Wednesday, 11 April 2012

ಈಸ್ವುರಪ್ಪರ್ ಮನೆಗೆ ಹಾವು ನುಗ್ಯದಂತೆ



ಈಸ್ವುರಪ್ಪರ್ ಮನೆಗೆ ಹಾವು ನುಗ್ಯದಂತೆ
ಯಣ್ಣ ಈಸ್ವುರಪ್ಪರ್ ಮನೆ ವಳಿಕೆ ಹಾವು ನುಗ್ಯದಂತೆ, ನಿಜ್ವೆ?
ಯಾವ್ ಈಸ್ವುರಪ್ಪ?
ಅದೆ, ಬಿಜೆಪಿ ಅಧ್ಯಕ್ಷ ಈಸ್ವುರಪ್ಪ ಅವ್ರ ಮನಿಗಂತೆ, ಅಂಗಂತವ ಪೇಪ್ರಲ್ಲೇ ಕೊಟ್ಟವ್ರೆ ಈಸ್ವುರಪ್ಪ.
ಕಾಡ್ಯಲ್ಲಾನೂ ಕಡ್ದು ನಾಡು ಮಾಡಿರದ್ರಿಂದ ಹಾವುಗಳಿಗೆ ಇರಕೆ ಜಾಗ ಇಲ್ಲ, ಅಂಗಾಗಿ ಒಂದೊಂದ್ ಸತಿ ಮನಿಗೂ ನುಗ್ತವೆ, ನ್ಯನ್ನೆ ದಿನ ಏರೋಪ್ಲೇನ್ ವಳಿಕೇ ನುಗ್ಗಿತ್ತಂತೆ, ಏನ್ ಮಾಡಕಾಯ್ತದೇಳು? ಆಚಿಗೋಡುಸ್ಬೇಕು ಇಲ್ಲ ಅಂದ್ರೆ ಹಾವಾಡ್ರಿಗ್ರ ಕರ್ದು ಹಿಡಿಸ್ಬೇಕು, ಅದ ಬುಟ್ಟು ಪೇಪ್ರಲ್ಲಿ ಕೊಟ್ರೇನ್ ಉಪ್ಯೋಗ? ಯಂತ ಹಾವಂತೆ?
ಅದ್ಯಾವ್ದೋ ಜಾತಿ ಹಾವಂತೆ.
ಯಾವ್ ಜಾತಿ ಹಾವಂತೆ ಏಳಣ್ಣ.
ಅದೇನೂ ಕೊಟ್ಟಿಲ್ಲಪ್ಪ. ಒಟ್ನಲ್ಲಿ ನಮ್ ಮನೆವಳಿಕೆ ಜಾತಿ ಅನ್ನೋ ಹಾವು ನುಗ್ಯದೆ ಅಂತ ಏಳ್ಯವ್ರೆ.
ಓ.. ಈಗ ಗೊತ್ತಾಯ್ತು ಬುಡು. ಅದು ಹಾವೂ ಅಲ್ಲ, ಅವ್ರ ಮನಿಗೆ ನುಗ್ಯೂ ಇಲ್ಲ. ಜಾತಿ ಅನ್ನೊ ಭೂತ ನಮ್ ಪಾಟ್ರಿವಳಿಕೆ ನುಗ್ಯದೆ ಅಂತ ಬೇಜಾರ್ ಮಾಡ್ಕಂಡು ಅವ್ರೇಳಿರದು. ನೀನು ಒಂದು ಅಂದ್ರೆ ಇನ್ನೊಂದು ಅಂತಿಯ.
ಜಾತಿ ನುಗ್ಯದೆ ಅಂದ್ರೇನಣ್ಣ?
ಜಾತಿ ನುಗ್ಯದೆ ಅಂದ್ರೆ, ಅವ್ರ ಪಾಟ್ರಿ ವಳಿಗರ ಒಂದೊಂದ್ ಜಾತಿ ಜನ ಒಂದ್ ಗುಂಪ್ ಮಾಡ್ಕಳದು, ಅವ್ರಿಗೆ ಸ್ಥಾನ ಮಾನ ಕೊಡ್ಬೇಕು ಅಂತ ಕೇಳದು, ನಮ್ ಜಾತಿಯಿಂದ್ಲೆ ನಿಮ್ ಪಾಟ್ರಿ ನಡೀತಿರದು ಅಂತ ಹೇಳದು, ಇದ್ಕೆ ಜಾತಿ ನುಗ್ಯದೆ ಅಂತರೆ.
