ನಗು ನಗುತಾ ನಲಿ, ನಲಿ, ಯಾರೇ ಬೀಳಲಿ!
ಯಣ್ಣ, ಒಂದ್ ಸತಿ ಬಿದ್ ಮ್ಯಾಲೆ ತಿಗ್ರ ತಿಗ್ ಬೀಳಕ್ಕೋದರೆ?
ಅದ್ಯಂಗಾದತು? ಒಂದ್ ಸತಿ ಬಿದ್ ಮ್ಯಾಲೆ ಬುದ್ದಿ ಕಲಿಬೇಕಪ್ಪ. ಇಲ್ಲ ಅಂದ್ರೆ ಬುದ್ದಿ ಇಲ್ದೋರು ಅಂತರೆ. ಅದಿಲ್ರಿ, ಈಗ ಯಾರು ಬಿದ್ದ ಕಡಿಕೇ ಬೀಳಕೋಗಿರರು?
ಅದೆ ನಮ್ ಬಿದ್ರಿ ಸಾಯೇಬ್ರು.
ಅದ್ಯಾರಪ್ಪ ಬಿದ್ರಿ ಸಾಯಾಬ್ರು?
ನಮ್ ಸಂಕರ ಬಿದ್ರಿ ಸಾಯಾಬ್ರು ಕಣಣ್ಣ.
ಅವ್ರು ಯಾಕ್ ಬೀಳಕೋದ್ರು? ಯಾರಾರ ತಳ್ಳಿದ್ರೆ?
ಇಂಗೆ ನಮ್ ಯಡೂರಪ್ಪರ್ ಮಾತ ಕೇಳಿ ಬಿದ್ರಂತೆ.
ತಿಗ್ರ ಇನ್ನೊಂದ್ ಸತಿ ಯಾರ್ ಬೀಳ್ಸಿದ್ರಂತೆ?
ಇವ್ರನ್ನ ಐ.ಜಿ.ಪಿ ಮಾಡಿದ್ದು ಅಡ್ಡ ಮಾಗ್ರದಲ್ಲಂತೆ, ಅದ ಇನ್ವಬ್ರು ಕ್ವಚನ್ ಮಾಡಿದ್ರಂತೆ, ಹೈಕೋಟ್ರು ಬಿದ್ರಿ ಸಾಯಾಬ್ರು ಸೀಟ ಕಾಲಿ ಮಾಡ್ಸಿ ಇನ್ವಬ್ರಿಗೆ ಕೊಡಿ ಅಂತಂತೆ.
ಕೋಟ್ರು ಏಳಿದ್ ಮ್ಯಾಲೆ ಮಾಡ್ಲೇಬೇಕಲ್ವೆ?
ಅದ್ಕೆ ಬಿದ್ರಿ ಸಾಯಾಬ್ರು, ಸದಾನಂದಗೌಡ್ರು ಇಬ್ರೂ ಸೇರಿ ಸುಪ್ರೀಂ ಕೋಟ್ರಿಗೆ ಅಜ್ರಿ ಆಕಿ, ಆ ಸೀಟು ಬಿದ್ರಿ ಸಾಯಾಬ್ರಿಗೇ ಸೇಬ್ರೇಕು, ಕೊಡಿ ಅಂದ್ರಂತೆ.
ಸುಪ್ರೀಂ ಕೋಟ್ರು ಏನಂತಂತೆ.
ಅಲ್ಲ ಕಣ್ರಯ್ಯ, ಹಿಂದಿದ್ದ ವ್ಯಕ್ತೀನ ಮುಂದಕ್ಕೆ ತಳ್ಳಿ, ಮುಂದಕ್ಕೋಗ್ ಬೇಕಾದವ್ನ ಹಿಂದಕ್ ತಳ್ಳಿದ್ದೀರಲ, ನಿಮ್ಗೇನಾರ ಬುದ್ದಿ ಗಿದ್ದಿ ಇದ್ದತೆ? ಇದ ಕೇಳಕೆ ಡೆಲ್ಲೀತಕ ಬಂದಿದ್ದೀರಲ, ಮದ್ಲು ವಾಪಸ್ಸೋಗಿ ಅಂತ ಹೇಳ್ತಂತೆ, ಇನ್ನೇನ್ ಮಾಡದು ಅಂತವ ವಾಪಸ್ ಬಂದ್ರಂತೆ.
ಅಲ್ಲ ಕಣಣ್ಣ, ಯಳ್್ಡ ಜನ ನೀವು ಮಾಡಿರದು ತಪ್ಪು, ತಿದ್ದಿಕಳ್ಳಿ ಅಂತ ಏಳಿದ್ದ ಕೇಳದ್ ಬುಟ್ಟು ಡೆಲ್ಲೀತಕ ಓಗಿ ಈ ಬಹುಮಾನ ತರಬೇಕಾಗಿತ್ತೆ? ಓಗ್ಲಿ ಅದ ಕೇಳಿ ಬಿದ್ರಿ ಸಾಯಾಬ್ರು ಏನಂದ್ರಂತೆ?
ಮಕವ ಗಂಟಾಕ್ಯಂಡು ಊರ್ ಕಡಿಕೆ ವಂಟ್ರಂತೆ.
ಸದಾನಂದಗೌಸ್ರು ಏನಂದ್ರಂತೆ?
ಅವ್ರು ನಗ್ತಲೇ ಇದ್ರಂತೆ, ಅದ್ಕೆ ಕೋಟ್ರಿನವ್ರು ನಗು ನಗುತಾ ನಲಿ, ನಲಿ, ಯಾರೇ ಬೀಳಲಿ ಅಂತ ಏಳಿ ಕಳ್ಸಿದ್ರಂತೆ.
ಸದಾನಂದಗೌಡ್ರು ನಗ್ತಾ ಇದ್ದದ್ ನೋಡಿ ಬಿದ್ರಿ ಸಾಯಾಬ್ರು ಏನಂದ್ರಂತೆ?
ಈ ವಯ್ಯ ನಂಗೆ ಅವಮಾನ ಆಗಿದ್ರೂ ಇಂಗ್ ನಗ್ತಾ ಅವ್ನಲ, ಇವ್ನು ನನ್ನ ಪವ್ರಾಗ್ಯವ್ನೋ, ಇಲ್ಲ ವಿರೋದ್ವಾಗ್ಯವ್ನೋ ಒಂದು ತಿಳ್ತಾ ಇಲ್ಲ ಅನ್ಕಂಡು ಬಂದ್ರಂತೆ.
- ಈ.ಬಸವರಾಜು
No comments:
Post a Comment