರೆ ಬೀಜೇಪಿ ಪಕ್ಷವ ಬ್ಯಳ್ಸಕೆ ಉಟ್ಟಿಕಂಡಿರ ಗುಂಪುಗಳು. ಅವ್ರಿಗ್ರೆ ಒಂದು ದಮ್ರದ ಬಗ್ಗೆ ಮಾತ್ರ ಪ್ರೀತಿ. ಅದ್ರಿಂದ್ಲೇ ಯಲ್ಲಾ ಸಿಕ್ತದೆ ಅಂತ ನಂಬಿಕಂಡವ್ರೆ!
ಅಲ್ಲಿ ಯಾಯ್ರಾರಿರ್ತಾರೆ?
ಅಲ್ಲಿ ಎ.ಬಿ.ವಿ.ಪಿ, ಆರೆಸ್ಸೆಸ್, ವಿಶ್ವಹಿಂದೂಪರಿಷತ್ತು, ಶ್ರೀರಾಮಸ್ಯನ್ಯ, ಬಜರಂಗದಳ ಇತ್ಯಾದಿ, ಇತ್ಯಾದಿ..
ಅಂಗಾರೆ ವಿಜಾÕನ ಪರಿಷತ್ತೂ ಇದ್ರ ವಳ್ಗೆ ಸೇರ್ಕಂಡಿದ್ದತೆ?
ತೂ ಯಂತ ಮಾತಾಡ್ತಿಯ? ಅದ್ಕೂ ಸಂಘಪರಿವಾರಕ್ಕು ಅಷ್ಟಕಷ್ಟೆಯ.
ಇಷ್ಟೊಂದ್ ಯಸ್ರು ಇಟ್ಕಂಡ್ ಕ್ಯಲ್ಸ ಮಾಡ ಬದ್ಲು ಒಂದೇ ಯಸ್ರಿಟ್ಕಂಡು ಕ್ಯಲ್ಸ ಮಾಡದು ಸುಲಬ ಅಲ್ವೆ? 
ಅಂಗಲ್ಲ, ವಬ್ವಬ್ರಿಗೆ ಒಂದೊಂದ್ ತರ ಔಸ್ತಿ ಕೊಡ್ತರಲ ಡಾಕ್ಟ್ರು, ಅಂಗೆ ಇವ್ರು ಒಂದೊಂದ್ ತರ ಜನವ ಯಳ್ಯಕೆ ಒಂದೊಂದ್ ತರ ಸಂಗ ಇಟ್ಕಂಡವ್ರೆ ಅಷ್ಟೆಯ. ಕ್ವನಿಗೆ ಯಲ್ಲಾ ನದಿಗಳೂ ಸಮುದ್ರ ಸೇರಂಗೆ ಇವ್ರು ಯಲ್ಲ ಒಂದೇ ಕಡಿಕೆ ಸೇರ್ತರೆ.
ಬರಪರಿವಾರ ಅಂದ್ರೇನು? ಅವ್ರದು ಯಾವ್ ದಮ್ರ?
ಬರ ಪರಿವಾರದಲ್ಲಿ ಕಾಂಗ್ರೇಸು, ಜೆ.ಡಿ.ಎಸ್ಸು, ಬೀಜೇಪಿ, ಯಡೂರಪ್ಪ ಯಲ್ಲ ಸೇರ್ಕತ್ತರೆ. ಅವ್ರು ಯಲ್ಲಾ ಸೇಕ್ರಂಡು ಜನರಿಗೆ ಬರ ಬಂದದೆ, ದುಡ್ ಕೊಡಿ, ಅಂಗೆ ನಮ್ ಬರನೂ ನೀಗ್ಸಿ ಅಂತ ಒಂದಾಗಿ ಓರಾಡ್ತಾ ಅವ್ರೆ.
ಅಂಗಾರೆ ಬರ ಪರಿವಾದ್ರಲ್ಲಿ ಯಲ್ಲಾ ಒಟ್ಟಿಗಿದ್ದರೆ?
ಹೆಚ್ಚೂ ಕಮ್ಮಿ ಯಲ್ಲ ಒಂದೇ ಗುಂಪು.
ಮತ್ತೆ ಯಡೂರಪ್ಪ ಕೇಂದ್ರ ಸಕ್ರಾರ ಇಷ್್ಟ ದುಡ್ ಕೊಡ್ಲೇಬೇಕು ಅಂತನೆ, ಕುಮಾರಣ್ಣ ಕೇಂದ್ರ ಸಕ್ರಾರ-ರಾಜ್ಯ ಸಕ್ರಾರ ಇಬ್ರೂ ಸೇರಿ ಇಷ್್ಟ ಕೊಡ್ಲೇಬೇಕು ಅಂತನೆ, ಸಿದ್ರಾಮಣ್ಣ ಕೇಂದ್ರಸಕ್ರಾರ ಕೊಟ್ಟದೆ, ಆ ದುಡ್ಡ ಸದಾನಂದಗೌಡ ಎಣಿಸಕಾಗ್ದೇ ಹಿಂದಕ್ಕೆ ಕೊಟ್ಟವ್ನೆ, ನನ್ ಕೈಲಾರ ಕೊಟ್ಟಿದ್ರೆ ಎಣಿಸಿ ಕೊಡ್ತಿದ್ದೆ ಅಂತನೆ, ಯಡೂರಪ್ಪ ಒಂದ್ ತಾಲೂಕಿಗೆ ಒಂದ್ ಕೋಟಿ ಕೊಡಿ ಅಂತನೆ, ಸದಾನಂದಗೌಡ ಒಂದ್ ತಾಲೂಕಿಗೆ ಮೂವತ್ತು ಸಾವ್ರ ಕೊಡ್ತಿನಿ, ದುಡ್ಡಿಗೆ ತ್ವಂದ್ರಿಲ್ಲ ಅಂತನೆ. ವಬ್ವಬ್ರು ಒಂದೊಂದ್ ತರ ಏಳ್ತಾ ಅವ್ರೆ, ಆದ್ರೂ ಅವ್ರು ಯಲ್ಲಾ ಬರಪರಿವಾರದವ್ರು ಅಂತಿಯಲ್ಲಣ್ಣ?
ಯಲ್ಲಾ ಏಳದು ಸುಳ್ಳೆಯ. ನಿಜ ಜನಗಳಿಗೆ ಮಾತ್ರ ಗೊತ್ತು. ಅವ್ರು ಯಲ್ಲಾ ಸೇರ್ಕಂಡು ಪ್ರಚಾರ ತಗಂಡು ಸಿಕ್ಕಿದಷ್್ಟ ದುಡ್ ತಗಳಕೆ ಬಂದವ್ರೆ. ಅದ್ಕೆಯ ಯಲ್ಲಾ ಒಂದೇ ಪರಿವಾರದವ್ರು ಅಂತ ನಾನು ಏಳದು.
ಅಂಗಾರೆ ಜನರ ತ್ವಂದ್ರೆ ಪರಿಹರಿಸೋರ್ಯಾರು?
ನಾವ್ಯಲ್ಲ ಸೇರ್ಕಂಡು ಜನಪರಿವಾರ ಅಂತ ಮಾಡಿಕಂಡು ಈ ಸಂಘಪರಿವಾರ ಮತ್ತೆ ಬರಪರಿವಾರ ಯಳ್ಡೂ ಗುಂಪಿಗೂ ಲಾತ ಕೊಟ್ರೆ ನಮ್ ಸಮಸ್ಯೆ ಪರಿಹಾರ ಆಗ್ಬೌದು. ಆದ್ರೂ ಅಷ್್ಟ ಸುಲಭ ಅಲ್ಲ. ಬಾಳ ಪ್ರಯತ್ನ ಮಾಡ್ಬೇಕು.
- ಈ.ಬಸವರಾಜು

 ನಗು ನಗುತಾ ನಲಿ, ನಲಿ, ಯಾರೇ ಬೀಳಲಿ!
ಯಣ್ಣ, ಒಂದ್ ಸತಿ ಬಿದ್ ಮ್ಯಾಲೆ ತಿಗ್ರ ತಿಗ್ ಬೀಳಕ್ಕೋದರೆ?
ಅದ್ಯಂಗಾದತು? ಒಂದ್ ಸತಿ ಬಿದ್ ಮ್ಯಾಲೆ ಬುದ್ದಿ ಕಲಿಬೇಕಪ್ಪ. ಇಲ್ಲ ಅಂದ್ರೆ ಬುದ್ದಿ ಇಲ್ದೋರು ಅಂತರೆ. ಅದಿಲ್ರಿ, ಈಗ ಯಾರು ಬಿದ್ದ ಕಡಿಕೇ ಬೀಳಕೋಗಿರರು?
ಅದೆ ನಮ್ ಬಿದ್ರಿ ಸಾಯೇಬ್ರು.
ಅದ್ಯಾರಪ್ಪ ಬಿದ್ರಿ ಸಾಯಾಬ್ರು?
ನಮ್ ಸಂಕರ ಬಿದ್ರಿ ಸಾಯಾಬ್ರು ಕಣಣ್ಣ.
ಅವ್ರು ಯಾಕ್ ಬೀಳಕೋದ್ರು? ಯಾರಾರ ತಳ್ಳಿದ್ರೆ?
ಇಂಗೆ ನಮ್ ಯಡೂರಪ್ಪರ್ ಮಾತ ಕೇಳಿ ಬಿದ್ರಂತೆ.
ತಿಗ್ರ ಇನ್ನೊಂದ್ ಸತಿ ಯಾರ್ ಬೀಳ್ಸಿದ್ರಂತೆ?
ಇವ್ರನ್ನ ಐ.ಜಿ.ಪಿ ಮಾಡಿದ್ದು ಅಡ್ಡ ಮಾಗ್ರದಲ್ಲಂತೆ, ಅದ ಇನ್ವಬ್ರು ಕ್ವಚನ್ ಮಾಡಿದ್ರಂತೆ, ಹೈಕೋಟ್ರು ಬಿದ್ರಿ ಸಾಯಾಬ್ರು ಸೀಟ ಕಾಲಿ ಮಾಡ್ಸಿ ಇನ್ವಬ್ರಿಗೆ ಕೊಡಿ ಅಂತಂತೆ.
ಕೋಟ್ರು ಏಳಿದ್ ಮ್ಯಾಲೆ ಮಾಡ್ಲೇಬೇಕಲ್ವೆ?
ಅದ್ಕೆ ಬಿದ್ರಿ ಸಾಯಾಬ್ರು, ಸದಾನಂದಗೌಡ್ರು ಇಬ್ರೂ ಸೇರಿ ಸುಪ್ರೀಂ ಕೋಟ್ರಿಗೆ ಅಜ್ರಿ ಆಕಿ, ಆ ಸೀಟು ಬಿದ್ರಿ ಸಾಯಾಬ್ರಿಗೇ ಸೇಬ್ರೇಕು, ಕೊಡಿ ಅಂದ್ರಂತೆ.
ಸುಪ್ರೀಂ ಕೋಟ್ರು ಏನಂತಂತೆ.
ಅಲ್ಲ ಕಣ್ರಯ್ಯ, ಹಿಂದಿದ್ದ ವ್ಯಕ್ತೀನ ಮುಂದಕ್ಕೆ ತಳ್ಳಿ, ಮುಂದಕ್ಕೋಗ್ ಬೇಕಾದವ್ನ ಹಿಂದಕ್ ತಳ್ಳಿದ್ದೀರಲ, ನಿಮ್ಗೇನಾರ ಬುದ್ದಿ ಗಿದ್ದಿ ಇದ್ದತೆ? ಇದ ಕೇಳಕೆ ಡೆಲ್ಲೀತಕ ಬಂದಿದ್ದೀರಲ, ಮದ್ಲು ವಾಪಸ್ಸೋಗಿ ಅಂತ ಹೇಳ್ತಂತೆ, ಇನ್ನೇನ್ ಮಾಡದು ಅಂತವ ವಾಪಸ್ ಬಂದ್ರಂತೆ.
ಅಲ್ಲ ಕಣಣ್ಣ, ಯಳ್್ಡ ಜನ ನೀವು ಮಾಡಿರದು ತಪ್ಪು, ತಿದ್ದಿಕಳ್ಳಿ ಅಂತ ಏಳಿದ್ದ ಕೇಳದ್ ಬುಟ್ಟು ಡೆಲ್ಲೀತಕ ಓಗಿ ಈ ಬಹುಮಾನ ತರಬೇಕಾಗಿತ್ತೆ? ಓಗ್ಲಿ ಅದ ಕೇಳಿ ಬಿದ್ರಿ ಸಾಯಾಬ್ರು ಏನಂದ್ರಂತೆ?
ಮಕವ ಗಂಟಾಕ್ಯಂಡು ಊರ್ ಕಡಿಕೆ ವಂಟ್ರಂತೆ.
ಸದಾನಂದಗೌಸ್ರು ಏನಂದ್ರಂತೆ?
ಅವ್ರು ನಗ್ತಲೇ ಇದ್ರಂತೆ, ಅದ್ಕೆ ಕೋಟ್ರಿನವ್ರು ನಗು ನಗುತಾ ನಲಿ, ನಲಿ, ಯಾರೇ ಬೀಳಲಿ ಅಂತ ಏಳಿ ಕಳ್ಸಿದ್ರಂತೆ.
ಸದಾನಂದಗೌಡ್ರು ನಗ್ತಾ ಇದ್ದದ್ ನೋಡಿ ಬಿದ್ರಿ ಸಾಯಾಬ್ರು ಏನಂದ್ರಂತೆ?
ಈ ವಯ್ಯ ನಂಗೆ ಅವಮಾನ ಆಗಿದ್ರೂ ಇಂಗ್ ನಗ್ತಾ ಅವ್ನಲ, ಇವ್ನು ನನ್ನ ಪವ್ರಾಗ್ಯವ್ನೋ, ಇಲ್ಲ ವಿರೋದ್ವಾಗ್ಯವ್ನೋ ಒಂದು ತಿಳ್ತಾ ಇಲ್ಲ ಅನ್ಕಂಡು ಬಂದ್ರಂತೆ.
- ಈ.ಬಸವರಾಜು



