ಸಂಘಪರಿವಾರ-ಬರಪರಿವಾರ-ಜನಪರಿವಾರ
ಯಣ್ಣ, ಪರಿವಾರ ಅಂದ್ರೇನು?
ಪರಿವಾರ ಅಂದ್ರೆ ಒಂದು ಗುಂಪು, ಒಂದೇ ತರ ಯೋಚನೆ ಮಾಡೋ ಗುಂಪು ಅಂತ. ಈಗ್ಯಾಕಣ್ಣ ಅದ್ರ ವಿಸ್ಯ?
ಇತ್ತೀಚಿಗೆ ಪರಿವಾರದ ಬಗ್ಗೆ ಅಲ್ಲಿ-ಇಲ್ಲಿ ಕೇಳ್ತಲೇ ಇದ್ದೀನಿ, ಅದ್ಕೆ ಅದೇನು ಅಂತ ತಿಳ್ಕಳನ ಅಂತ ನಿನ್ನತ್ರ ಬಂದೆ.
ಆಯ್ತು ಅದೇನ್ ಕೇಳಣ್ಣ. ಗೊತ್ತಿರದ ಏಳಕ್ಕೇನು? ಗೊತ್ತಿಲ್ದೇ ಇದ್ರೆ ಗೊತ್ತಿಲ್ಲ ಅಚಿತಿನಿ, ಯಾರಾರ ದ್ವಡ್ಡರ್ನ ಕೇಳಿ ತಿಳ್ಕಬೌದು.
ಸಂಘಪರಿವಾರ ಅಂತರಲ, ಅದೇನು? ಅವ್ರು ಏನ್ ಕ್ಯಲ್ಸವ ಒಟ್ಟಿಗೇ ಮಾಡ್ತರೆ?
ಸಂಘಪರಿವಾರ ಅಂದ್ರೆ ಬೀಜೇಪಿ ಪಕ್ಷವ ಬ್ಯಳ್ಸಕೆ ಉಟ್ಟಿಕಂಡಿರ ಗುಂಪುಗಳು. ಅವ್ರಿಗ್ರೆ ಒಂದು ದಮ್ರದ ಬಗ್ಗೆ ಮಾತ್ರ ಪ್ರೀತಿ. ಅದ್ರಿಂದ್ಲೇ ಯಲ್ಲಾ ಸಿಕ್ತದೆ ಅಂತ ನಂಬಿಕಂಡವ್ರೆ!
ಅಲ್ಲಿ ಯಾಯ್ರಾರಿರ್ತಾರೆ?
ಅಲ್ಲಿ ಎ.ಬಿ.ವಿ.ಪಿ, ಆರೆಸ್ಸೆಸ್, ವಿಶ್ವಹಿಂದೂಪರಿಷತ್ತು, ಶ್ರೀರಾಮಸ್ಯನ್ಯ, ಬಜರಂಗದಳ ಇತ್ಯಾದಿ, ಇತ್ಯಾದಿ..
ಅಂಗಾರೆ ವಿಜಾÕನ ಪರಿಷತ್ತೂ ಇದ್ರ ವಳ್ಗೆ ಸೇರ್ಕಂಡಿದ್ದತೆ?
ತೂ ಯಂತ ಮಾತಾಡ್ತಿಯ? ಅದ್ಕೂ ಸಂಘಪರಿವಾರಕ್ಕು ಅಷ್ಟಕಷ್ಟೆಯ.
ಇಷ್ಟೊಂದ್ ಯಸ್ರು ಇಟ್ಕಂಡ್ ಕ್ಯಲ್ಸ ಮಾಡ ಬದ್ಲು ಒಂದೇ ಯಸ್ರಿಟ್ಕಂಡು ಕ್ಯಲ್ಸ ಮಾಡದು ಸುಲಬ ಅಲ್ವೆ?
ಅಂಗಲ್ಲ, ವಬ್ವಬ್ರಿಗೆ ಒಂದೊಂದ್ ತರ ಔಸ್ತಿ ಕೊಡ್ತರಲ ಡಾಕ್ಟ್ರು, ಅಂಗೆ ಇವ್ರು ಒಂದೊಂದ್ ತರ ಜನವ ಯಳ್ಯಕೆ ಒಂದೊಂದ್ ತರ ಸಂಗ ಇಟ್ಕಂಡವ್ರೆ ಅಷ್ಟೆಯ. ಕ್ವನಿಗೆ ಯಲ್ಲಾ ನದಿಗಳೂ ಸಮುದ್ರ ಸೇರಂಗೆ ಇವ್ರು ಯಲ್ಲ ಒಂದೇ ಕಡಿಕೆ ಸೇರ್ತರೆ.
ಬರಪರಿವಾರ ಅಂದ್ರೇನು? ಅವ್ರದು ಯಾವ್ ದಮ್ರ?
