ಯಡೂರಪ್ಪ ಅವರಿಂದ ಬರಪರಿಹಾರಕ್ಕಾಗಿ ಮನವಿ.
ಯಣ್ಣ, ನಮ್ ಯಡೂಪ್ಪ ಅವ್ರಿಗೆ ವಳ್ಳೆ ಬುದ್ದಿ ಬಂದಂಗದೆ!
ಅಂಗಾರೆ ಇಷ್್ಟ ದಿನ ವಳ್ಳೆ ಬುದ್ದಿ ಇಲ್ರಿಲ್ಲ ಅಂದಂಗಾಯ್ತು ನೀನೇಳದು. ಇದು ಯಡೂರಪ್ಪ ಅವ್ರ ಅಬಿಮಾನಿಗಳಿಗೆ ಗೊತ್ತಾದ್ರೆ ಅಷ್ಟೆಯ?
ನಾನು ಅಂಗೇನೇಳಿಲ್ಲ. ಜನ ಬರ ಬಂದು ನರಳ್ತಾ ಅವ್ರೆ. ಅವ್ರಿಗೆ ಪರಿಹಾರ ಕೊಡಿ ಅಂತ ಯಡೂರಪ್ಪ ಕೇಳ್ತಾ ಅವ್ರೆ. ಅದು ಸರಿ ಅಲ್ವೆ?
ಯಾರ್ನ ಏನಂತ ಕೇಳ್ತಾ ಅವ್ರೆ? ಇಲ್ಲಿರದು ಅವ್ರ ಸಕ್ರಾರ ಅಲ್ವೆ? ವಿದಾನಸೌದಕ್ಕೋಗಿ ಅವ್ರುನ್ನ ಕೇಳದ್ ಬುಟ್ಟು ಟೂರ್ ಮಾಡಿದ್ರೆ ಏನ್ ಬಂದತು?
ಕೇಂದ್ರ ಸಕ್ರಾರದವ್ರು ಅದೆಷ್ಟೋ ಕೋಟಿ ಕೊಡ್ಬೇಕು ಅಂತ ಯಡೂರಪ್ಪ ಕೇಳ್ತಾ ಇದ್ದರಂತೆ.
ಅದೆ! ಕೋಟಿಗಟ್ಲೆ ಕೊಡಿ, ನುಂಗಿ ನೀರ್ ಕುಡಿತಿವಿ ಅಂತ ಕೇಳ್ತಾ ಇರ್ಬೌದು.
ಏನ್ ಜನಗಳಪ್ಪ ನೀವು, ಏನ್ ಮಾಡಿದ್ರು ಕೊಂದ ಕ್ಯಾತೆ ತಗಿತೀರಿ.
ಯಣ್ಣ, ನೀನು ಸಯ್ರಾಗಿ ತಿಳ್ಕಬೇಕು. ಬರ ಬಂದಿರದು ಜನಗಳಿಗೇನೋ ಸರಿ. ಆದ್ರೆ ಯಡೂರಪ್ಪ ಟೂರ್ ಮಾಡಕ್ಕೆ ವಂಟಿರದು ಅವ್ನಿಗೆ ಬಂದಿರ ಬರ ನೀಗಿಸ್ಕಳಕಂತೆ.
ಯಡೂರಪ್ಪುಂಗೆ ಅದ್ಯಂತ ಬರ ಬಂದಿದ್ದತು?
ಅದು ಅದಿಕಾರದ ಬರ. ಆರ್ ತಿಂಗ್ಳಾದ್ ಮ್ಯಾಲೆ ಇನ್ನೊಂದ್ ಸತಿ ಮುಖ್ಯಮಂತ್ರಿ ಆಗಿ ಬಂದೇ ಬತ್ತಿನಿ ಅಂತ ಏಳಿದ್ನಲ, ಅದು ಸಿಕ್ಕಿಲ್ಲ, ಅದ್ಕೆ ಬರದ ಯಸ್ರಲ್ಲಿ ಟೂರ್ ವಂಟವ್ನೆ.
ಏನಪ್ಪ, ಒಂದೂ ಅತ್ರ ಆಯ್ತಾ ಇಲ್ಲ. ಜನಗಳ್ ಪರವಾಗಿ ಓರಾಟ ಮಾಡ್ತಿನಿ ಅಂತ ಯಡೂರಪ್ಪ
ಏಳ್ತಾ ಅವ್ನೆ, ನೀನು ನೋಡಿದ್ರೆ ಇಂಗಂತಿಯ!