ಮೂರು ಜನ ಊರಿಗೋದ್ರಂತೆ.
ಯಣ್ಣ, ಒಂದ್ ಕತೆ ಏಳ್ತಿನಿ, ಕೇಳಿಸ್ಕಬೇಕು.
ಅದೇನೇಳಣ್ಣ, ನೀನಿರದೇ ಏಳಕೆ, ನಾನಿರದೇ ಕೇಳಕೆ.
ಮೂರು ಜನ ಒಂದ್ ಬರ ಬಂದಿರ ಊರಿಗೆ ಓದ್ರಂತೆ. ಜನ ಯಲ್ಲ ಸೇರ್ಕಂಡ್ರಂತೆ. ವಬ್ಬ ಹದ್ನಾರು ಹಲ್ನೂ ಬುಟ್ಕಂಡು ನಗಾಡಿಕಂಡು ಮಾತಾಡಕೆ ಸುರು ಮಾಡಿದ್ನಂತೆ. ಅದ ನೋಡಿ ಜನಕ್ಕೆ ತುಂಬಾ ಕೋಪ ಬಂತಂತೆ. ನಾವಿಲ್ಲಿ ನೋಡಿದ್ರೆ ನೀರು, ನ್ಯರಳಿಲ್ಲ ಏನಪ್ಪ ಮಾಡದು, ಇವ್ನು ಏನಾರ ಮಾಡ್ತನೆ ಅಂತ ನೋಡಿದ್ರೆ ನಗಾಡ್ತಾ ಅವ್ನೆ ಅಂದ್ ಬುಟ್ಟು ಮುಚ್ಚಯ್ಯ ಬಾಯ ಅಂದ್ರಂತೆ. ಇವ್ನು ಅದ್ಕೂ ನಗ್ತಾ ಇದ್ನಂತೆ. ಇವ್ನು ಯಾಕೋ ಸುಮ್ಕಾಗದಿಲ್ಲ ಅಂದ್ ಬುಟ್ಟು ಅಳ್ಳಿಮರದ ಅಂಟ ತಂದು ಬಾಯಿಗಾಕಿದ್ರಂತೆ. ಆಗ ಸುಮ್ನಾದ್ನಂತೆ.
ಇನ್ವಬ್ಬ ಗರಂ ಅಂದ್ಕಂಡು ಮಾತಾಡಕೆ ಸುರು ಮಾಡಿದ್ನಂತೆ. ಮಕ ಅಂಗೆಯ ಉರೀತಿತ್ತಂತೆ. ನಾನು ಎಷ್ಟೊಂದು ಅಬಿವೃದ್ದಿ ಕಾಯ್ರಕ್ರಮಗಳ ಮಾಡಿದ್ದಿನಿ. ಆದ್ರೂ ಅವ್ನು ಯಾವೊನೊ ನನ್ನ ಕುಚ್ರಿಯಿಂದ ಕ್ಯಳಿಗೆ ಬೀಳಿಸ್ಬುಟ್ಟ. ನೀವ್ಯಲ್ಲ ಸೇರಿ ನನ್ನ ಕುಚ್ರಿ ಮ್ಯಾಲೆ ತಿಗ್ರ ಕುಂಡ್ರಿಸಿದ್ರೆ ತಿಗ್ರ ನಾನು ಅಬಿವೃದ್ದಿ ಕ್ಯಲ್ಸವ ಮುಂದುವರುಸ್ತಿನಿ. ಒಂದೊಂದ್ ಊರಿಗೆ ಇಷ್್ಟ ಕೋಟಿ ಅಂತ ಸಕ್ರಾರ ಕೊಡ್ಬೇಕು. ಇವ್ನು ಕೊಡ್ದೇ ಇದ್ರೆ ಇಳ್ಸಿ ನನ್ನ ಕುಂಡ್ರಿಸಿ. ನಾನು ಕೊಡ್ತಿನಿ,  ನನ್ ಗಾಚಾರ್ವೇ ಸರಿ ಇಲ್ಲ. ಎಲ್ಲಿಗೋದ್ರೂ ನಂಗೆ ಈ ವಚನ ಬ್ರಷ್ಟರೇ ಸಿಗ್ತಾರೆ. ಆಡಿದ್ ಮಾತ ಉಳಿಸ್ಕಳದೇ ಇಲ್ಲ. ಅದೇನೇ ಆಗ್ಲಿ, ನಾನಂತು ಕುಚ್ರಿ ಸಿಗತಕ ಸುಮ್ಕಿರ ಮಗ್ನೇ ಅಲ್ಲ. ಏನಂತಿರಿ ಅಂದ್ನಂತೆ. ಆಗ ಜನ ನಾವ್ ಬರ ಬಂದು ನರಳ್ತಾ ಇದ್ದಿವಿ. ಇವ್ನಿಗೊಂತರ ದೆವ್ವ ಇಡ್ದದೆ. ಇವ್ನಿಂದ ನಮಿಗೇನೂ ಅನ್ಕೂಲ ಇಲ್ಲ ಅಂದುಕೊಂಡ ವಬ್ಬ, ಸಾ ಅಲ್ಲಿ ವಬ್ ಸ್ವಾಮಿ ಅವ್ರೆ. ಅವ್ರ ಕೂದ್ಲು ಎಷ್ಟವೆ ಅಂತವ ಸರಿಯಾಗಿ ಎಣಿಸಿದ್ರೆ ನೀವು ತಿಗ್ರ ಮುಖ್ಯ ಮಂತ್ರಿ ಆಗ್ತಿರಂತೆ ಎಂದ. ಕೂಡ್ಲೇ ಆಸಾಮಿ ನಾಪತ್ತೆಯಾದ.
ಮೂರನೇ ವ್ಯಕ್ತಿ ಮಾತಾಡಕೆ ಸುರು ಮಾಡಿದ. ನೋಡಿ ಬಂದುಗಳೆ, ನಾನು ಯಾವ ಸನ್ನಿವೇಶದಲ್ಲಿ ನಿಮ್ಮ ಊರಿಗೆ ಬಂದಿದ್ದೇನೆ, ಯಾವ ಶಕ್ತಿ ನನ್ನನ್ನು ನಿಮ್ಮ ಊರಿಗೆ ಕಳಿಸಿಕೊಟ್ಟಿದೆ, ನೀವು ಎಂತಹ ಸಂಕಷ್ಟಗಳ ಸನ್ನಿವೇಶದಲ್ಲಿ ಬದುಕನ್ನು ಸಾಗಿಸುತ್ತಿದ್ದೀರಿ, ಈ ನೋವಿನಿಂದ ನಿಮ್ಮನ್ನು ಬಿಡುಗಡೆ ಮಾಡಲು ಯಾವ ರೀತಿಯ ಸಂವೇದನಾಶೀಲತೆಯುಳ್ಳ ನಾಯಕನು ಬೇಕಾಗುತ್ತದೆ ಎಂಬುದನ್ನು ನಿಮ್ಮ ಆತ್ಮಸಾಕ್ಷಿಗೆ ಬಿಡುತ್ತೇನೆ, ಏನು ಒಂದು ನಾನು ನಿಮ್ಮ ಊರಿಗೆ ಬಂದಿದ್ದೇನೆ, ಈ ಒಂದು ಕ್ಷಣವನ್ನ ನಾನು ನನ್ನ ಜೀವಮಾನದಲ್ಲೇ ಮರೆಯಲು ಸಾಧ್ಯವಿಲ್ಲ ಎಂದು ಗಳಗಳನೆ ಅತ್ನಂತೆ. ಅಲ್ಲಿದ್ದ ಜನಗಳೂ ತಮ್ಮ ನೋವನ್ನು ಮರೆತು ಈತನೊಂದಿಗೆ ಸೇರಿ ಅತ್ತರಂತೆ. ಒಂದ್ ಅಜ್ಜಿ ಒಂದ್ ಚಂಬು ಮಜ್ಜಿಗೆ ತಂದು ಇದ್ನಾರ ಕುಡ್ದು ನಿನ್ನ ದುಃಖ ಕಡಿಮೆ ಮಾಡಿಕಳಪ್ಪ ಅಂದರಂತೆ.
ಈಗ ನನ್ ಕತೆ ಮುಗೀತು. ಈಗೇಳು, ಇವರು ಮೂರು ಜನರ ಯಾರು ಅಂತವ? 
ಯಣ್ಣ ನನ್ನ ಕೈಲಿ ಇದ್ಕೆ ಉತ್ರ ಏಳಕೆ ಆಗ್ತಾ ಇಲ್ಲ. ನಾನು ಅಷ್ಟೊಂದ ಓದಿಲ್ಲ. ಇದ ನಮ್ ಕನ್ರಾಟಕದ್ ಜನಕ್ಕೆ ಬುಡ್ತಿನಿ,  ಸದ್ದಿಕೆ ತಲೆ ಸಿಡಿತಾ ಅದೆ, ಬಾ ಸ್ವಲ್ಪ ಕಾಪಿ ಕೊಡ್ಸು.
- ಈ.ಬಸವರಾಜು




