ವಳ್ಳೆ ಕಾಲ ಬಂದದೆ..
ವಳ್ಳೆ ಕಾಲ ಬರ್ತಾ ಅದೆ, ವಳ್ಳೆ ಕಾಲ ಬರ್ತಾ ಅದೆ..
ಇದೇನಣ್ಣ, ಕಾಲ ದಿನೇ ದಿನೇ ಕೆಟ್ಟೋಯ್ತಾ ಅದೆ ಅಂತವ ಯಲ್ಲಾರೂ ಗೋಳಾಡ್ತಾ ಅವ್ರೆ, ನೀನು ನೋಡಿದ್ರೆ ವಳ್ಲೆ ಕಾಲ ಬತ್ತಾ ಅದೆ ಅಂತೀಯಲ, ಅದೇನು?
ನೋಡು, ವಬ್ರಿಗೆ ಒಂದೊಂದ್ ಕಾಲ ಚನ್ನಾಗಿತ್ರದೆ. ಈಗ ನೋಡು, ನಂಗೆ ಈ ಕಾಲ ಚನ್ನಾಗ್ಯದೆ ಅನ್ನುಸ್ತಾ ಅದೆ, ಇನ್ವಬ್ರಿಗೆ ಚನ್ನಾಗಿಲ್ಲ ಅನುಸ್ತದೆ. ಅಂಗೆ ಕಾಲ ಅನ್ನದು ನೋಡದ್ರು ಮ್ಯಾಲಿರದು.
ಯಣ್ಣ, ಆಯ್ತು, ಈಗ ನಿಂಗೆ ಕಾಲ ಚನ್ನಾಗ್ಯದೆ ಅನ್ನಕೆ ಏನು ಕಾರಣ ಅನ್ನದ್ನಾದ್ರು ಏಳು.
ಯಾಕೋ ಯಾವ್ದೂ ಯಲೆಕ್ಷನ್ನು ಇಲ್ದೆ ನಾಲಿಗೆ ಕಡೀತಿತ್ತು. ಈ ಸಕ್ರಾರ ಕ್ಯಳಿಕ್ ಬೀಳ್ತದೆ, ಯಲೆಕ್ಷನ್ನು ಬತ್ತದೆ ಅನ್ನಕಂಡಿದ್ದೆ, ಆದ್ರೆ ಈ ಸದಾನಂದಗೌಡ ಯಂಗೋ ತೂಗಿಸ್ಕಂಡು ಓಯ್ತನೇ ಅವ್ನೆ. ಬೇಜಾರಾಗೋಗಿತ್ತು. ಈಗ ಒಂದ್ ಯಲೆಕ್ಷನ್ ಬಂದದೆ.
ಅದ್ಯಾವ್ ಯಲೆಕ್ಷನ್ನಣ್ಣ?
ಅದೆ ಕಣೊ, ಕಸಾಪ ಯಲೆಕ್ಷನ್ನು?
ಅದೇನಣ್ಣ, ಸೊಸೈಟಿಯೋ, ಇಲ್ಲ ಬ್ಯಾಂಕೊ?
ಅದ್ಕೆ ನಿಂಗೆ ಬುದ್ದಿ ಇಲ್ಲ ಅನ್ನದು. ಅದು ಕನ್ನಡ ಸಾಹಿತ್ಯ ಪರಿಷತ್ತು. ಅದ್ಕೆ ಅಧ್ಯಕ್ಷರನ್ನ ಆಯ್ಕೆ ಮಾಡಕ್ಕೆ ಯಲೆಕ್ಷನ್ನು ನಡಿತಾ ಅದೆ.
ಅದ್ಕೂ, ನೀನು ವಳ್ಳೆ ಕಾಲ ಬತ್ತಾ ಅದೆ ಅನ್ನದ್ಕೂ ಏನು ಸಂಬಂಧ?
ನೋಡಣ್ಣ, ಹಿಂದೆ ಕಸಾಪ ಯಲೆಕ್ಷನ್ನು ಅಂದ್ರೆ ಒಂದ್ ಪೋಸ್್ಟ ಕಾಡ್್ರ ಬರ್ದು ಓಟ್ ಕೊಡಿ ಅನ್ನರು. ಅಮ್ಯಾಲೆ ನಿದಾನುಕ್ಕೆ ಕಾಪಿ ಕೊಡ್ಸಕ್ಕೆ ಸುರು ಮಾಡಿದ್ರು. ಈಗ ಬ್ಯಾರೆ ಯಲೆಕ್ಷನ್ ಲ್ಯವೆಲ್ಲಿಗೆ ಇದೂ ಬಂದದೆ. ಅದ್ಕೆ ವಳ್ಳೇಕಾಲ ಅನ್ನದು.
ಅಂದ್ರೆ ದುಡ್ಡು, ಯಂಡ, ಬಾಡು ಕೊಟ್ಟರೆ?
ಊ ಮತ್ತೆ. ಯಲೆಕ್ಷನ್ನು ಅಂದ್ರೆ ಅದಿಲ್ದೇ ಇದ್ರೆ ಆದತೆ? ಒಂತರ ಸಪ್ಪೆ ಆಗಿತ್ತು. ಈಗ ಮಟನ್ ಊಟ, ಡ್ರಿಂಕ್ಸು ಕೊಡ್ತಾ ಇದ್ದರಂತೆ. ಅದ್ಕೆ ವಳ್ಳೇ ಕಾಲ ಬಂದದೆ ಅಂದಿದ್ದು ನಾನು.
ಅಲ್ಲ, ನಮ್ಮಂತವೇನೋ ಮಟನ್ ಊಟ, ಯಂಡ ಈಸ್ಕಂಡು ಓಟಾಕ್ತಿವಿ, ಸಾಯಿತಿಗಳೂ ಅಂಗೆ ಮಾಡ್ಯರೆ?
ಏ.. ಅವ್ರು ಮನುಸ್ರೆಯ. ಜ್ವತಿಗೆ ಕತೆ, ಕವ್ನ ಬರೀವಾಗ ಏನಾರ ತಗಂಡ್ರೆ ಚನ್ನಾಗಿ ಬರೀಬೌದಂತೆ.
ಅಂಗಾರೆ ತಗಳ್ದೆ ಇರರು ಬಯ್ರದಿಲ್ಲ ಅಂತಿಯ?
ಅಂಗಲ್ಲ, ಕ್ಯಲುವ್ರು ಅಂಗೆ ಬದ್ರರಂತೆ. ಕ್ಯಲುವ್ರಿಗೆ ಅದಿದ್ರೆ ಚನ್ನಾಗಿ ಬರೀತರಂತೆ. ಅಂಗಾಗಿ ಯಲೆಕ್ಷನ್ನಲೂ ಅದು ಬಂದಿರಂಗದೆ.
ಒಟ್ನಲ್ಲಿ ಕಸಾಪ ಯಲೆಕ್ಷನ್ನೂ ಸ್ಟ್ಯಾಂಡಡ್್ರ ಆಯ್ತು ಬುಡು.
- ಈ.ಬಸವರಾಜು
No comments:
Post a Comment