ಯಸ್ರು ಜನಗಳ್ದು, ಆದ್ರೆ ಕ್ಯಲ್ಸ ಆಗಬೇಕಿರದು ಯಡೂರಪ್ಪುಂದು.
ಸದಾನಂದಗೌಡ್ನೂ ಬರ ಬಂದಿರ ಕಡಿಕೆ ಟೂರ್ ಓಯ್ತಿನಿ ಅಂತ ಏಳ್ಯವ್ನೆ.
ಅವ್ನೂ ಅಷ್ಟೆಯ. ಯಡೂರಪ್ಪ ವಂಟ್ ಮ್ಯಾಲೆ ಇವ್ನು ಸುಮ್ನಿದ್ರೆ ಜನ ಏನಾರ ಅಂತರೆ ಅನ್ಕಂಡು ಅವ್ನೂ ವಂಟವ್ನೆ.
ಅಂಗಾರೆ ಇನ್ವಸಿ ದಿನ ಬುಟ್ಟು ಬ್ಯಾರೆ ಪಾಟ್ರಿಯವ್ರೂ ಟೂರ್ ವಂಡ್ ಬೌದು.
ಊ ಕಣಣ್ಣ. ಜನಗಳಿಗೆ ಬರ ಬಂದ್ರೆ ರಾಜಕೀಯದವ್ರಿಗೆ ಕ್ಯಲ್ಸ ದುಡ್ಡು ಸಿಗದು. ಇದ ಸಾಯಿನಾತ ಅನ್ನೋ ಪತ್ರಕತ್ರ ಯಾವಾಗ್ಲೋ ಏಳ್ಯವ್ನೆ. ಅದ್ಕೆ ಬರ, ಪ್ರವಾಹ ಬಂದ್ರೆ ಮಿನಿಷ್ಟ್ರು, ಯಮ್ಮಲ್ಲೆಗಳಿಗ್ಯಲ್ಲ ಕುಸಿ.
ಯುಡೂರಪ್ಪ, ಸದಾನಂದಗೌಡ ಯಲ್ಲ ಓದ್ರೆ ಜನಗಳಿಗೆ ಏನಾರ ಉಪಯೋಗ ಆದತೆ?
ಜನಗಳಿಗೆ ಏನಾದತೋ ನಂಗೊತ್ತಿಲ್ಲ. ಯಾಕೆ ಅಂದ್ರೆ ಇವ್ರು ಅಲ್ಲಿ ಓಗಿ ಅವ್ರ ಸಮಸ್ಯೆ ಪರಿಹರಿಸೋದ್ಕಿಂತ ಇವ್ರ ಬ್ಯಾಳೇಕಾಳ ಬೇಯಿಸ್ಕಳದೇ ಜಾಸ್ತಿ ಇತ್ರದೆ.
ಇವ್ರ ಬ್ಯಾಳೇಕಾಳು ಅಂದ್ರೆ?
ಅಂದ್ರೆ ಯಡೂರಪ್ಪ ಓಗಿರ ಮುಖ್ಯಮಂತ್ರಿ ಕುಚ್ರಿ ತಿಗ್ರ ತಗಬೇಕು. ಸದಾನಂದಗೌಡ ಸಿಕ್ಕಿರ ಕುಚ್ರಿ ಉಳಿಸ್ಕಬೇಕು. ಯಾಕೆ ಅಂದ್ರೆ ನಿಜ್ವಾಗಿ ಜನಗಳಿಗೆ ಏನ್ ಬೇಕು ಅನ್ನದ ಅದಿಕಾರಿಗಳಿಗೆ ಬಿಗಿ ಮಾಡಿ ಕ್ಯಲ್ಸ ಮಾಡ್ಸಿದ್ರೆ ಯಲ್ಲಾ ಆಯ್ತಳೆ. ಪ್ರಚಾರ ತಗಬೇಕು ಅನ್ನದೇ ಇವ್ರ ಉದ್ದೇಶ.
ಅಂಗಾರೆ ಜನ?
ಈಗ ಯಂಗವ್ರೋ ಅಂಗೆ ಕಾಲ ಆಕದು.
- ಈ.ಬಸವರಾಜು
No comments:
Post a Comment