"ಬೈರಪ್ಪನ ಗೋಳು" ಎಂಬ ಸಾಮಾಜಿಕ ನಾಟಕ !!!
ಯಣ್ಣ, "ಬೈರಪ್ಪನ ಗೋಳು" ಅನ್ನೋ ನಾಟ್ಕ ನೋಡಿದ್ದೀಯ?
ಇದೇನಣ್ಣ? ಹೆಣ್ಣಿನ ಗೋಳು, ಗೋವಿನ ಗೋಳು, ಯಮನ ಸೋಲು ಅನ್ನ ನಾಟ್ಕದ ಯಸ್ರು ಕೇಳಿದ್ದೀನಿ, ಈ ಬೈರಪ್ಪನ ಗೋಳು ಅನ್ನ ನಾಟಕದ ಬಗ್ಗೆ ಕೇಳೂ ಇಲ್ಲ, ನೋಡೂ ಇಲ್ಲ.  ಅದ್ಯಾವುದು ಏಳಣ್ಣ.
ದಿನಾ ಪೇಪ್ರ ಓದುತಾ ಇರು, ಆಗ ಗೊತ್ತಾಯ್ತದೆ. 
ಪೇಪ್ರ ಓದ್ತಿನಿ, ಆದ್ರೂ ತಲಿಗೆ ವಳಿವಲ್ದಪ್ಪ.
ನಾನೇ ಏಳ್ತಿನಿ ಬುಡು. ನಮ್ ಸಂತೆಸಿವರದ ಬೈರಪ್ಪ ಗೊತ್ತೊ?
ಅದೆ ಕತೆ ಬರಿತಿತ್ರನಲ ಅವ್ನೆ?
ಊ ಕಣಣ್ಣ. ಅವ್ನೆಯ. ಅವೊತ್ತು ಊರ್ವಳಗ್ಯಲ್ಲ ಮ್ಯರ್ವಣಿಗೆ ಮಾಡ್ಳಿಲ್ವೆ ನಾವು?
ಆಯ್ತು ಮುಂದುಕ್ಕೇಳು.
ಅವ್ನು ಸತ್ಯ ಏಳೋ ಕತೆ-ಪುಸ್ತಕ ಬರುದ್ರೆ ಜನ ಒಪ್ತಾ ಇಲ್ಲ, ನಾನೇನ್ ಮಾಡ್ಳಿ ಅಂತವ ಪಂಕ್ಷನ್ ನಲಿ ಗೋಳೋ ಅಂತವ ಅತ್ನಂತೆ. ಅದ ಯಾರೋ ನಾಟ್ಕ ಬರಿಯೋನು ನೋಡಿ "ಬೈರಪ್ಪನಗೋಳು" ಅಂತ ಪುಸ್ತಕ ಬರುದ್ನಂತೆ! ಸಿಕ್ಕಾಪಟ್ಟೆ ಕಚ್ರಾಯ್ತಾ ಇದ್ದತಂತೆ!
ಸತ್ಯ ಅನ್ನದು ಇವತ್ತಲ್ಲ ನಾಳಿಕ್ಕೆ ಜನಗಳಿಗೆ ತಿಳಿತದಪ್ಪ, ಅದ್ಕೆ ಅವ್ನು ಅಳೋದ್ಯಾಕೆ?
ಏನಾಗ್ಯದೆ ಅಂದ್ರೆ ಇವ್ನು ಸತ್ಯ ಅನ್ನದ್ನ ಕ್ಯಲುವ್ರು ಸುಳ್ಳು ಅಂತರಂತೆ, ಅವ್ರು ಸತ್ಯ ಅನ್ನದ ಇವ್ನು ಸುಳ್ಳು ಅಂತನಂತೆ, ಅಲ್ಲೆ ಪ್ರಾಬ್ಲಮ್ಮು ಬಂದಿರದು!
ಸತ್ಯ ಅನ್ನದು ಒಂದೆ ಇರ್ಬೇಕಪ್ಪ, ಇವುನೇಳದೇನಂತೆ?
ನಮ್ ದೇಶದಲ್ಲಿ ಇವತ್ತು ಇರೋ ಪ್ರಾಬ್ಲಂ ಗಳಿಗೆ ಮುಸ್ಲಿಂ ರಾಜ್ರುಗಳು ಸರಿಯಾಗಿ ಕ್ಯಲ್ಸ ಮಾಡದೇ ಇದ್ದದ್ದೇ ಕಾರಣ, ಮುಸ್ಲಿಂ ರಿಗೆ ಸಕ್ರಾರ  ಮಣೆ ಹಾಕ್ಬಾರ್ದು ಅನ್ನದು ಇವ್ನ ವಾದ್ವಂತೆ.
ಬ್ಯಾರೆರೇನ್ ಏಳ್ತರಂತೆ?
ಸನಾತನ ಧಮ್ರ ಅಂತ ಏಳ್ಕಂಡು ಕ್ಯಲುವ್ರೇ ಅದಿಕಾರ ನಡ್ಸಿದ್ರು. ದುಡಿಯೋ ಜನಗಳ್ನ ಕೀಳಾಗಿ ಕಂಡ್ರು. ಅಸಮಾನತೆ ಬ್ಯಳ್ಸಿದ್ರು. ಅದ್ರಿಂದ ನಮ್ ದೇಶ ಹಿಂದಕ್ಕೋಗ್ಯದೆ ಅಂತ ಏಳ್ತರೆ.
ಸಾಬ್ರಿಗೆ ಮಣೆ ಹಾಕದು ಅಂದ್ರೇನು?
ಇದ್ದೇ ಅಯ್ತಲಣ್ಣ, ಸಕ್ರಾರದಿಂದ ಏನಾದ್ರು ಹೆಲ್್ಪ ಮಾಡದು, ಯಗುಲ್ ಮ್ಯಾಕೆ ಕೈಯಾಕಿ ಮಾತಾಡ್ಸದು.
ತ್ವಂದ್ರೇಲಿ ಇರೋರಿಗೆ ಎಲ್್ಪ ಮಾಡದು, ಚನ್ನಾಗಿದ್ದೀಯ ಅಂತವ ಯಗುಲ್ ಮ್ಯಾಲೆ ಕೈಯಾಕಿ ಮಾತಾಡ್ಸಿದ್ರೆ ಇವ್ನಿಗೇನಂತೆ ತ್ವಂದ್ರೆ?
ಅದು ಅವ್ನ ತ್ವಂದ್ರೆ ಅಲ್ವಂತೆ. ಅವ್ನು ಒಂದ್ ಇಸ್ಕೂಲಲಿ ಓದ್ಯವ್ನೆ. ಅಲ್ಲಿ ಇದ್ನೇ ಏಳ್ಕೊಟ್ಟವ್ರೆ. ಅವ್ರು ಮಾತಾಡದೂ ಅದೆಯ, ಬರಿಯೋದೂ ಅದೆಯ.
ಅಂಗೇಳು ಮತ್ತೆ. ಜನಗಳ್ಯಲ್ಲ ಒಂದೆಯ ಅಂತರೆ, ಆದ್ರೆ ವಳಗ್ವಳಗೆ ಅವ್ನು ಇಂತನು, ನಂಬ ಬ್ಯಾಡಿ ಅಂತ ಏಳ್ಕೊಡ್ತರೆ, ಇದ್ರಿಂದ ಜನ ಕಿತ್ತಾಡ್ತಾ ಇತ್ರರೆ. ಅದ್ರಲ್ಲಿ ಇವ್ರು ಬ್ಯಾಳೆಕಾಳ ಬೇಯಿಸ್ಕತ್ತರೆ.
ಅಂಗಾರೆ ಈ ಬೈರಪ್ಪನ ಗೋಳು ಅನ್ನದು ಡೂಪ್ಲಿಕೇಟ್ ನಾಟ್ಕ ಅನ್ನು?
ನೋಡಣ್ಣ. ಯಾಯ್ರಾರು ಪಬ್ಲಿಕ್ ಮುಂದೆ ಗೋಳಾಡ್ತರೆ, ಅದ್ಯಲ್ಲ ಒಂತರ ಡೂಪ್ಲಿಕೇಟ್ ನಾಟಕ್ವೆಯ. ನೀನು ಉಸಾರಾಗಿರು! ಅಯ್ಯೋ ಪಾಪ ಅನ್ನಕೋಗ್ ಬ್ಯಾಡ!
- ಈ.ಬಸವರಾಜು



ಕಾಂಗ್ರೇಸ್ ಗೆ ಬನ್ನಿ ಬದಲಾವಣೆ ತನ್ನಿ
ಯಣ್ಣ, ಕಾಂಗ್ರೇಸಿಗೋಯ್ತಿಯ?
ಯಾಕಣ್ಣ ಇಂಗ್ ಕೇಳ್ತಿಯ? ನಂಗೂ ರಾಜಕೀಯಕ್ಕೂ ಯಾಕೋ ಆಗಿಬರ್ತಾ ಇಲ್ಲ. ಅದ್ಯಲ್ಲ ನಮಿಗೆ ಬ್ಯಾಡಕಣಣ್ಣ.
ಅಂಗಲ್ಲ, ಕಾಂಗ್ರೇಸ್ ನವ್ರು ಕಾಂಗ್ರೇಸ್ ಗೆ ಬನ್ನಿ, ಬದಲಾವಣೆ ತನ್ನಿ ಅಂತವ ಊರ್ ತುಂಬಾ ಪ್ಲೆಕ್್ಸ ಆಕ್ಯವ್ರೆ, ಅದ್ಕೆ ನೀನೇನಾರ ಓಯ್ತಾ ಇದ್ದೀಯೇನೋ ಅಂತ ಕೇಳ್ದೆ ಅಷ್ಟೆಯ.
ಇಲ್ಲ ಕಣಣ್ಣ, ನಾನು ಓಗದಿಲ್ಲ.
ಮತ್ತೆ ಯಲ್ಲ ನಿನ್ನಂಗೆ ಅಂದ್ರೆ ಕಾಂಗ್ರೇಸು ಬದಲಾಗದ್ಯಂಗೆ ಅಂತಿನಿ?
ನಾವು ಓಗ್ದೆ ಇದ್ರೆ ಅದು ಬದಲಾಗದಿಲ್ಲ ಅಂತಿಯ?
ಅದ ನಾನೇಳದಲ್ಲ, ನೀನೇಳದಲ್ಲ. ಹಿಂದೆ ರಾವುಲ್ ಗಾಂದಿ ಇಂಡೈರೆಕ್್ಟ ಆಗಿ ಏಳಿದ್ದ. ಯುವುಕ್ರು ರಾಜಕೀಯಕ್ಕೆ ಬನ್ನಿ ಅಂತವ. ಈಗ ಡೈರೆಕ್್ಟ ಆಗಿ ಏಳ್ತಾ ಅವ್ರೆ. ಈಗ್ಲೂ ಓಗ್ದೇ ಇದ್ರೆ ಯಂಗೆ?
ಈಗ ಅಲ್ಲೇ ಜಾಸ್ತಿ ಜನ ಆಗ್ಯವ್ರೆ. ಕಿತ್ತಾಡ್ಕಬ್ಯಾಡಿ ಅಂತವ ಸೋನಿಗಾಂದಿ ಬ್ಯಾರೆ ಏಳಿದ್ದಳಂತೆ. ಅಂತದ್ರಲ್ಲಿ ನಾನೂ ಓಗಿ ಕಿತ್ತಾಡು ಅಂತಿಯ?
ಕಿತ್ತಾಡಕಲ್ಲ, ನೀನು-ನಾನು ಓಗ್ಬೇಕಾಗಿರದು. ಬದ್ಲಾವಣೆ ತರಕೆ.
ಅಂಗಂದ್ರೇನು ಅಂತವ ಅಥ್ರ ಆಗ್ತಾ ಇಲ್ಲ ಕಣಣ್ಣ.
ಅಂಗಂದ್ರೆ  ನಾವ್ಯಲ್ಲ ಇಷ್್ಟ ದಿನ ಇದ್ದು ಬದ್ಲಾವಣೆ ತರಕೆ ಆಗ್ಲಿಲ್ಲ, ನಮ್ ಕೈಲಿ ಅದು ಆಗದಿಲ್ಲ. ಎಲ್ಲಿದ್ವೋ ಅಲ್ಲೇ ಇದ್ದಿವಿ, ಅದ್ಕೆ ನೀವು ಬಂದು ಬದ್ಲಾಯ್ಸಿ ಅಂತ ಕರೀತಾವ್ರೆ.
ನಾವ್ಯಲ್ಲ ಓದ್ ಮ್ಯಾಲೆ ಅವ್ರು ಏನ್ ಮಾಡ್ತರಂತೆ. 
ನಾವ್ಯಲ್ಲ ಓದ್ ಮ್ಯಾಲೆ ಅವ್ರು ಹಿಂದಕ್ಕೋಯ್ತರೆ. ಅದೇ ಬದ್ಲಾವಣೆ.
ಎಲ್ಲಾರ ಉಂಟೇನಣ್ಣ, ಕಾಂಗ್ರೇಸಿನಲ್ಲಿರ ಲೀಡ್ರುಗಳೇ ವಬ್ರು ಕಾಲ ಇನ್ವಬ್ರು ಯಳೀತಾವ್ರೆ, ಅಂತದ್ರಲಿ ನಮ್ಮ ವಳಿಕ್ ಬುಟ್ಟು ಅವ್ರು ಆಚಿಗೋದರೆ? ಇದ್ರಲ್ಲಿ ಇನ್ನೇನೋ ಇರಬೌದು.
ಏನಿರ್ ಬೌದು ಅಂತಿಯ?
ಏನೂ ಇಲ್ಲ, ಉಡುಪಿ-ಚಿಕ್ಕಮಗಳೂರು ಎಂ.ಪಿ ಸೀಟ ಅಪರೂಪಕ್ಕೆ ಗೆದ್ದುಬುಟ್ಟವ್ರೆ. ಅದೊಂತರ ಬರ್ಗೆಟ್ ದೇವ್ರಿಗೆ ಪರ ಮಾಡಿದಂಗಾಗ್ಯದೆ. ಅಂಗಾಗಿ ಏನಾರ ವಸ ಸ್ಲೋಗನ್ ಕೊಡನ ಅಂತವ ಇಂಗ್ ಮಾಡ್ಯವ್ರೆ ಅಷ್ಟೆಯ. ಅವ್ರ ಬದ್ಲು ಮಾಡ್ತಿನಿ ಅಂತವ ನೀನೇನಾರ ವಳಿಕೋದ್ರೆ ನೀನೇ ಬದ್ಲಾಗಿ ಆಚಿಗೆ ಬರಬೇಕಾಯ್ತದೆ ಉಸಾರು.
- ಈ.ಬಸವರಾಜು, ಮಲ್ಲೇನಹಳ್ಳಿ

--
E.Basavaraju
Mandara, 4th main, Rukmininagar
Nagasandra post,  Bangalore-560012
9448957666