ಬರ ಪರಿವಾರದಲ್ಲಿ ಕಾಂಗ್ರೇಸು, ಜೆ.ಡಿ.ಎಸ್ಸು, ಬೀಜೇಪಿ, ಯಡೂರಪ್ಪ ಯಲ್ಲ ಸೇರ್ಕತ್ತರೆ. ಅವ್ರು ಯಲ್ಲಾ ಸೇಕ್ರಂಡು ಜನರಿಗೆ ಬರ ಬಂದದೆ, ದುಡ್ ಕೊಡಿ, ಅಂಗೆ ನಮ್ ಬರನೂ ನೀಗ್ಸಿ ಅಂತ ಒಂದಾಗಿ ಓರಾಡ್ತಾ ಅವ್ರೆ.
ಅಂಗಾರೆ ಬರ ಪರಿವಾದ್ರಲ್ಲಿ ಯಲ್ಲಾ ಒಟ್ಟಿಗಿದ್ದರೆ?
ಹೆಚ್ಚೂ ಕಮ್ಮಿ ಯಲ್ಲ ಒಂದೇ ಗುಂಪು.
ಮತ್ತೆ ಯಡೂರಪ್ಪ ಕೇಂದ್ರ ಸಕ್ರಾರ ಇಷ್್ಟ ದುಡ್ ಕೊಡ್ಲೇಬೇಕು ಅಂತನೆ, ಕುಮಾರಣ್ಣ ಕೇಂದ್ರ ಸಕ್ರಾರ-ರಾಜ್ಯ ಸಕ್ರಾರ ಇಬ್ರೂ ಸೇರಿ ಇಷ್್ಟ ಕೊಡ್ಲೇಬೇಕು ಅಂತನೆ, ಸಿದ್ರಾಮಣ್ಣ ಕೇಂದ್ರಸಕ್ರಾರ ಕೊಟ್ಟದೆ, ಆ ದುಡ್ಡ ಸದಾನಂದಗೌಡ ಎಣಿಸಕಾಗ್ದೇ ಹಿಂದಕ್ಕೆ ಕೊಟ್ಟವ್ನೆ, ನನ್ ಕೈಲಾರ ಕೊಟ್ಟಿದ್ರೆ ಎಣಿಸಿ ಕೊಡ್ತಿದ್ದೆ ಅಂತನೆ, ಯಡೂರಪ್ಪ ಒಂದ್ ತಾಲೂಕಿಗೆ ಒಂದ್ ಕೋಟಿ ಕೊಡಿ ಅಂತನೆ, ಸದಾನಂದಗೌಡ ಒಂದ್ ತಾಲೂಕಿಗೆ ಮೂವತ್ತು ಸಾವ್ರ ಕೊಡ್ತಿನಿ, ದುಡ್ಡಿಗೆ ತ್ವಂದ್ರಿಲ್ಲ ಅಂತನೆ. ವಬ್ವಬ್ರು ಒಂದೊಂದ್ ತರ ಏಳ್ತಾ ಅವ್ರೆ, ಆದ್ರೂ ಅವ್ರು ಯಲ್ಲಾ ಬರಪರಿವಾರದವ್ರು ಅಂತಿಯಲ್ಲಣ್ಣ?
ಯಲ್ಲಾ ಏಳದು ಸುಳ್ಳೆಯ. ನಿಜ ಜನಗಳಿಗೆ ಮಾತ್ರ ಗೊತ್ತು. ಅವ್ರು ಯಲ್ಲಾ ಸೇರ್ಕಂಡು ಪ್ರಚಾರ ತಗಂಡು ಸಿಕ್ಕಿದಷ್್ಟ ದುಡ್ ತಗಳಕೆ ಬಂದವ್ರೆ. ಅದ್ಕೆಯ ಯಲ್ಲಾ ಒಂದೇ ಪರಿವಾರದವ್ರು ಅಂತ ನಾನು ಏಳದು.
ಅಂಗಾರೆ ಜನರ ತ್ವಂದ್ರೆ ಪರಿಹರಿಸೋರ್ಯಾರು?
ನಾವ್ಯಲ್ಲ ಸೇರ್ಕಂಡು ಜನಪರಿವಾರ ಅಂತ ಮಾಡಿಕಂಡು ಈ ಸಂಘಪರಿವಾರ ಮತ್ತೆ ಬರಪರಿವಾರ ಯಳ್ಡೂ ಗುಂಪಿಗೂ ಲಾತ ಕೊಟ್ರೆ ನಮ್ ಸಮಸ್ಯೆ ಪರಿಹಾರ ಆಗ್ಬೌದು. ಆದ್ರೂ ಅಷ್್ಟ ಸುಲಭ ಅಲ್ಲ. ಬಾಳ ಪ್ರಯತ್ನ ಮಾಡ್ಬೇಕು.
- ಈ.ಬಸವರಾಜು
No comments:
Post a Comment