ಅದು ಈಗ ಗೊತ್ತಾಯ್ತಂತ? ಮನ್್ಸ ಅನ್ನನು ಒಂದೊಂದ್ ಜಾತಿಗೆ ಸೇರಿರ್ತನಪ್ಪ. ಅವ್ನು ಪಾಟ್ರಿ ವಳಿಕೆ ಬಂದ್ ಮ್ಯಾಲೆ ಆ ಜಾತಿ ನುಗ್ಯದೆ ಅಂತ ಅಲ್ವೆ?
ಅಂಗಲ್ಲ ಕಣಣ್ಣ, ಜಾತಿ ಅನ್ನದು ಇತ್ತೀಚ್ಕೆ ನಾವ್ ಮಾಡಿಕಂಡಿರದು, ಮನುಸ್ರು ಅಂದ್ರೆ ಯಲ್ರೂ ಒಂದೆಯ, ಅಂತದ್ರಲಿ ಜಾತಿ ಗುಂಪು ಮಾಡ್ಬಾದ್ರು ಅಂತ ಈಸ್ವರುಪ್ಪ ಹೇಳಿರದು.
ಮತ್ತೆ ಅವ್ರ್ರ ಪಾಟ್ರಿಲಿ ಹಿಂದುಗಳ್ಯಲ್ಲ ಒಂದು ಅಂತ ಏಳ್ತರೆ. ಉಳಿದ ಸಾಬ್ರು, ಕ್ರಿಶ್ಚನ್ರು, ಜೈನ್ರು ಅವ್ರು ಎಲ್ಲಿಗೋಗ್ಬೇಕು? ಅವ್ರು ಏಳ್ತಾ ಇರದೂ ತಪ್ಪೇ ಅಲ್ವೆ?
ಅದ್ಕೆ ಕಣಣ್ಣ, ಮಾಡಿದ್ದುಣ್ಣೋ ಮಾರಾಯ ಅನ್ನದು. ಅವ್ರು ಹಿಂದುಗಳ್ಯಲ್ಲ ಒಂದು ಅಂತ ಏಳ್ಕಂಡು ಓಟ್ ತಗಳಕ್ ಸುರು ಮಾಡಿದ್ರು. ಇದು ತಪ್ಪು ಅಂತ ಗೊತ್ತಿದ್ರೂ ಕ್ಯಲುವ್ರು ಸುಮ್ಕೆ ಇದ್ರು. ಇಷ್ಟೆ ಆದ್ ಮ್ಯಾಲೆ ಜಾತಿಯವ್ರೆಲ್ಲ ಒಂದು ಅಂದ್ರೆ ಏನ್ ತಪ್ಪು ಅನುಸ್ತು. ಅದ್ರಿಂದ ಅವ್ರಿಗೆ ಅನುಕೂಲಾನೂ ಇತ್ತು. ಸುರು ಮಾಡಿಕಂಡ್ರು. ಈಗ ಜಾÕನೋದಯ ಆದಂಗೆ ಈಸ್ವುರಪ್ಪ ಈ ತರ ಏಳ್ತಾ ಅವ್ನೆ. ಯಲ್ಲ ಅಷ್ಟೆಯ, ಅವ್ರಿಗೆ ಹೆಲ್್ಪ ಆಗ ತಕ ಸುಮ್ಕಿತ್ರರೆ. ತ್ವಂದ್ರೆ ಆದಾಗ ಇಂಗಾಗ್ ಬಾರ್ದಾಗಿತ್ತು ಅಂತರೆ. ಅದ್ಕೆ ನಾವು ಮಾಡಿದ್ದುಣ್ಣೋ ಮಾರಾಯ ಅಂತ ಏಳಿ ಸುಮ್ಕಾಗ್ ಬೇಕು ಅಷ್ಟೆಯ.
- ಈ.ಬಸವರಾಜು

No comments:

Post a Comment