hi

ಯಡೂರಪ್ಪ ಅವರಿಂದ ಬರಪರಿಹಾರಕ್ಕಾಗಿ ಮನವಿ.
ಯಣ್ಣ, ನಮ್ ಯಡೂಪ್ಪ ಅವ್ರಿಗೆ ವಳ್ಳೆ ಬುದ್ದಿ ಬಂದಂಗದೆ!
ಅಂಗಾರೆ ಇಷ್್ಟ ದಿನ ವಳ್ಳೆ ಬುದ್ದಿ ಇಲ್ರಿಲ್ಲ ಅಂದಂಗಾಯ್ತು ನೀನೇಳದು. ಇದು ಯಡೂರಪ್ಪ ಅವ್ರ ಅಬಿಮಾನಿಗಳಿಗೆ ಗೊತ್ತಾದ್ರೆ ಅಷ್ಟೆಯ?
ನಾನು ಅಂಗೇನೇಳಿಲ್ಲ. ಜನ ಬರ ಬಂದು ನರಳ್ತಾ ಅವ್ರೆ. ಅವ್ರಿಗೆ ಪರಿಹಾರ ಕೊಡಿ ಅಂತ ಯಡೂರಪ್ಪ ಕೇಳ್ತಾ ಅವ್ರೆ. ಅದು ಸರಿ ಅಲ್ವೆ?
ಯಾರ್ನ ಏನಂತ ಕೇಳ್ತಾ ಅವ್ರೆ? ಇಲ್ಲಿರದು ಅವ್ರ ಸಕ್ರಾರ ಅಲ್ವೆ? ವಿದಾನಸೌದಕ್ಕೋಗಿ ಅವ್ರುನ್ನ ಕೇಳದ್ ಬುಟ್ಟು ಟೂರ್ ಮಾಡಿದ್ರೆ ಏನ್ ಬಂದತು?
ಕೇಂದ್ರ ಸಕ್ರಾರದವ್ರು ಅದೆಷ್ಟೋ ಕೋಟಿ ಕೊಡ್ಬೇಕು ಅಂತ ಯಡೂರಪ್ಪ ಕೇಳ್ತಾ ಇದ್ದರಂತೆ.
ಅದೆ! ಕೋಟಿಗಟ್ಲೆ ಕೊಡಿ, ನುಂಗಿ ನೀರ್ ಕುಡಿತಿವಿ ಅಂತ ಕೇಳ್ತಾ ಇರ್ಬೌದು.
ಏನ್ ಜನಗಳÀಪ್ಪ ನೀವು, ಏನ್ ಮಾಡಿದ್ರು ಕೊಂದ ಕ್ಯಾತೆ ತಗಿತೀರಿ.
ಯಣ್ಣ, ನೀನು ಸಯ್ರಾಗಿ ತಿಳ್ಕಬೇಕು. ಬರ ಬಂದಿರದು ಜನಗಳಿಗೇನೋ ಸರಿ. ಆದ್ರೆ ಯಡೂರಪ್ಪ ಟೂರ್ ಮಾಡಕ್ಕೆ ವಂಟಿರದು ಅವ್ನಿಗೆ ಬಂದಿರ ಬರ ನೀಗಿಸ್ಕಳಕಂತೆ.
ಯಡೂರಪ್ಪುಂಗೆ ಅದ್ಯಂತ ಬರ ಬಂದಿದ್ದತು?
ಅದು ಅದಿಕಾರದ ಬರ. ಆರ್ ತಿಂಗ್ಳಾದ್ ಮ್ಯಾಲೆ ಇನ್ನೊಂದ್ ಸತಿ ಮುಖ್ಯಮಂತ್ರಿ ಆಗಿ ಬಂದೇ ಬತ್ತಿನಿ ಅಂತ ಏಳಿದ್ನಲ, ಅದು ಸಿಕ್ಕಿಲ್ಲ, ಅದ್ಕೆ ಬರದ ಯಸ್ರಲ್ಲಿ ಟೂರ್ ವಂಟವ್ನೆ.
ಏನಪ್ಪ, ಒಂದೂ ಅತ್ರ ಆಯ್ತಾ ಇಲ್ಲ. ಜನಗಳ್ ಪರವಾಗಿ ಓರಾಟ ಮಾಡ್ತಿನಿ ಅಂತ ಯಡೂರಪ್ಪ 
ಏಳ್ತಾ ಅವ್ನೆ, ನೀನು ನೋಡಿದ್ರೆ ಇಂಗಂತಿಯ!
ಯಸ್ರು ಜನಗಳ್ದು, ಆದ್ರೆ ಕ್ಯಲ್ಸ ಆಗಬೇಕಿರದು ಯಡೂರಪ್ಪುಂದು.
ಸದಾನಂದಗೌಡ್ನೂ ಬರ ಬಂದಿರ ಕಡಿಕೆ ಟೂರ್ ಓಯ್ತಿನಿ ಅಂತ ಏಳ್ಯವ್ನೆ.
ಅವ್ನೂ ಅಷ್ಟೆಯ. ಯಡೂರಪ್ಪ ವಂಟ್ ಮ್ಯಾಲೆ ಇವ್ನು ಸುಮ್ನಿದ್ರೆ ಜನ ಏನಾರ ಅಂತರೆ ಅನ್ಕಂಡು ಅವ್ನೂ ವಂಟವ್ನೆ.
ಅಂಗಾರೆ ಇನ್ವಸಿ ದಿನ ಬುಟ್ಟು ಬ್ಯಾರೆ ಪಾಟ್ರಿಯವ್ರೂ ಟೂರ್ ವಂಡ್ ಬೌದು.
ಊ ಕಣಣ್ಣ. ಜನಗಳಿಗೆ ಬರ ಬಂದ್ರೆ ರಾಜಕೀಯದವ್ರಿಗೆ ಕ್ಯಲ್ಸ ದುಡ್ಡು ಸಿಗದು. ಇದ ಸಾಯಿನಾತ ಅನ್ನೋ ಪತ್ರಕತ್ರ ಯಾವಾಗ್ಲೋ ಏಳ್ಯವ್ನೆ. ಅದ್ಕೆ ಬರ, ಪ್ರವಾಹ ಬಂದ್ರೆ ಮಿನಿಷ್ಟ್ರು, ಯಮ್ಮಲ್ಲೆಗಳಿಗ್ಯಲ್ಲ ಕುಸಿ.
ಯುಡೂರಪ್ಪ, ಸದಾನಂದಗೌಡ ಯಲ್ಲ ಓದ್ರೆ ಜನಗಳಿಗೆ ಏನಾರ ಉಪಯೋಗ ಆದತೆ?
ಜನಗಳಿಗೆ ಏನಾದತೋ ನಂಗೊತ್ತಿಲ್ಲ. ಯಾಕೆ ಅಂದ್ರೆ ಇವ್ರು ಅಲ್ಲಿ ಓಗಿ ಅವ್ರ ಸಮಸ್ಯೆ ಪರಿಹರಿಸೋದ್ಕಿಂತ ಇವ್ರ ಬ್ಯಾಳೇಕಾಳ ಬೇಯಿಸ್ಕಳದೇ ಜಾಸ್ತಿ ಇತ್ರದೆ.
ಇವ್ರ ಬ್ಯಾಳೇಕಾಳು ಅಂದ್ರೆ?
ಅಂದ್ರೆ ಯಡೂರಪ್ಪ ಓಗಿರ ಮುಖ್ಯಮಂತ್ರಿ ಕುಚ್ರಿ ತಿಗ್ರ ತಗಬೇಕು. ಸದಾನಂದಗೌಡ ಸಿಕ್ಕಿರ ಕುಚ್ರಿ ಉಳಿಸ್ಕಬೇಕು. ಯಾಕೆ ಅಂದ್ರೆ ನಿಜ್ವಾಗಿ ಜನಗಳಿಗೆ ಏನ್ ಬೇಕು ಅನ್ನದ ಅದಿಕಾರಿಗಳಿಗೆ ಬಿಗಿ ಮಾಡಿ ಕ್ಯಲ್ಸ ಮಾಡ್ಸಿದ್ರೆ ಯಲ್ಲಾ ಆಯ್ತಳೆ. ಪ್ರಚಾರ ತಗಬೇಕು ಅನ್ನದೇ ಇವ್ರ ಉದ್ದೇಶ.
ಅಂಗಾರೆ ಜನ?
ಈಗ ಯಂಗವ್ರೋ ಅಂಗೆ ಕಾಲ ಆಕದು.
- ಈ.ಬಸವರಾಜು

--
E.Basavaraju
Mandara, 4th main, Rukmininagar
Nagasandra post,  Bangalore-560012
9448957666


Thursday, 19 April 2012

ಇದೇಳಕೆ ಆ ವಯ್ಯನೇ ಬೇಕಿತ್ತೆ?


ಇದೇಳಕೆ ಆ ವಯ್ಯನೇ ಬೇಕಿತ್ತೆ?

ಯಣ್ಣ, ಇದೇಳಕೆ ಆ ವಯ್ನೇ ಬೇಕಿತ್ತೆ? ಯಾರಾದ್ರೂ ಏಳಬೌದಪ್ಪ!

ಯಾರು ಏನೇಳಿದ್ರಣ್ಣ?

ಅದೇ ಆ ಕೋಡಿ ಮಟದ ಸ್ವಾಮಿ ಕಣಣ್ಣ.

ಏನಂದ್ನಣ್ಣ ಆ ವಯ್ಯ.

ಮಳೆ ಉಯ್ಯೋ ಕಡೀಕೆ ಉಯ್ತದೆ, ಕ್ಯಲುವ್ ಕಡಿಕೆ ಉಯ್ಯದಿಲ್ಲ ಅಂದವ್ನೆ.

ಅದ ವಯಸ್ಸಾಗಿ ಅನುಬವ ಇರ ಯಲ್ರೂ ಏಳ್ತರಪ್ಪ.

ಅದ್ಕೇ ನಾನು ಏಳಿದ್ದು, ಇದ ಏಳಕೆ ಆ ವಯ್ನೇ ಬೇಕಿತ್ತೆ ಅಂತವ.

ಇನ್ನೇನೇಳಿದ್ನಂತೆ?

ಒಂದೊಂದ್ ಕಡೆ ಬೂಕಂಪ ಆಗಬೌದು, ರೈಲು ಆಕ್ಸಿಡೆಂಟ್ ಆಗಬೌದು, ದ್ವಡ್ಡ ದ್ವಡ್ಡ ಊರುಗಳಲ್ಲಿ ಬೆಂಕಿ ಹತ್ತಿಕಂಡು ಉರಿಬೌದು, ನೂರಾರ್ ಜನ ಪ್ರಾಣ ಕಳ್ಕೋಬೌದು, ಇನ್ನೂ ಕ್ಯಲುವ್ರು ರಾಜಕೀಯದವ್ರು 
ಜೈಲಿಗೋಯ್ತರೆ, ಸದಾನಂದಗೌಡುಂಗೆ ಕಷ್ಟ ಬತ್ತದೆ, ರೈತ್ರು ಕಷ್ಟಪಟ್ಟು ದುಡುದ್ರೆ ಮಾತ್ರ ಬೆಳೆ ಬತ್ತದೆ, ಅಂತ ಏಳ್ಯವ್ನೆ.

ಯಣ್ಣ, ಇದ್ಕೆ ನಗ್ಬೇಕೋ, ಅಳ್ಬೇಕೋ ಒಂದೂ ಗೊತ್ತಾಯ್ತಾ

ಇಲ್ಲ.

ಪೇಪ್ರಿನವ್ರು ಅದೇ ದ್ವಡ್ ಸುದ್ದಿ ಅಂತ ಆಕದು, ಅದ ನೋಡಿ ಕ್ಯಲುವ್ರು ಯದ್ರಿಕಂಡು ಮಂತ್ರ, ಓಮ ಮಾಡದು ಇದ್ಯಲ್ಲ

ಏನಣ್ಣ?

ಅದೇನೋ, ಈ ಸ್ವಾಮಿಗಳು, ಜ್ಯೋತಿಷ್ಯ ಹೇಳರು ಬರೀ ಇಂತವ್ನೇ ಏಳ್ತಾ ಇರ್ತರಲ, ಇವ್ರಿಗೆ ವಳ್ಳೇ ಮಾತೇ ಬರದಿಲ್ವೆ? ಬದ್ಕ ಆಸೆ ಇಲ್ವೆ?

ಅವ್ರಿಗೆ ಬದ್ಕಕೆ ಆಸೆ ಇರ್ತದೆ, ಇನ್ವಬ್ರು ಸಂತೋಸ್ವಾಗಿ ಬದ್ಕದು ಬ್ಯಾಡ ಅಂತ ಇವ್ರು ಇಂಗ್ಯಲ್ಲ ಏಳದು. ನಾನೇಳ್ತಿನಿ, ಆ ವಯ್ಯ

ಏಳ್ದೇ ಇರದು ಇನ್ನೂ ಅದೆ, ಅದ ನಾನೇಳ್ತಿನಿ.

ಇನ್ನೂ ಏನೇನ್ ಉಳ್ದದಣ್ಣ?

ಏರೋಪ್ಲೇನ್ ಆಕ್ಸಿಡೆಂಟ್ ಆಯ್ತದೆ, ದೋಣಿ ಮುಳುಗ್ತವೆ, ಮದ್ವಿಗೋದವ್ರು ದಿನಾ ನಡ್ಯದ ಆ ವಯ್ಯ ನಡೀಬೌದು ಅಂತ ಏಳದು,

ಮಸಾಣಕ್ಕೋಗಬೌದು, ಸಾವಿಗೋದವ್ರು ಯಣವಾಗಬೌದು, ಒತ್ಕಂಡೋಯ್ತರೆ, ಮಾನವ ಬಂಬುಗಳು ಜಾಸ್ತಿಯಾಯ್ತವೆ, ಒಂದ್ ಪೆಟ್ರೋಲು ಉಟ್ಕತ್ತದೆ. ಇಂಗೆ ಏಳ್ತಾ ಓಗಬೌದು. ಇದ್ಕೆ ಕಾಮನ್ ಸೆನ್್ಸ ಅಂತರೆ. ಅದೇಳಕೆ ಸ್ವಾಮಿಗಳೇ ಬೇಕಿಲ್ಲ.

ಇನ್ನೂ ಒಂದೇಳಬೌದು, ಅದ್ನೇ ಬುಟ್ಯಲ್ಲಣ್ಣ?

ಏನಣ್ಣ ಅದು?

ಕೋಡಿ ಮಟದ ಸ್ವಾಮಿಗಳು ಒಂದಿಲ್ಲ ಒಂದಿನ ಸತ್ತೋಯ್ತರೆ!

- ಈ.ಬಸವರಾಜು

--
E.Basavaraju
Mandara, 4th main, Rukmininagar
Nagasandra post,  Bangalore-560012
9448957666


ಸೋನಿ ಗಾಂದಿಗೆ ತಲೆ ನೋವಂತೆ

ಯಣ್ಣ, ಸೋನಿ ಗಾಂದಿಗೆ ತಲೆ ನೋವಂತೆ, ನೀನು ಒಂದ್ಸತಿ ಓಗಿ ಕೈ ಔಸ್ತಿ

ಕೊಟ್ಟುಬರಬಾದ್ರೆ?

ಸೋನಿ ಗಾಂದಿಗೆ ತಲೆ ನೋವು ಬಂದ್ರೆ ನೋಡಕೆ ಸಾವ್ರ ಜನ

ಡಾಕ್ಟ್ರೇ ಬತ್ತರೆ, ಅಂತದ್ರಲರ್ಲಿ ನಾನು ಕೊಡೊ ಔಸ್ತಿಯ ಯಾರ್

ಕೇಳ್ತರೆ ಬುಡಣ್ಣ.

ತಲೆ ನೋವಿಗೆ ಕೈ ಔಸ್ತೀನೇ ವಳ್ಳೇದಂತಪ್ಪ, ಜೊತಿಗೆ ನಿನ್

ಕೈಗುಣವೂ ಚನ್ನಾಗ್ಯದೆ, ಅದ್ಕೆ ಅಂಗಂದೆ.

ಸೋನಿ ಗಾಂದಿ ಅದ್ಯಾವ್ದೋ ಕಾಯ್ಲೆ ಬಂದು ಪಾರಿನ್ ಗೆ ಓಗಿ ತೋರಿಸ್ಕಂಡ್

ಬಂದಿತ್ತ್ತಿಲ್ವೆ ?

ಓಗಿ ತೋರಿಸಿದ್ದೂ ಆಯ್ತು, ಉಸಾರ್ ಮಾಡಿಕಂಡು ಬಂದೂ ಆಯ್ತು. ಈಗ

ಇದ್ಕಿದ್ದಂಗೆ ತಲೆ ನೋವಂತೆ.

ತಲೆ ನೋವಲ್ಲಿ ತರಾವರಿ ಅದೆ, ಒಂದೊಂದ್ ತರದ ತಲೆ ನೋವು

ಒಂದೊಂದ್ ಕಾರಣಕ್ಕೆ ಬತ್ತದೆ, ಸೋನಿ ಗಾಂದಿಗೆ ಯಂತ ತಲೆ

ನೋವೋ ಗೊತ್ತಿಲ್ಲಪ್ಪ, ಏನಾರ ಟೆನ್ಸನ್ ಗೆ ಬಂದಿರಬೌದು.

ನಾವೇನೋ ಉಪ್ಪಿಗ್ಯಂಗಪ್ಪ, ಸಾರಿಗ್ಯಂಗಪ್ಪ್ಪ ಅನ್ನಂಗಿದ್ದಿವಿ, ನಮ್ಗೆ

ಟೆನ್ಸನ್ನು. ಸೋನಿಗಾಂದಿಗೆ ಪ್ರದಾನಿ ಮಂತ್ರಿನೂ ಓಗಿ ಮೇಡಂ ಗುಡ್

ಮಾನ್ರಿಂಗ್ ಅಂತ ದಿನಾಲು ಬಂದು ಏಳಿ ಓಯ್ತನಂತೆ, ಇನ್ನ ಟೆನ್ಸನ್ ಯಾಕೆ

ಅಂತಿನಿ.

ಅದು ಅವ್ರ ಪಕ್ಷ ಅದಿಕಾರದಲ್ಲಿರ ರಾಜ್ಯಗಳಲ್ಲಿ

ಮುಖ್ಯಮಂತ್ರಿಗಳವ್ರಲ, ಅವ್ರೇ ತಲೆ ನೋವಂತೆ!

ಅವ್ರು ಯಂಗಣ್ಣ ತಲೆ ನೋವಾಯ್ತರೆ, ವಬ್ಬ ಮುಖ್ಯಮಂತ್ರಿ ಅವ್ನೆ

ಅಂದ್ರೆ ಎಷ್ಟೊಂದ್ ಸೌಕಯ್ರ ಸಿಗ್ತದೆ, ಅಂತದ್ರಲಿ ಅವ್ರೇ ತಲೆ ನೋವು

ಅಂದ್ರೆ ಯಂಗೆ?

ಅವ್ರು ಜನ ಸೈ ಅನ್ನಂಗೆ ಕ್ಯಲ್ಸ ಮಾಡ್ತಾ ಇಲ್ವಂತೆ, ಮುಂದೆ

ಯಲೆಕ್ಷನ್ ಬಂದ್ರೆ ಎಂ.ಪಿ ಸೀಟ ಗೆಲ್ಲಿಸ್ಕೊಡದು ಕಷ್ಟ ಅಂತೆ, ಅದ್ಕೆ

ತಲೆ ನೋವಂತೆ.

ಅಂಗಾರೆ ಅವ್ರನ್ನೆ ಬದಲಾಯಿಸದಪ್ಪ. ಆಗ ತಲೆ ನೋವೇ ಇರದಿಲ್ಲ.

ಬದಲಾಯಿಸದ್ರಿಂದ ತಲೆ ನೋವು ಓಗ್ಲೂ ಬೌದು, ಒಂದೊಂದ್ ಸತಿ

ಜಾಸ್ತಿನೂ ಆಗಬೌದು, ಅದ್ಕೆ ಸೋನಿ ಗಾಂದಿ ಯದ್ರಿಕಂಡಿರಬೌದು.

ನೋಡ್ರಯ್ಯ, ನೀವು ಸರಿಯಾಗಿ ಕ್ಯಲ್ಸ ಮಾಡ್ತಾ ಇಲ್ಲ, ಮುಂದೆ

ಯಲೆಕ್ಷನ್ ಬಂದ್ರೆ ನೀವು ಸೀಟ ಗೆಲ್ಲಿಸಿ ಕೊಡಕಾಗದಿಲ್ಲ. ಅಂತ ಏಳಿಬುಟ್ರೆ

ಏನಾಯ್ತಳೆ?

ಆಗ ಅವ್ರು ನಿನ್ನ ಮಗ ಉತ್ತರ ಪ್ರದೇಶದಲ್ಲಿ ಅಷ್ಟೊಂದ್ಯಲ್ಲ

ಓಡಾಡಿ ಗೆದ್ದುದ್ ನೋಡಿದ್ರೆ ಅಷ್ಟೆಯ. ಇದ್ಕೇನಂತಿರಿ ಅಂತವ

ಯಾರ್ಯಾರ ಕ್ವಚನ್ ಮಾಡಿದ್ರೆ ಆಗ ಇನ್ನೊಂದ್ ತರದ ತಲೆ

ನೋವು ಬಂದತು ಅಂತ ಬಯವಂತೆ.

ಓಗ್ಲಿ ನಮ್ ಕನ್ರಾಟಕದವ್ರು ಯಾರೂ ತಲೆ ನೋವಾಗಿಲ್ವಂತೊ?

ಇಲ್ಲೂ ತಲೆ ನೋವದಂತೆ. ಆದ್ರೆ ಇಲ್ಲಿ ಅದಿಕಾರದಲ್ಲಿಲ್ವಲ, ಅದ್ಕೆ

ಸರಿಯಾಗಿ ಕಾಣ್ತಾ ಇಲ್ವಂತೆ. ಆದ್ರೂ ಅಮಾಸೆ, ಹುಣ್ಮೆ ಟೈಮಲ್ಲಿ

ಕನ್ರಾಟಕ ತಲೆ ನೋವು ಅಂತವ ಸೋನಿಗಾಂದಿಗೆ ಬಂದದಂತೆ.

ಆಗ ಎಸ್.ಎಂ.ಕೃಷ್ಣ, ಕಗ್ರೆ ಓಗಿ ಹಸಿನಾಲ್ನಲಿ ಅದ್ಯಂತದೋ ಔಸ್ತಿ

ಕೊಟ್ಟರಂತೆ, ಆಗ ಸರಿಯಾಯ್ತದಂತೆ.

ಏನೇ ಆದ್ರು ಈ ತಲೆ ನೋವು ಅನ್ನದು ಬರಬಾದ್ರು ಕಣಪ್ಪ, ಜಲ್ದಿ

ಓಗದಿಲ್ಲ.

Wednesday, 11 April 2012

ಸಣ್ಣ ಉಡುಗನ ದ್ವಡ್ ಮಾತು

ಸಣ್ಣ ಉಡುಗನ ದ್ವಡ್ ಮಾತು
ಯಣ್ಣ, ಒಂದೊಂದ್ ಸತಿ ಸಣ್ ಉಡುಗ್ರು ದ್ವಡ್ ಮಾತಾಡ್ತರೆ, ದ್ವಡ್ಡರು, ಸಣ್ಣರು ಯಲ್ರೂ ತಿಳ್ಕಬೇಕು, ಅಂತ ಮಾತಾಡ್ತರೆ, ಏನಂತಿಯ?
ನೀನೇಳದ್ರಲ್ಲಿ ನಿಜ ಅದೆ. ಒಂದೊಂದ್ ಸತಿ ದ್ವಡ್ಡರು ಅನಿಸ್ಕಂಡರು ಸಣ್ ಮಾತಾಡ್ತರೆ, ಸಣ್ ಉಡುಗ್ರು ದ್ವಡ್ ಮಾತಾಡ್ತರೆ. ಅದಿಲ್ರಿ, ಈಗ ಯಾರು ದ್ವಡ್ ಮಾತಾಡಿದವ್ರು?
ಪಾಕಿಸ್ತಾನದ ಅಧ್ಯಕ್ಷ ಜದ್ರಾ ಅನ್ನನು ನಮ್ ದೇಶಕ್ಕೆ ಬಂದಿದ್ನಲ, ಜ್ವತೇಲಿ ಅವ್ನ ಮಗನ್ನೂ ಕರ್ಕಂಡ್ ಬಂದಿದ್ನಂತೆ. ಆ ಉಡ್ಗ ಅಪ್ಪನ್ ಜ್ವತೆ ತಿರುಗಾಡಿಕಂಡು ವಳ್ಳೆ ಊಟ ಮಾಡಿ ಸುವ್ಕೋಗಿಲ್ಲ. ಬಾಳ ಯೋಚ್ನೆ ಮಾಡಿ ದ್ವಡ್ ಮಾತಾಡ್ಯವ್ನೆ. ಅಂತರು ದೇಶ ಆಳಕೆ ಬಬ್ರೇಕು ನೋಡು.
ಜದ್ರಾ ಅಲ್ಲ ಕಣಣ್ಣ. ಜದ್ರಾರಿ ಅಂತ ಅವ್ನ ಯಸ್ರು. ಅವ್ನ ಮಗ ಅಂತ ದ್ವಡ್ ಮಾತೇನೇಳ್ಯವ್ನೆ?
ಭಾರತ-ಪಾಕಿಸ್ತಾನದ ಗಡಿವಳ್ಗೆ ಇರ ಜನ ನೋಡಿದ್ರೆ ಬಡತನದಿಂದ ನರಳ್ತ್ತಾ ಅವ್ರೆ, ಅವ್ರಿಗೆ ವಳ್ಳೇದ್ ಮಾಡದ್ ಬುಟ್ಟು ಯಳ್ಡೂ ದೇಶದವ್ರು ಮದ್ದು-ಗುಂಡಿಗೆ ದುಡ್ಡ ಸುರೀತಾ ಅವ್ರೆ, ಇವ್ರಿಗೆ ನಾಚಿಗೆ ಆಗಬೇಕು ಅಂತ ಅಂದವ್ನೆ.
ಇವ್ರಿಗೆ ನಾಚಿಗೆ ಆಗಬೇಕು ಅಂದ್ರೆ ಅವ್ರಪ್ಪುಂಗೂ ಏಳಿದಂಗಾಯ್ತು!
ಊ ಮತ್ತೆ, ಅವ್ರಪ್ಪುಂಗುವೆ, ಮನ್ ವೋಹನ್ ಸಿಂಗ್ ಇಬ್ರಿಗೂ ಏಳಿದಂಗಾಯ್ತು.
ಅವ್ರೇನಂದ್ರಂತೆ?
ಬಾಯಿಗೆ ಬೀಗ ಆಕ್ಯಂಡು ಸುಮ್ಕವ್ರಂತೆ.
ಈ ಉಡ್ಗ ಏಳಿರದ್ರಲಿ ನಿಜ ಅದೆ. ಒಂದ್ ಬಂದೂಕ ತಗಳಕೆ ಸಾವಿರಾರು ರುಪಾಯಿ ಸುರೀಬೇಕು. ಅಂತದ್ರಲಿ ನಮ್ ದೇಶದಲಿ ಎಷ್ಟು ಬಂದೂಕ ಇದ್ದವು? ಇನ್ನ ಪಾಕೀಸ್ತಾನದಲಿ ಎಷ್ಟಿರಬೌದು? ಅದ್ಯಾರೋ ಏಳ್ತಾ ಇದ್ರು, ಒಂದ್ ಯುದ್ದ ಮಾಡ ವಿಮಾನ ಕೊಂಡ್ಕಳಕೆ ಕೊಡ ದುಡ್ಡಲಿ ನೂರು ಆಸ್ಪತ್ರೇನೋ, ಇಸ್ಕೂಲ್ನೋ ಕಟ್ಟಬೌದಂತೆ.
ಅಂಗಾರೆ ಹತ್ತು ವಿಮಾನ ತಗಳ ದುಡ್ಡಲ್ಲಿ 1000 ಆಸ್ಪತ್ರೆ ಕಟ್ ಬೌದು ಅನ್ನು?
ಬರೀ ವಿಮಾನ ಅಷ್ಟೆ ಅಲ್ಲ ಕಣಣ್ಣ. ರಾಕೇಟು, ಅದು ಇದು ಅಂತ ದುಡ್ಡ ತಗಂಡೋಗಿ ಸುರೀತರೆ. ಅವ ಮಾರನು ನಮ್ ದೇಶಕ್ಕೂ ಮಾತ್ರನೆ. ಪಾಕಿಸ್ತಾನ್ಕೂ ಮಾತ್ರನೆ. ಅವ್ನು ದುಡ್ ಮಾಡಿಕತ್ತನೆ. ನಮ್ಮವು ದುಡ್ ಕೊಟ್ಟು ಅವ್ಯಲ್ಲಾನು ತಂದು ಮಡಿಕತ್ತವೆ, ಜನಗಳ್ನ ಬಡಪಾಯಿ ಮಾಡ್ತರೆ.
ಆ ಉಡ್ಗ ಏಳಿರದು ಕರೆಟ್ಟಾಗ್ಯದೆ ಬುಡು. ನಮ್ಮಿಸ್ಕೂಲ್ ನೋಡಿದ್ರೆ ಇನ್ನೂ ಚನ್ನಾಗಿ ಕಟ್ ಬೌದಾಗಿತ್ತು. ಆಸ್ಪತ್ರೇಲಿ ವಬ್ನೇ ಡಾಕ್ಟ್ರು. ಇನ್ನೂ ಯಳ್್ಡ ಜನ ಆಕಿದ್ರೆ, ಔಸ್ತಿ ಪುಕ್ಸಟ್ಟೆ ಕೊಟ್ರೆ ಎಷ್ಟೋಜನಕ್ಕೆ ಅನುಕೂಲ ಆಯ್ತದೆ. ಇವತ್ತು ಪೇಪ್ರಲಿ ಓದಿದೆ. ಹುಬ್ಳಿ ಅತ್ರ ಚನ್ನಾಗಿರ ಕುಡಿಯೋ ನೀರ ಕೊಡಕೆ ಮಿಸೀನ ಆಕ್ಯವ್ರಂತೆ. ಒಂದ್ ಗನ್ ತಗಳ ದುಡ್ಡಲಿ ಅಂತ ಮಿಸೀನ ಆಕಬೌದಾಗಿತ್ತು. ಇದ್ಯಲ್ಲಾನು ಮಾಡದ್ ಬುಟ್ಟು ಮಿಟ್ರಿಗೆ ದುಡ್ಡ ಸುಯ್ರದು ತಪ್ಪೆಯ.
ಅದ್ಕೆ ಅವ್ನು, ಮಿಟ್ರಿಗಾಕೊ ದುಡ್ಡಲಿ ಆಸ್ಪತ್ರೆ, ಇಸ್ಕೂಲು, ಪ್ಯಾಕ್ಟ್ರಿ ಕಟ್ಟಿ, ಜನಕ್ವಳ್ಳೇದಾಯ್ತದೆ ಅಂದವ್ನೆ.
ಅಂತವ್ರು ರಾಜಕೀಯಕ್ಕೆ ಬಂದು ದೇಶ ಆಳಂಗಾದ್ರೆ ಇದ್ಯಲ್ಲಾನೂ ಮಾಡಬೌದೇನಪ್ಪ, ನೋಡ್ಬೇಕು.
- ಈ.ಬಸವರಾಜು

ಬರ್ಗೆಟ್ ದೇವ್ರಿಗೆ ಪರ ಮಾಡಿದಂಗಾಗ್ಯದೆ.


ಕಾಂಗ್ರೇಸ್ ಗೆ ಬನ್ನಿ ಬದಲಾವಣೆ ತನ್ನಿ
ಯಣ್ಣ, ಕಾಂಗ್ರೇಸಿಗೋಯ್ತಿಯ?
ಯಾಕಣ್ಣ ಇಂಗ್ ಕೇಳ್ತಿಯ? ನಂಗೂ ರಾಜಕೀಯಕ್ಕೂ ಯಾಕೋ ಆಗಿಬರ್ತಾ ಇಲ್ಲ. ಅದ್ಯಲ್ಲ ನಮಿಗೆ ಬ್ಯಾಡಕಣಣ್ಣ.
ಅಂಗಲ್ಲ, ಕಾಂಗ್ರೇಸ್ ನವ್ರು ಕಾಂಗ್ರೇಸ್ ಗೆ ಬನ್ನಿ, ಬದಲಾವಣೆ ತನ್ನಿ ಅಂತವ ಊರ್ ತುಂಬಾ ಪ್ಲೆಕ್್ಸ ಆಕ್ಯವ್ರೆ, ಅದ್ಕೆ ನೀನೇನಾರ ಓಯ್ತಾ ಇದ್ದೀಯೇನೋ ಅಂತ ಕೇಳ್ದೆ ಅಷ್ಟೆಯ.
ಇಲ್ಲ ಕಣಣ್ಣ, ನಾನು ಓಗದಿಲ್ಲ.
ಮತ್ತೆ ಯಲ್ಲ ನಿನ್ನಂಗೆ ಅಂದ್ರೆ ಕಾಂಗ್ರೇಸು ಬದಲಾಗದ್ಯಂಗೆ ಅಂತಿನಿ?
ನಾವು ಓಗ್ದೆ ಇದ್ರೆ ಅದು ಬದಲಾಗದಿಲ್ಲ ಅಂತಿಯ?
ಅದ ನಾನೇಳದಲ್ಲ, ನೀನೇಳದಲ್ಲ. ಹಿಂದೆ ರಾವುಲ್ ಗಾಂದಿ ಇಂಡೈರೆಕ್್ಟ ಆಗಿ ಏಳಿದ್ದ. ಯುವುಕ್ರು ರಾಜಕೀಯಕ್ಕೆ ಬನ್ನಿ ಅಂತವ. ಈಗ ಡೈರೆಕ್್ಟ ಆಗಿ ಏಳ್ತಾ ಅವ್ರೆ. ಈಗ್ಲೂ ಓಗ್ದೇ ಇದ್ರೆ ಯಂಗೆ?
ಈಗ ಅಲ್ಲೇ ಜಾಸ್ತಿ ಜನ ಆಗ್ಯವ್ರೆ. ಕಿತ್ತಾಡ್ಕಬ್ಯಾಡಿ ಅಂತವ ಸೋನಿಗಾಂದಿ ಬ್ಯಾರೆ ಏಳಿದ್ದಳಂತೆ. ಅಂತದ್ರಲ್ಲಿ ನಾನೂ ಓಗಿ ಕಿತ್ತಾಡು ಅಂತಿಯ?
ಕಿತ್ತಾಡಕಲ್ಲ, ನೀನು-ನಾನು ಓಗ್ಬೇಕಾಗಿರದು. ಬದ್ಲಾವಣೆ ತರಕೆ.
ಅಂಗಂದ್ರೇನು ಅಂತವ ಅಥ್ರ ಆಗ್ತಾ ಇಲ್ಲ ಕಣಣ್ಣ.
ಅಂಗಂದ್ರೆ  ನಾವ್ಯಲ್ಲ ಇಷ್್ಟ ದಿನ ಇದ್ದು ಬದ್ಲಾವಣೆ ತರಕೆ ಆಗ್ಲಿಲ್ಲ, ನಮ್ ಕೈಲಿ ಅದು ಆಗದಿಲ್ಲ. ಎಲ್ಲಿದ್ವೋ ಅಲ್ಲೇ ಇದ್ದಿವಿ, ಅದ್ಕೆ ನೀವು ಬಂದು ಬದ್ಲಾಯ್ಸಿ ಅಂತ ಕರೀತಾವ್ರೆ.
ನಾವ್ಯಲ್ಲ ಓದ್ ಮ್ಯಾಲೆ ಅವ್ರು ಏನ್ ಮಾಡ್ತರಂತೆ.
ನಾವ್ಯಲ್ಲ ಓದ್ ಮ್ಯಾಲೆ ಅವ್ರು ಹಿಂದಕ್ಕೋಯ್ತರೆ. ಅದೇ ಬದ್ಲಾವಣೆ.
ಎಲ್ಲಾರ ಉಂಟೇನಣ್ಣ, ಕಾಂಗ್ರೇಸಿನಲ್ಲಿರ ಲೀಡ್ರುಗಳೇ ವಬ್ರು ಕಾಲ ಇನ್ವಬ್ರು ಯಳೀತಾವ್ರೆ, ಅಂತದ್ರಲಿ ನಮ್ಮ ವಳಿಕ್ ಬುಟ್ಟು ಅವ್ರು ಆಚಿಗೋದರೆ? ಇದ್ರಲ್ಲಿ ಇನ್ನೇನೋ ಇರಬೌದು.
ಏನಿರ್ ಬೌದು ಅಂತಿಯ?
ಏನೂ ಇಲ್ಲ, ಉಡುಪಿ-ಚಿಕ್ಕಮಗಳೂರು ಎಂ.ಪಿ ಸೀಟ ಅಪರೂಪಕ್ಕೆ ಗೆದ್ದುಬುಟ್ಟವ್ರೆ. ಅದೊಂತರ ಬರ್ಗೆಟ್ ದೇವ್ರಿಗೆ ಪರ ಮಾಡಿದಂಗಾಗ್ಯದೆ. ಅಂಗಾಗಿ ಏನಾರ ವಸ ಸ್ಲೋಗನ್ ಕೊಡನ ಅಂತವ ಇಂಗ್ ಮಾಡ್ಯವ್ರೆ ಅಷ್ಟೆಯ. ಅವ್ರ ಬದ್ಲು ಮಾಡ್ತಿನಿ ಅಂತವ ನೀನೇನಾರ ವಳಿಕೋದ್ರೆ ನೀನೇ ಬದ್ಲಾಗಿ ಆಚಿಗೆ ಬರಬೇಕಾಯ್ತದೆ ಉಸಾರು.
- ಈ.ಬಸವರಾಜು, ಮಲ್ಲೇನಹಳ್ಳಿ

ಈಸ್ವುರಪ್ಪರ್ ಮನೆಗೆ ಹಾವು ನುಗ್ಯದಂತೆ



ಈಸ್ವುರಪ್ಪರ್ ಮನೆಗೆ ಹಾವು ನುಗ್ಯದಂತೆ
ಯಣ್ಣ ಈಸ್ವುರಪ್ಪರ್ ಮನೆ ವಳಿಕೆ ಹಾವು ನುಗ್ಯದಂತೆ, ನಿಜ್ವೆ?
ಯಾವ್ ಈಸ್ವುರಪ್ಪ?
ಅದೆ, ಬಿಜೆಪಿ ಅಧ್ಯಕ್ಷ ಈಸ್ವುರಪ್ಪ ಅವ್ರ ಮನಿಗಂತೆ, ಅಂಗಂತವ ಪೇಪ್ರಲ್ಲೇ ಕೊಟ್ಟವ್ರೆ ಈಸ್ವುರಪ್ಪ.
ಕಾಡ್ಯಲ್ಲಾನೂ ಕಡ್ದು ನಾಡು ಮಾಡಿರದ್ರಿಂದ ಹಾವುಗಳಿಗೆ ಇರಕೆ ಜಾಗ ಇಲ್ಲ, ಅಂಗಾಗಿ ಒಂದೊಂದ್ ಸತಿ ಮನಿಗೂ ನುಗ್ತವೆ, ನ್ಯನ್ನೆ ದಿನ ಏರೋಪ್ಲೇನ್ ವಳಿಕೇ ನುಗ್ಗಿತ್ತಂತೆ, ಏನ್ ಮಾಡಕಾಯ್ತದೇಳು? ಆಚಿಗೋಡುಸ್ಬೇಕು ಇಲ್ಲ ಅಂದ್ರೆ ಹಾವಾಡ್ರಿಗ್ರ ಕರ್ದು ಹಿಡಿಸ್ಬೇಕು, ಅದ ಬುಟ್ಟು ಪೇಪ್ರಲ್ಲಿ ಕೊಟ್ರೇನ್ ಉಪ್ಯೋಗ? ಯಂತ ಹಾವಂತೆ?
ಅದ್ಯಾವ್ದೋ ಜಾತಿ ಹಾವಂತೆ.
ಯಾವ್ ಜಾತಿ ಹಾವಂತೆ ಏಳಣ್ಣ.
ಅದೇನೂ ಕೊಟ್ಟಿಲ್ಲಪ್ಪ. ಒಟ್ನಲ್ಲಿ ನಮ್ ಮನೆವಳಿಕೆ ಜಾತಿ ಅನ್ನೋ ಹಾವು ನುಗ್ಯದೆ ಅಂತ ಏಳ್ಯವ್ರೆ.
ಓ.. ಈಗ ಗೊತ್ತಾಯ್ತು ಬುಡು. ಅದು ಹಾವೂ ಅಲ್ಲ, ಅವ್ರ ಮನಿಗೆ ನುಗ್ಯೂ ಇಲ್ಲ. ಜಾತಿ ಅನ್ನೊ ಭೂತ ನಮ್ ಪಾಟ್ರಿವಳಿಕೆ ನುಗ್ಯದೆ ಅಂತ ಬೇಜಾರ್ ಮಾಡ್ಕಂಡು ಅವ್ರೇಳಿರದು. ನೀನು ಒಂದು ಅಂದ್ರೆ ಇನ್ನೊಂದು ಅಂತಿಯ.
ಜಾತಿ ನುಗ್ಯದೆ ಅಂದ್ರೇನಣ್ಣ?
ಜಾತಿ ನುಗ್ಯದೆ ಅಂದ್ರೆ, ಅವ್ರ ಪಾಟ್ರಿ ವಳಿಗರ ಒಂದೊಂದ್ ಜಾತಿ ಜನ ಒಂದ್ ಗುಂಪ್ ಮಾಡ್ಕಳದು, ಅವ್ರಿಗೆ ಸ್ಥಾನ ಮಾನ ಕೊಡ್ಬೇಕು ಅಂತ ಕೇಳದು, ನಮ್ ಜಾತಿಯಿಂದ್ಲೆ ನಿಮ್ ಪಾಟ್ರಿ ನಡೀತಿರದು ಅಂತ ಹೇಳದು, ಇದ್ಕೆ ಜಾತಿ ನುಗ್ಯದೆ ಅಂತರೆ.
ಅದು ಈಗ ಗೊತ್ತಾಯ್ತಂತ? ಮನ್್ಸ ಅನ್ನನು ಒಂದೊಂದ್ ಜಾತಿಗೆ ಸೇರಿರ್ತನಪ್ಪ. ಅವ್ನು ಪಾಟ್ರಿ ವಳಿಕೆ ಬಂದ್ ಮ್ಯಾಲೆ ಆ ಜಾತಿ ನುಗ್ಯದೆ ಅಂತ ಅಲ್ವೆ?
ಅಂಗಲ್ಲ ಕಣಣ್ಣ, ಜಾತಿ ಅನ್ನದು ಇತ್ತೀಚ್ಕೆ ನಾವ್ ಮಾಡಿಕಂಡಿರದು, ಮನುಸ್ರು ಅಂದ್ರೆ ಯಲ್ರೂ ಒಂದೆಯ, ಅಂತದ್ರಲಿ ಜಾತಿ ಗುಂಪು ಮಾಡ್ಬಾದ್ರು ಅಂತ ಈಸ್ವರುಪ್ಪ ಹೇಳಿರದು.
ಮತ್ತೆ ಅವ್ರ್ರ ಪಾಟ್ರಿಲಿ ಹಿಂದುಗಳ್ಯಲ್ಲ ಒಂದು ಅಂತ ಏಳ್ತರೆ. ಉಳಿದ ಸಾಬ್ರು, ಕ್ರಿಶ್ಚನ್ರು, ಜೈನ್ರು ಅವ್ರು ಎಲ್ಲಿಗೋಗ್ಬೇಕು? ಅವ್ರು ಏಳ್ತಾ ಇರದೂ ತಪ್ಪೇ ಅಲ್ವೆ?
ಅದ್ಕೆ ಕಣಣ್ಣ, ಮಾಡಿದ್ದುಣ್ಣೋ ಮಾರಾಯ ಅನ್ನದು. ಅವ್ರು ಹಿಂದುಗಳ್ಯಲ್ಲ ಒಂದು ಅಂತ ಏಳ್ಕಂಡು ಓಟ್ ತಗಳಕ್ ಸುರು ಮಾಡಿದ್ರು. ಇದು ತಪ್ಪು ಅಂತ ಗೊತ್ತಿದ್ರೂ ಕ್ಯಲುವ್ರು ಸುಮ್ಕೆ ಇದ್ರು. ಇಷ್ಟೆ ಆದ್ ಮ್ಯಾಲೆ ಜಾತಿಯವ್ರೆಲ್ಲ ಒಂದು ಅಂದ್ರೆ ಏನ್ ತಪ್ಪು ಅನುಸ್ತು. ಅದ್ರಿಂದ ಅವ್ರಿಗೆ ಅನುಕೂಲಾನೂ ಇತ್ತು. ಸುರು ಮಾಡಿಕಂಡ್ರು. ಈಗ ಜಾÕನೋದಯ ಆದಂಗೆ ಈಸ್ವುರಪ್ಪ ಈ ತರ ಏಳ್ತಾ ಅವ್ನೆ. ಯಲ್ಲ ಅಷ್ಟೆಯ, ಅವ್ರಿಗೆ ಹೆಲ್್ಪ ಆಗ ತಕ ಸುಮ್ಕಿತ್ರರೆ. ತ್ವಂದ್ರೆ ಆದಾಗ ಇಂಗಾಗ್ ಬಾರ್ದಾಗಿತ್ತು ಅಂತರೆ. ಅದ್ಕೆ ನಾವು ಮಾಡಿದ್ದುಣ್ಣೋ ಮಾರಾಯ ಅಂತ ಏಳಿ ಸುಮ್ಕಾಗ್ ಬೇಕು ಅಷ್ಟೆಯ.
- ಈ.ಬಸವರಾಜು

ಅಂಗೆ ಕಾಲ ಹಾಕದು


ಯಡೂರಪ್ಪ ಅವರಿಂದ ಬರಪರಿಹಾರಕ್ಕಾಗಿ ಮನವಿ.
ಯಣ್ಣ, ನಮ್ ಯಡೂಪ್ಪ ಅವ್ರಿಗೆ ವಳ್ಳೆ ಬುದ್ದಿ ಬಂದಂಗದೆ!
ಅಂಗಾರೆ ಇಷ್್ಟ ದಿನ ವಳ್ಳೆ ಬುದ್ದಿ ಇಲ್ರಿಲ್ಲ ಅಂದಂಗಾಯ್ತು ನೀನೇಳದು. ಇದು ಯಡೂರಪ್ಪ ಅವ್ರ ಅಬಿಮಾನಿಗಳಿಗೆ ಗೊತ್ತಾದ್ರೆ ಅಷ್ಟೆಯ?
ನಾನು ಅಂಗೇನೇಳಿಲ್ಲ. ಜನ ಬರ ಬಂದು ನರಳ್ತಾ ಅವ್ರೆ. ಅವ್ರಿಗೆ ಪರಿಹಾರ ಕೊಡಿ ಅಂತ ಯಡೂರಪ್ಪ ಕೇಳ್ತಾ ಅವ್ರೆ. ಅದು ಸರಿ ಅಲ್ವೆ?
ಯಾರ್ನ ಏನಂತ ಕೇಳ್ತಾ ಅವ್ರೆ? ಇಲ್ಲಿರದು ಅವ್ರ ಸಕ್ರಾರ ಅಲ್ವೆ? ವಿದಾನಸೌದಕ್ಕೋಗಿ ಅವ್ರುನ್ನ ಕೇಳದ್ ಬುಟ್ಟು ಟೂರ್ ಮಾಡಿದ್ರೆ ಏನ್ ಬಂದತು?
ಕೇಂದ್ರ ಸಕ್ರಾರದವ್ರು ಅದೆಷ್ಟೋ ಕೋಟಿ ಕೊಡ್ಬೇಕು ಅಂತ ಯಡೂರಪ್ಪ ಕೇಳ್ತಾ ಇದ್ದರಂತೆ.
ಅದೆ! ಕೋಟಿಗಟ್ಲೆ ಕೊಡಿ, ನುಂಗಿ ನೀರ್ ಕುಡಿತಿವಿ ಅಂತ ಕೇಳ್ತಾ ಇರ್ಬೌದು.
ಏನ್ ಜನಗಳಪ್ಪ ನೀವು, ಏನ್ ಮಾಡಿದ್ರು ಕೊಂದ ಕ್ಯಾತೆ ತಗಿತೀರಿ.
ಯಣ್ಣ, ನೀನು ಸಯ್ರಾಗಿ ತಿಳ್ಕಬೇಕು. ಬರ ಬಂದಿರದು ಜನಗಳಿಗೇನೋ ಸರಿ. ಆದ್ರೆ ಯಡೂರಪ್ಪ ಟೂರ್ ಮಾಡಕ್ಕೆ ವಂಟಿರದು ಅವ್ನಿಗೆ ಬಂದಿರ ಬರ ನೀಗಿಸ್ಕಳಕಂತೆ.
ಯಡೂರಪ್ಪುಂಗೆ ಅದ್ಯಂತ ಬರ ಬಂದಿದ್ದತು?
ಅದು ಅದಿಕಾರದ ಬರ. ಆರ್ ತಿಂಗ್ಳಾದ್ ಮ್ಯಾಲೆ ಇನ್ನೊಂದ್ ಸತಿ ಮುಖ್ಯಮಂತ್ರಿ ಆಗಿ ಬಂದೇ ಬತ್ತಿನಿ ಅಂತ ಏಳಿದ್ನಲ, ಅದು ಸಿಕ್ಕಿಲ್ಲ, ಅದ್ಕೆ ಬರದ ಯಸ್ರಲ್ಲಿ ಟೂರ್ ವಂಟವ್ನೆ.
ಏನಪ್ಪ, ಒಂದೂ ಅತ್ರ ಆಯ್ತಾ ಇಲ್ಲ. ಜನಗಳ್ ಪರವಾಗಿ ಓರಾಟ ಮಾಡ್ತಿನಿ ಅಂತ ಯಡೂರಪ್ಪ
ಏಳ್ತಾ ಅವ್ನೆ, ನೀನು ನೋಡಿದ್ರೆ ಇಂಗಂತಿಯ!
ಯಸ್ರು ಜನಗಳ್ದು, ಆದ್ರೆ ಕ್ಯಲ್ಸ ಆಗಬೇಕಿರದು ಯಡೂರಪ್ಪುಂದು.
ಸದಾನಂದಗೌಡ್ನೂ ಬರ ಬಂದಿರ ಕಡಿಕೆ ಟೂರ್ ಓಯ್ತಿನಿ ಅಂತ ಏಳ್ಯವ್ನೆ.
ಅವ್ನೂ ಅಷ್ಟೆಯ. ಯಡೂರಪ್ಪ ವಂಟ್ ಮ್ಯಾಲೆ ಇವ್ನು ಸುಮ್ನಿದ್ರೆ ಜನ ಏನಾರ ಅಂತರೆ ಅನ್ಕಂಡು ಅವ್ನೂ ವಂಟವ್ನೆ.
ಅಂಗಾರೆ ಇನ್ವಸಿ ದಿನ ಬುಟ್ಟು ಬ್ಯಾರೆ ಪಾಟ್ರಿಯವ್ರೂ ಟೂರ್ ವಂಡ್ ಬೌದು.
ಊ ಕಣಣ್ಣ. ಜನಗಳಿಗೆ ಬರ ಬಂದ್ರೆ ರಾಜಕೀಯದವ್ರಿಗೆ ಕ್ಯಲ್ಸ ದುಡ್ಡು ಸಿಗದು. ಇದ ಸಾಯಿನಾತ ಅನ್ನೋ ಪತ್ರಕತ್ರ ಯಾವಾಗ್ಲೋ ಏಳ್ಯವ್ನೆ. ಅದ್ಕೆ ಬರ, ಪ್ರವಾಹ ಬಂದ್ರೆ ಮಿನಿಷ್ಟ್ರು, ಯಮ್ಮಲ್ಲೆಗಳಿಗ್ಯಲ್ಲ ಕುಸಿ.
ಯುಡೂರಪ್ಪ, ಸದಾನಂದಗೌಡ ಯಲ್ಲ ಓದ್ರೆ ಜನಗಳಿಗೆ ಏನಾರ ಉಪಯೋಗ ಆದತೆ?
ಜನಗಳಿಗೆ ಏನಾದತೋ ನಂಗೊತ್ತಿಲ್ಲ. ಯಾಕೆ ಅಂದ್ರೆ ಇವ್ರು ಅಲ್ಲಿ ಓಗಿ ಅವ್ರ ಸಮಸ್ಯೆ ಪರಿಹರಿಸೋದ್ಕಿಂತ ಇವ್ರ ಬ್ಯಾಳೇಕಾಳ ಬೇಯಿಸ್ಕಳದೇ ಜಾಸ್ತಿ ಇತ್ರದೆ.
ಇವ್ರ ಬ್ಯಾಳೇಕಾಳು ಅಂದ್ರೆ?
ಅಂದ್ರೆ ಯಡೂರಪ್ಪ ಓಗಿರ ಮುಖ್ಯಮಂತ್ರಿ ಕುಚ್ರಿ ತಿಗ್ರ ತಗಬೇಕು. ಸದಾನಂದಗೌಡ ಸಿಕ್ಕಿರ ಕುಚ್ರಿ ಉಳಿಸ್ಕಬೇಕು. ಯಾಕೆ ಅಂದ್ರೆ ನಿಜ್ವಾಗಿ ಜನಗಳಿಗೆ ಏನ್ ಬೇಕು ಅನ್ನದ ಅದಿಕಾರಿಗಳಿಗೆ ಬಿಗಿ ಮಾಡಿ ಕ್ಯಲ್ಸ ಮಾಡ್ಸಿದ್ರೆ ಯಲ್ಲಾ ಆಯ್ತಳೆ. ಪ್ರಚಾರ ತಗಬೇಕು ಅನ್ನದೇ ಇವ್ರ ಉದ್ದೇಶ.
ಅಂಗಾರೆ ಜನ?
ಈಗ ಯಂಗವ್ರೋ ಅಂಗೆ ಕಾಲ ಆಕದು.
- ಈ.ಬಸವರಾಜು

ವಳ್ಳೆ ಕಾಲ ಬಂದದೆ..



ವಳ್ಳೆ ಕಾಲ ಬಂದದೆ..
ವಳ್ಳೆ ಕಾಲ ಬರ್ತಾ ಅದೆ, ವಳ್ಳೆ ಕಾಲ ಬರ್ತಾ ಅದೆ..
ಇದೇನಣ್ಣ, ಕಾಲ ದಿನೇ ದಿನೇ ಕೆಟ್ಟೋಯ್ತಾ ಅದೆ ಅಂತವ ಯಲ್ಲಾರೂ ಗೋಳಾಡ್ತಾ ಅವ್ರೆ, ನೀನು ನೋಡಿದ್ರೆ ವಳ್ಲೆ ಕಾಲ ಬತ್ತಾ ಅದೆ ಅಂತೀಯಲ, ಅದೇನು?
ನೋಡು, ವಬ್ರಿಗೆ ಒಂದೊಂದ್ ಕಾಲ ಚನ್ನಾಗಿತ್ರದೆ. ಈಗ ನೋಡು, ನಂಗೆ ಈ ಕಾಲ ಚನ್ನಾಗ್ಯದೆ ಅನ್ನುಸ್ತಾ ಅದೆ, ಇನ್ವಬ್ರಿಗೆ ಚನ್ನಾಗಿಲ್ಲ ಅನುಸ್ತದೆ. ಅಂಗೆ ಕಾಲ ಅನ್ನದು ನೋಡದ್ರು ಮ್ಯಾಲಿರದು.
ಯಣ್ಣ, ಆಯ್ತು, ಈಗ ನಿಂಗೆ ಕಾಲ ಚನ್ನಾಗ್ಯದೆ ಅನ್ನಕೆ ಏನು ಕಾರಣ ಅನ್ನದ್ನಾದ್ರು ಏಳು.
ಯಾಕೋ ಯಾವ್ದೂ ಯಲೆಕ್ಷನ್ನು ಇಲ್ದೆ ನಾಲಿಗೆ ಕಡೀತಿತ್ತು. ಈ ಸಕ್ರಾರ ಕ್ಯಳಿಕ್ ಬೀಳ್ತದೆ, ಯಲೆಕ್ಷನ್ನು ಬತ್ತದೆ ಅನ್ನಕಂಡಿದ್ದೆ, ಆದ್ರೆ ಈ ಸದಾನಂದಗೌಡ ಯಂಗೋ ತೂಗಿಸ್ಕಂಡು ಓಯ್ತನೇ ಅವ್ನೆ. ಬೇಜಾರಾಗೋಗಿತ್ತು. ಈಗ ಒಂದ್ ಯಲೆಕ್ಷನ್ ಬಂದದೆ.
ಅದ್ಯಾವ್ ಯಲೆಕ್ಷನ್ನಣ್ಣ?
ಅದೆ ಕಣೊ, ಕಸಾಪ ಯಲೆಕ್ಷನ್ನು?
ಅದೇನಣ್ಣ, ಸೊಸೈಟಿಯೋ, ಇಲ್ಲ ಬ್ಯಾಂಕೊ?
ಅದ್ಕೆ ನಿಂಗೆ ಬುದ್ದಿ ಇಲ್ಲ ಅನ್ನದು. ಅದು ಕನ್ನಡ ಸಾಹಿತ್ಯ ಪರಿಷತ್ತು. ಅದ್ಕೆ ಅಧ್ಯಕ್ಷರನ್ನ ಆಯ್ಕೆ ಮಾಡಕ್ಕೆ ಯಲೆಕ್ಷನ್ನು ನಡಿತಾ ಅದೆ.
ಅದ್ಕೂ, ನೀನು ವಳ್ಳೆ ಕಾಲ ಬತ್ತಾ ಅದೆ ಅನ್ನದ್ಕೂ ಏನು ಸಂಬಂಧ?
ನೋಡಣ್ಣ, ಹಿಂದೆ ಕಸಾಪ ಯಲೆಕ್ಷನ್ನು ಅಂದ್ರೆ ಒಂದ್ ಪೋಸ್್ಟ ಕಾಡ್್ರ ಬರ್ದು ಓಟ್ ಕೊಡಿ ಅನ್ನರು. ಅಮ್ಯಾಲೆ ನಿದಾನುಕ್ಕೆ ಕಾಪಿ ಕೊಡ್ಸಕ್ಕೆ ಸುರು ಮಾಡಿದ್ರು. ಈಗ ಬ್ಯಾರೆ ಯಲೆಕ್ಷನ್ ಲ್ಯವೆಲ್ಲಿಗೆ ಇದೂ ಬಂದದೆ. ಅದ್ಕೆ ವಳ್ಳೇಕಾಲ ಅನ್ನದು.
ಅಂದ್ರೆ ದುಡ್ಡು, ಯಂಡ, ಬಾಡು ಕೊಟ್ಟರೆ?
ಊ ಮತ್ತೆ. ಯಲೆಕ್ಷನ್ನು ಅಂದ್ರೆ ಅದಿಲ್ದೇ ಇದ್ರೆ ಆದತೆ? ಒಂತರ ಸಪ್ಪೆ ಆಗಿತ್ತು. ಈಗ ಮಟನ್ ಊಟ, ಡ್ರಿಂಕ್ಸು ಕೊಡ್ತಾ ಇದ್ದರಂತೆ. ಅದ್ಕೆ ವಳ್ಳೇ ಕಾಲ ಬಂದದೆ ಅಂದಿದ್ದು ನಾನು.
ಅಲ್ಲ, ನಮ್ಮಂತವೇನೋ ಮಟನ್ ಊಟ, ಯಂಡ ಈಸ್ಕಂಡು ಓಟಾಕ್ತಿವಿ, ಸಾಯಿತಿಗಳೂ ಅಂಗೆ ಮಾಡ್ಯರೆ?
ಏ.. ಅವ್ರು ಮನುಸ್ರೆಯ. ಜ್ವತಿಗೆ ಕತೆ, ಕವ್ನ ಬರೀವಾಗ ಏನಾರ ತಗಂಡ್ರೆ ಚನ್ನಾಗಿ ಬರೀಬೌದಂತೆ.
ಅಂಗಾರೆ ತಗಳ್ದೆ ಇರರು ಬಯ್ರದಿಲ್ಲ ಅಂತಿಯ?
ಅಂಗಲ್ಲ, ಕ್ಯಲುವ್ರು ಅಂಗೆ ಬದ್ರರಂತೆ. ಕ್ಯಲುವ್ರಿಗೆ ಅದಿದ್ರೆ ಚನ್ನಾಗಿ ಬರೀತರಂತೆ. ಅಂಗಾಗಿ ಯಲೆಕ್ಷನ್ನಲೂ ಅದು ಬಂದಿರಂಗದೆ.
ಒಟ್ನಲ್ಲಿ ಕಸಾಪ ಯಲೆಕ್ಷನ್ನೂ ಸ್ಟ್ಯಾಂಡಡ್್ರ ಆಯ್ತು ಬುಡು.
- ಈ.ಬಸವರಾಜು

ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ!


ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ!


ಯಣ್ಣ, ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಅಂದ್ರೇನು ಗೊತ್ತೆ?

ನೀನೇಳದು ವಗಟು ಕಣಣ್ಣ. ನಾನೂ ಯಾವ್ದೋ ನಾಟುಕ್ದಲ್ಲಿ ಇದ ಕೇಳಿದ್ದೀನಿ. ಆದ್ರೂ ಅತ್ರ ಆಗ್ವಲ್ದು.

ನೀನು ನಾಟಕದಲ್ಲಿ ಹಾಡೋವಾಗ ಕೇಳಿದ್ದೀಯ. ನಾನೆಲ್ಲಿ ಕೇಳಿದೆ ಗೊತ್ತೆ?

ಎಲ್ಲಿ ಕೇಳಿದ್ಯಪ್ಪ?

ನನಗೆ ಪರಿಚಯ ಇರೋ ಮಿನಿಷ್ಟ್ರ ಅತ್ರ ಏನೋ ಕ್ಯಲ್ಸ ಮಾಡಿಸ್ಕಳನ ಅಂತ ಓಗಿದ್ದೆ, ಅವ್ರು ಹಾಡತಾ ಕೂತಿದ್ರು.

ಅವ್ರಿಗೇನಂತೆ ಕಷ್ಟ? ಮಿನಿಷ್ಟ್ರೇ ಇಂಗ್ ಆಗಿಬುಟ್ರೆ ನಮ್ ಕತೆ ಏನಂತೆ?

ಅದೇನಪ್ಪ, ವಬ್ರೇ ರೂಮಲ್ಲಿ ಕೂತ್ಕಂಡು ಹಾಡ್ತಾ ಇದ್ರು.

ನೀನು ಏನ್ ಪ್ರಬುಗಳೇ ನಿಮ್ ಕಷ್ಟ? ಅಂತ ಕೇಳದಲ್ವೆ?

ಕೇಳಿದೆ. ಅದ್ಕೆ ಅವ್ರು ಏಳಿದ್ದೇನಪ್ಪ ಅಂದ್ರೆ; ಮಿನಿಷ್ಟ್ರಾಗಿ ಚನ್ನಾಗಿರನ ಅಂತ ಬಂದೆ. ಬರ ಅದ್ಯಯನ ಮಾಡಿಕಂಡು ಬನ್ರಿ ಅಂತ ಮುಖ್ಯಮಂತ್ರಿಗಳು ಕಳಿಸಿದ್ರು. ಅಲ್ಲಿ ಓಗಿ ಜನ ನೋಡಿಕಂಡು ಸನ್ಮಾನ ಮಾಡಿದ್ರೆ ಮಾಡಿಸ್ಕಂಡು ಬರನ ಅಂತ ಓದೆ. ಆದ್ರೆ ಅಲ್ಲಿ ಜನ ಅದಿಲ್ಲ, ಇದಿಲ್ಲ ಅಂತ ನನ್ನ ಸುತ್ತಿಗಂಡು ಮುಂದುಕ್ಕೋಗಕೇ ಬುಡ್ಲಿಲ್ಲ. ವಬ್ಬ ಅಸ ತಂದು ಮುಂದುಕ್ ನಿಲ್ಸಿ ಸ್ವಾಮಿ ಇದ್ಕೆ ಉಲ್ಲು ನೀರಿಲ್ಲ, ನೀವು ಗೋವುಗಳ ಪರವಾಗಿ ಮಾತಾಡ್ತಿರಲ ಏನ್ಮಾಡ್ಳಿ ಏಳಿ ಅಂದ. ವಬ್ ಹೆಂಗ್ಸು ಬಿಂದಿಗೆ ತಂದು ನೀರ್ ಕೊಟ್ಟು ಮುಂದುಕ್ಕೋಗಯ್ಯ ಅಂದ್ಳು. ಯಂಗೊ ಅಲ್ಲಿ ಇದ್ದ ನಮ್ಮ ಪೋಲೀಸ್ನರು ಬಚಾವ್ ಮಾಡಿ, ಸ್ವಾಮಿ ನೀವು ಓಡಿ ಅಂದ್ರು. ಅದ್ಕೆ ಇನ್ನ ಎಲ್ಲೂ ಓಗಕೆ ಬಯ. ನಮ್ ಮುಖ್ಯಮಂತ್ರಿಗಳು ಓಗ್ಲೇಬೇಕು, ಇಲ್ಲ ಅಂದ್ರೆ ನೀವು ಅವ್ರ ಕಡೆ ಇದ್ದೀರಿ ಅನ್ಕಬೇಕಾಯ್ತದೆ ಅಂತರೆ, ನಾನೇನ್ಮಾಡ್ಳಿ? ಅದ್ಕೆ ಈ ಹಾಡ ಹಾಡತಾ ಇದ್ದೀನಿ ಅಂದ್ರು ಕಣಣ್ಣ. ಆಗ ನಾನು ಅವ್ರ ಕೈಗೆ ಕಚ್ರಿಪ್ ಕೊಟ್ಟುಬುಟ್ಟು, ನನ್ ಸಮಸ್ಯೆ ಬಗೆಹರಿಸಕೆ ಇವ್ರ ಕೈಲಿ ಆಗದಿಲ್ಲ ಅಂದ್ಕಂಡು ಸುಮ್ಕೆ ಬಂದೆ.

ನೀನು ಇಂಗೆ ಯದಿಕ್ರಂಡು  ವಾಪಸ್ ಬಲ್ರಿ ಅಂತಲೇ ಮಿನಿಷ್ಟ್ರು ಅಂಗೆ ನಾಟ್ಕ ಆಡಿಬ್ರೇಕು.

ಏನಪ್ಪ, ಜನ ಏಳದ ನಂಬ್ ಬೇಕು ಅಷ್ಟೆಯ. ಅವ್ರ ಮನಸಿನ ವಳ್ಗೆ ಏನದೆ ಅಂತ ಯಂಗ್ ತಿಳ್ಕಳದು?

ಅದ್ಕೆ ಮದ್ಲಿದ್ದರೇ ಪವ್ರಾಗಿಲ್ಲ ಅಂತವ ವಬ್ಬ ಮಿನಿಷ್ಟ್ರು ಏಳ್ತಾ ಇದ್ರಪ್ಪ.

ಅದೇನಂತೆ?

ಯಲ್ಲಾನ್ರು ರಿಜಾಟಿಗೆ ಕಕ್ರಂಡೊಗಿ ಚನ್ನಾಗಿ ಮಡ್ಗಿದ್ರು, ಅಲ್ಲಿ ಸೊಂಪಾಗಿದ್ದೆ. ಊರಿಗೋದ್ರೆ ಜನ ಅದು ಇದು ಅಂತ ತಲೆ ತಿನ್ನರು. ಯಂಗೊ ಬ್ಯಾಸಿಗೆ ಕಳ್ಯತಕ ಇಲ್ಲೇ ಇರನ ಅನ್ಕಂಡು ಬಂದಿದ್ದೆ, ಈಗ ಅದ್ಕೂ ಕಲ್ ಬೀಳ್ತು ಅಂತವ ಬೇಜಾರ್ ಮಾಡಿಕಂಡಿದ್ರು.

ಅಲ್ಲ ಕಣಣ್ಣ. ಓಟಾಕಿಸ್ಕಳ್ವಾಗ ಏನ್ ಬೇಕು ಅದ್ನೆ ಕೊಡ್ತಿನಿ ಅಂತರೆ, ಈಗ ನೀರ್ ಕೊಡಿ ಅಂದ್ರೂ ಕೊಡಕಾಯ್ತಾ ಇಲ್ಲ. ಅದ್ನೂ ಕೇಳದು ತಪ್ಪೆ? ಜನಕ್ಕೆ ತ್ವಂದ್ರೆ ಮ್ಯಾಲೆ ತ್ವಂದ್ರೆ ಆಗಿ ರೋಸೋಗ್ಯವ್ರೆ. ಅದ್ಕೆ ಯಾರಾರ ಬಂದ್ರು ಸಾಕು ಮ್ಯಾಲೆ ಬೀಳಕೋಯ್ತರೆ.

ಈಗೇನೋ ಊರಿಗೋದ್ರೆ ಮ್ಯಾಲ್ ಬೀಳ್ತರೆ. ಅಲ್ಲಿಗೋಗ್ದೇ ಓದ್ರೆ ಅವ್ರೇ ಉಡಿಕಂಡ್ ಬತ್ತರೆ. ಆಗೇನ್ ಮಾಡ್ತರೋ ಗೊತ್ತಿಲ್ಲ. ಆದ್ರಿಂದ ಜನವ ಉಡಿಕಂಡೋಗಿ ಬೈಸಿಕಂಡು ಬರದೇ ವಳ್ಳೇದೇನಪ್ಪ.

- ಈ.ಬಸವರಾಜು